ಕರ್ನಾಟಕ

karnataka

ETV Bharat / business

ದೇಶದಲ್ಲಿ ಸ್ಪುಟ್ನಿಕ್​ ಲಸಿಕೆ ತಯಾರಿಕೆಗೆ ರೆಡ್ಡಿಸ್ ಜತೆ ಶಿಲ್ಪಾ ಮೆಡಿಕೇರ್ ಒಪ್ಪಂದ - ಕೋವಿಡ್ ಲಸಿಕೆ

ಡಾ. ರೆಡ್ಡಿಸ್​​ ಸ್ಪುಟ್ನಿಕ್ ತಂತ್ರಜ್ಞಾನವನ್ನು ಎಸ್‌ಬಿಪಿಎಲ್‌ಗೆ ವರ್ಗಾಯಿಸಲು ಅನುಕೂಲವಾಗಲಿದೆ. ಒಪ್ಪಂದದ ಪ್ರಕಾರ, ಎಸ್‌ಬಿಪಿಎಲ್ ಲಸಿಕೆ ತಯಾರಿಕೆಯ ಜವಾಬ್ದಾರಿಯನ್ನು ಹೊಂದಿದ್ದರೆ, ಡಾ. ರೆಡ್ಡಿಸ್​ ಅದರ ಮಾರುಕಟ್ಟೆ ಪ್ರದೇಶಗಳಲ್ಲಿ ಲಸಿಕೆ ವಿತರಣೆ ಮತ್ತು ಮಾರಾಟದ ಜವಾಬ್ದಾರಿ ವಹಿಸಿಕೊಂಡಿದೆ.

Sputnik
Sputnik

By

Published : May 17, 2021, 4:22 PM IST

ನವದೆಹಲಿ:ರಷ್ಯಾದ ಕೋವಿಡ್-19 ಲಸಿಕೆ ಸ್ಪುಟ್ನಿಕ್ ವಿ ತಯಾರಿಸಲು ಡಾ. ರೆಡ್ಡಿಸ್​ ಲ್ಯಾಬೊರೇಟರಿ ಜತೆ ಒಪ್ಪಂದ ಮಾಡಿಕೊಂಡಿದೆ ಎಂದು ಔಷಧ ಸಂಸ್ಥೆ ಶಿಲ್ಪಾ ಮೆಡಿಕೇರ್ ತಿಳಿಸಿದೆ.

ಕಂಪನಿಯು ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಶಿಲ್ಪಾ ಬಯೋಲಾಜಿಕಲ್ಸ್ ಪ್ರೈವೇಟ್ ಲಿಮಿಟೆಡ್ (ಎಸ್‌ಬಿಪಿಎಲ್) ಮೂಲಕ ಡಾ. ರೆಡ್ಡಿಸ್​ ಪ್ರಯೋಗಾಲಯಗಳೊಂದಿಗೆ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ಆರ್​& ಡಿ ಜತೆಗೆ ಕರ್ನಾಟಕದ ಧಾರವಾಡ ಪ್ಲಾಂಟ್​​ನಲ್ಲಿ ತಯಾರಿಕೆ ಇದೆ ಎಂದು ಶಿಲ್ಪಾ ಮೆಡಿಕೇರ್ ನಿಯಂತ್ರಕ ಫೈಲಿಂಗ್​ನಲ್ಲಿ ತಿಳಿಸಿದೆ.

ಮೊದಲ 12 ತಿಂಗಳು ಡ್ಯುಯಲ್ ವೆಕ್ಟರ್ ಸ್ಪುಟ್ನಿಕ್ ವಿ, ಉದ್ದೇಶಿತ ಉತ್ಪಾದನೆಯು ವಾಣಿಜ್ಯ ಉತ್ಪಾದನೆಯ ಪ್ರಾರಂಭದ ದಿನಾಂಕದಿಂದ 50 ಮಿಲಿಯನ್ ಡೋಸ್ ಇರಲಿದೆ ಎಂದು ಕಂಪನಿ ಹೇಳಿದೆ.

ಡಾ. ರೆಡ್ಡಿಸ್​​ ಸ್ಪುಟ್ನಿಕ್ ತಂತ್ರಜ್ಞಾನವನ್ನು ಎಸ್‌ಬಿಪಿಎಲ್‌ಗೆ ವರ್ಗಾಯಿಸಲು ಅನುಕೂಲವಾಗಲಿದೆ. ಒಪ್ಪಂದದ ಪ್ರಕಾರ, ಎಸ್‌ಬಿಪಿಎಲ್ ಲಸಿಕೆ ತಯಾರಿಕೆಯ ಜವಾಬ್ದಾರಿಯನ್ನು ಹೊಂದಿದ್ದರೆ, ಡಾ. ರೆಡ್ಡಿಸ್​ ಅದರ ಮಾರುಕಟ್ಟೆ ಪ್ರದೇಶಗಳಲ್ಲಿ ಲಸಿಕೆ ವಿತರಣೆ ಮತ್ತು ಮಾರಾಟದ ಜವಾಬ್ದಾರಿ ವಹಿಸಿಕೊಂಡಿದೆ.

ಮುಂದಿನ ದಿನಗಳಲ್ಲಿ ಲಸಿಕೆಯ ಸಿಂಗಲ್​ ಡೋಸ್ ಆವೃತ್ತಿಯಾದ ಸ್ಪುಟ್ನಿಕ್ ಲೈಟ್ ತಯಾರಿಸುವ ಆಯ್ಕೆಯನ್ನು ಸಹ ಕಂಪನಿಗಳು ಪತ್ತೆಹಚ್ಚುತ್ತಿದೆ ಎಂದು ಶಿಲ್ಪಾ ಮೆಡಿಕೇರ್ ಹೇಳಿದೆ.

ರೆಡ್ಡಿಸ್ ಲ್ಯಾಬೊರೇಟರೀಸ್ ಶುಕ್ರವಾರ ಆಮದು ಮಾಡಿಕೊಂಡ ಕೋವಿಡ್-19 ಲಸಿಕೆ ಸ್ಪುಟ್ನಿಕ್ ವಿ, ಔಷಧ ತಯಾರಕ ಹಿರಿಯ ಕಾರ್ಯನಿರ್ವಾಹಕ ದೀಪಕ್ ಸಪ್ರಾ ಅವರು ಮೊದಲ ಶಾಟ್ ಪಡೆದರು. ಪ್ರತಿ ಡೋಸ್‌ಗೆ ಲಸಿಕೆಯ ಬೆಲೆ 948 ರೂ. ಇದ್ದು, ಶೇ 5ರಷ್ಟುಜಿಎಸ್‌ಟಿ (ಚಿಲ್ಲರೆ ಬೆಲೆ 995.40 ರೂ) ಆಕರ್ಷಿಸಿದೆ.

ABOUT THE AUTHOR

...view details