ಕರ್ನಾಟಕ

karnataka

ETV Bharat / business

ಪ್ರಯಾಣಿಕರಿಗೆ ಕೋವಿಡ್ ವಿಮಾ ರಕ್ಷಣೆ ಘೋಷಿಸಿದ ಸ್ಪೈಸ್ ಜೆಟ್ - ಕೋವಿಡ್ 19 ವಿಮೆ

ವಿಮೆಯು ಆಸ್ಪತ್ರೆಯ ವೆಚ್ಚ ಮತ್ತು ಆಸ್ಪತ್ರೆ ಪೂರ್ವ ಮತ್ತು ಚಿಕಿತ್ಸಾ ನಂತರದ ಎಲ್ಲಾ ವೆಚ್ಚಗಳನ್ನು ಕ್ರಮವಾಗಿ 30 ಮತ್ತು 60 ದಿನಗಳವರೆಗೆ ಒಳಗೊಳ್ಳುತ್ತದೆ. ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಬಳಿಕ ಔಷಧಿ ಮತ್ತು ಕನ್ಸಲ್ಟೇಶನ್ ವೆಚ್ಚ ಸಹ ಒಳಗೊಂಡಿರುತ್ತದೆ ಎಂದು ಪ್ರಕಟಣೆಯಲ್ಲಿ ಸ್ಪೈಸ್​ಜೆಟ್​ ತಿಳಿಸಿದೆ.

SpiceJet
ಸ್ಪೈಸ್ ಜೆಟ್

By

Published : Jul 8, 2020, 7:14 PM IST

ನವದೆಹಲಿ: ಪ್ರಯಾಣಿಕರ ಆತ್ಮವಿಶ್ವಾಸ ವೃದ್ಧಿಸಲು ವಿಮಾನಯಾನ ಸಂಸ್ಥೆಯಾದ ಸ್ಪೈಸ್‌ಜೆಟ್, ಕೋವಿಡ್ ಸಂಬಂಧಿತ ವಿಮಾ ರಕ್ಷಣೆ ಆಯ್ಕೆ ಮಾಡುವ ಸೌಲಭ್ಯ ಒದಗಿಸುವುದಾಗಿ ಬುಧವಾರ ಪ್ರಕಟಿಸಿದೆ.

ಈ ವಿಮೆ 12 ತಿಂಗಳ ಅವಧಿವರೆಗೂ ಮಾನ್ಯವಾಗಿರುತ್ತದೆ. ವರ್ಷಕ್ಕೆ 50,000 ರೂ.ಗಳಿಂದ 3,00,000 ರೂ.ವರೆಗೆ 443 ರಿಂದ 1,564 ರೂ. (ಜಿಎಸ್‌ಟಿ ಸೇರಿ) ಪ್ರೀಮಿಯಂ ಪಾವತಿಸಬಹುದಾಗಿದೆ.

ವಿಮೆಯು ಆಸ್ಪತ್ರೆಯ ವೆಚ್ಚ ಮತ್ತು ಆಸ್ಪತ್ರೆ ಪೂರ್ವ ಮತ್ತು ಚಿಕಿತ್ಸಾ ನಂತರದ ಎಲ್ಲಾ ವೆಚ್ಚಗಳನ್ನು ಕ್ರಮವಾಗಿ 30 ಮತ್ತು 60 ದಿನಗಳವರೆಗೆ ಒಳಗೊಳ್ಳುತ್ತದೆ. ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಬಳಿಕ ಔಷಧಿ ಮತ್ತು ಕನ್ಸಲ್ಟೇಶನ್ ವೆಚ್ಚವನ್ನು ಸಹ ಒಳಗೊಂಡಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಮಾ ರಕ್ಷಣೆ ನೀಡಲು ಸ್ಪೈಸ್ ಜೆಟ್ ತನ್ನ ಡಿಜಿಟ್ ಇಲ್​ನೆಸ್​ ಗ್ರೂಪ್ ಇನ್ಶುರೆನ್ಸ್ ಪಾಲಿಸಿಯ ಮೂಲಕ ಗೋ ಡಿಜಿಟ್ ಜನರಲ್ ಇನ್ಶುರೆನ್ಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ವಿಮೆಯು ಕೊಠಡಿ ಅಥವಾ ಐಸಿಯು ಬಾಡಿಗೆಗೂ ಯಾವುದೇ ನಿರ್ಬಂಧ ಇಲ್ಲ.

ABOUT THE AUTHOR

...view details