ಕರ್ನಾಟಕ

karnataka

ETV Bharat / business

ದೆಹಲಿ, ಮುಂಬೈ- ಲಂಡನ್​ ನಡುವೆ ನಾನ್​ ಸ್ಟಾಪ್ ವಿಮಾನ ಹಾರಾಟ: ಯಾವ ದಿನ ಶುರು? - ಸ್ಪೈಸ್​ಜೆಟ್

ಸ್ಪೈಸ್‌ಜೆಟ್ ಯುಕೆಗೆ ನೇರ ವಿಮಾನಗಳನ್ನು ನಿರ್ವಹಿಸುವ ಮೊದಲ ಭಾರತೀಯ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಯಾಗಲಿದೆ. ಈ ವಿಮಾನಗಳು ಯುಕೆ ಜೊತೆಗಿನ ಏರ್ ಬಬಲ್ ಒಪ್ಪಂದದಡಿ ಕಾರ್ಯನಿರ್ವಹಿಸಲಿವೆ.

SpiceJet
ಸ್ಪೈಸ್ ಜೆಟ್

By

Published : Oct 5, 2020, 5:22 PM IST

ನವದೆಹಲಿ:ಬಜೆಟ್ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್, ಡಿಸೆಂಬರ್ 4ರಿಂದ ದೆಹಲಿ ಮತ್ತು ಮುಂಬೈ ಒಳಗೊಂಡು ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣಕ್ಕೆ ನೇರ ವಿಮಾನಗಳ ಸೇವೆ ಪ್ರಾರಂಭಿಸಲಿದೆ.

ಸ್ಪೈಸ್‌ಜೆಟ್ ಯುಕೆಗೆ ವಿಮಾನಗಳನ್ನು ನಿರ್ವಹಿಸುವ ಮೊದಲ ಭಾರತೀಯ ಕಡಿಮೆ-ವೆಚ್ಚದ ವಿಮಾನಯಾನ ಸಂಸ್ಥೆಯಾಗಲಿದೆ. ಈ ವಿಮಾನಗಳು ಯುಕೆ ಜೊತೆಗಿನ ಏರ್ ಬಬಲ್ ಒಪ್ಪಂದದಡಿ ಕಾರ್ಯನಿರ್ವಹಿಸಲಿವೆ.

ವಿಮಾನಯಾನವು ದೆಹಲಿಯಿಂದ ಎರಡು ಬಾರಿ ಮತ್ತು ಮುಂಬೈನಿಂದ ವಾರಕ್ಕೊಮ್ಮೆ ಸೇರಿ ವಾರಕ್ಕೆ ಮೂರು ಬಾರಿ ಲಂಡನ್‌ಗೆ ಪ್ರಯಾಣ ಬೆಳಸಲಿವೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details