ನವದೆಹಲಿ:ಸಿಗ್ನಲ್ ತನ್ನ ದೊಡ್ಡ ಪ್ರತಿಸ್ಪರ್ಧಿ ವಾಟ್ಸಾಪ್ ಬಗೆಗಿನ ಬಳಕೆದಾರರ ಗೌಪ್ಯತೆ ಚರ್ಚೆಯ ನೇರ ಪರಿಣಾಮವಾಗಿ ಡೌನ್‌ಲೋಡ್ ಪ್ರಮಾಣ ಏರಿಕೆ ಕಂಡಿದೆ. ಅದರ ಸಹ-ಸಂಸ್ಥಾಪಕ ಬ್ರಿಯಾನ್ ಆಕ್ಟನ್, ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಗೌಪ್ಯತಾ ನೀತಿಯ ಸರಳ ಮತ್ತು ನೇರವಾದ ಸೇವಾ ನಿಯಮಗಳೊಂದಿಗೆ ಅವಕಾಶಗಳನ್ನು ಲಾಭ ಮಾಡಿಕೊಳ್ಳಲು ಆಶಿಸುತ್ತಿದೆ ಎಂದು ಹೇಳಿದರು.
ವಾಟ್ಸಾಪ್ ತನ್ನ ಗೌಪ್ಯತೆ ನೀತಿ ನವೀಕರಿಸಿದ ನಂತರ ಲಾಭರಹಿತವಾದ ಸಿಗ್ನಲ್ ಜಾಗತಿಕವಾಗಿ ಲಕ್ಷಾಂತರ ಡೌನ್‌ಲೋಡ್‌ಗಳನ್ನು ಕಂಡಿದೆ. ವಾಟ್ಸಾಪ್ ಬಳಕೆದಾರರ ಡೇಟಾ ಫೇಸ್‌ಬುಕ್‌ನ ಇತರ ಉತ್ಪನ್ನ ಮತ್ತು ಸೇವೆಗಳಿಗೆ ಲಿಂಕ್ ಮಾಡುವ ವಿವಾದಾತ್ಮಕ ಬದಲಾವಣೆ ಒಳಗೊಂಡಿದೆ ಎಂಬ ವದಂತಿ ಸಾಕಷ್ಟು ಸುದ್ದಿ ಮಾಡಿತ್ತು.
ಸುದ್ದಿ ಸಂಸ್ಥೆ ಜತೆ ಮಾತನಾಡಿದ ಆಕ್ಟನ್, ಭಾರತೀಯ ಮಾರುಕಟ್ಟೆ ಎಲ್ಲಾ ನಿರೀಕ್ಷೆಗಳನ್ನು ಸಂಪೂರ್ಣವಾಗಿ ಮೀರಿದೆ ಎಂದು ನಾನು ಭಾವಿಸುತ್ತೇನೆ. ಕಳೆದ ಕೆಲವು ದಿನಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಕಂಪನಿಗೆ ಬಳಕೆದಾರರ ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರೇರೇಪಿಸಿದೆ ಎಂದರು.