ಕರ್ನಾಟಕ

karnataka

ETV Bharat / business

ಸ್ಕೋಡಾ ಆಟೋ ಇಂಡಿಯಾದಿಂದ ವಾಹನಗಳಿಗೆ ವಾರಂಟಿ, ನಿರ್ವಹಣೆ ಸೇವೆ ವಾಯ್ದೆ ವಿಸ್ತರಣೆ! - ಕೋವಿಡ್-19 ಸಾಂಕ್ರಾಮಿಕ

ಏಪ್ರಿಲ್ ಮತ್ತು ಜೂನ್ ನಡುವೆ ವಾರಂಟಿ, 'ವೇಳಾಪಟ್ಟಿ ನಿರ್ವಹಣೆ ಸೇವೆಗಳು' ಮತ್ತು 'ಸೂಪರ್‌ಕೇರ್ ನಿರ್ವಹಣೆ ಯೋಜನೆಗಳು' ಹೊಂದಿರುವ ವಾಹನಗಳಿಗೆ ಈ ವಿಸ್ತರಣೆ ಅನ್ವಯವಾಗುತ್ತದೆ ಎಂದು ಕಂಪನಿ ಪ್ರಕಟಣೆಯಲ್ಲಿ ಹೇಳಿದೆ.

Skoda
Skoda

By

Published : May 27, 2021, 9:36 PM IST

ನವದೆಹಲಿ: ದೇಶದ ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು 2021ರ ಜುಲೈ 31ರವರೆಗೆ ತನ್ನ ವಾಹನಗಳಿಗೆ ಖಾತರಿ ಮತ್ತು ನಿರ್ವಹಣೆ ಸೇವೆಗಳನ್ನು ವಿಸ್ತರಿಸಿದೆ ಎಂದು ಸ್ಕೋಡಾ ಆಟೋ ಇಂಡಿಯಾ ತಿಳಿಸಿದೆ.

ಏಪ್ರಿಲ್ ಮತ್ತು ಜೂನ್ ನಡುವೆ ವಾರಂಟಿ, 'ವೇಳಾಪಟ್ಟಿ ನಿರ್ವಹಣೆ ಸೇವೆಗಳು' ಮತ್ತು 'ಸೂಪರ್‌ಕೇರ್ ನಿರ್ವಹಣೆ ಯೋಜನೆಗಳು' ಹೊಂದಿರುವ ವಾಹನಗಳಿಗೆ ಈ ವಿಸ್ತರಣೆ ಅನ್ವಯವಾಗುತ್ತದೆ ಎಂದು ಕಂಪನಿ ಪ್ರಕಟಣೆಯಲ್ಲಿ ಹೇಳಿದೆ.

ಇಂತಹ ಅಭೂತಪೂರ್ವ ಕಾಲದಲ್ಲಿ ನಮ್ಮ ಗ್ರಾಹಕರಿಗೆ ನಿರಂತರ ಬೆಂಬಲ ನೀಡುವುದು ಕಂಪನಿಯ ಆದ್ಯತೆಯಾಗಿದೆ ಎಂದು ಸ್ಕೋಡಾ ಆಟೋ ಇಂಡಿಯಾ ಬ್ರಾಂಡ್ ನಿರ್ದೇಶಕ ಝಾಕ್ ಹೋಲಿಸ್ ಹೇಳಿದರು.

ಏಪ್ರಿಲ್ ಮತ್ತು ಜೂನ್ ನಡುವಿನ ನಮ್ಮ ವಾರಂಟಿ, ವೇಳಾಪಟ್ಟಿ ನಿರ್ವಹಣೆ ಸೇವೆಗಳು ಮತ್ತು ಸೂಪರ್ ಕೇರ್ ನಿರ್ವಹಣೆ ಯೋಜನೆಗಳನ್ನು 2021ರ ಜುಲೈ 31ರವರೆಗೆ ವಿಸ್ತರಿಸಲು ನಾವು ನಿರ್ಧರಿಸಿದ್ದೇವೆ ಎಂದರು.

ABOUT THE AUTHOR

...view details