ನವದೆಹಲಿ:ಪ್ರೀಮಿಯಂ ಸೆಡಾನ್ ಸೂಪರ್ಬ್ನ ಹೊಸ ಮರು ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿರುವುದಾಗಿ ಜೆಕ್ ವಾಹನ ತಯಾರಕ ಸ್ಕೋಡಾ ತಿಳಿಸಿದೆ. ಇದರ ಬೆಲೆ 31.99 ಲಕ್ಷ ರೂ.ಯಿಂದ (ಎಕ್ಸ್ ಶೋ ರೂಂ) ಆರಂಭವಾಗುತ್ತದೆ.
ಸೆಡಾನ್ ಸೂಪರ್ಬ್ ಎರಡು ರೂಪಾಂತರಗಳಲ್ಲಿ ಮಾರುಕಟ್ಟೆ ಬರುತ್ತಿದೆ. ಸ್ಕೋಡಾ ಸೂಪರ್ಬ್ ಸ್ಪೋರ್ಟ್‌ಲೈನ್ ಬೆಲೆ 31.99 ಲಕ್ಷ ರೂ. ಮತ್ತು ಲೌರಿನ್/ ಕ್ಲೆಮೆಂಟ್ ದರ 34.99 ಲಕ್ಷ ರೂ. (ಎಲ್ಲಾ ಬೆಲೆ ಸೇರಿ ಎಕ್ಸ್ ಶೋ ರೂಂ) ಎಂದು ಸ್ಕೋಡಾ ಆಟೋ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಮಾದರಿಯು 2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಸ್ಕೋಡಾ ಸೂಪರ್ಬ್ ಭಾರತದ ಅನೇಕ ಐಷಾರಾಮಿ ಗ್ರಾಹಕರ ಅಭಿರುಚಿಯನ್ನು ಗಮನದಲ್ಲಿ ಇರಿಸಿಕೊಂಡು ತಯಾರಿಸಲಾಗಿದೆ ಎಂದು ಸ್ಕೋಡಾ ಆಟೋ ಇಂಡಿಯಾ ಬ್ರಾಂಡ್ ನಿರ್ದೇಶಕ ಝಾಕ್ ಹೋಲಿಸ್ ತಿಳಿಸಿದರು.