ಕರ್ನಾಟಕ

karnataka

ETV Bharat / business

ಬ್ಯಾಂಕ್ ಸಿಇಒಗಳ ನಿವೃತ್ತಿ ವಯಸ್ಸಿನ ಮಿತಿ ಹಿಂದಿನ ರಹಸ್ಯ ಬಿಚ್ಚಿಟ್ಟ RBI ಗವರ್ನರ್​..!

ಒಬ್ಬರು ಪ್ರಧಾನಿಯಾಗಲು ವಯಸ್ಸಿನ ಮಿತಿ ಏಕೆ ಇಲ್ಲ ಎಂದು ಕೇಳಿದರು. ಆದರೆ, ಖಾಸಗಿ ಬ್ಯಾಂಕ್ ಮುಖ್ಯಸ್ಥರು 70ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಬೇಕಾಗಿದೆ. ಬ್ಯಾಂಕ್​ಗಳು ತಮ್ಮ ಕಾರ್ಯಾಚರಣೆಯ ದಕ್ಷತೆಯತ್ತ ಗಮನ ಹರಿಸುವ ಅಗತ್ಯವಿದೆ. ಸಾಲದ ನಿಧಾನಗತಿಯ ಬೆಳವಣಿಗೆ ಈಗಿನ ಬ್ಯಾಂಕ್​ಗಳು ಎದುರಿಸುತ್ತಿರುವ ದೊಡ್ಡ ಸವಾಲು ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದರು.

Shaktikanta Das
ಶಕ್ತಿಕಾಂತ್ ದಾಸ್

By

Published : Feb 25, 2020, 10:59 PM IST

ನವದೆಹಲಿ: ಖಾಸಗಿ ವಲಯದ ಬ್ಯಾಂಕ್ ಮುಖ್ಯಸ್ಥರ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಬ್ಯಾಂಕ್​ಗಳ ಬೇಡಿಕೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮಾನ್ಯ ಮಾಡುವುದಿಲ್ಲ ಎಂದ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್, ಇದನ್ನು ಕ್ರಿಕೆಟ್‌ ಸಾದೃಶ್ಯದೊಂದಿಗೆ ಹೋಲಿಸಿ ವಿವರಿಸಿದರು.

ಜನರು 'ಏಕೆ' ಮತ್ತು 'ಏಕೆ ಬೇಡ' ಎಂದು ಕೇಳಿದಾಗ ನೀವು ನಿವೃತ್ತಿ ಹೊಂದಬೇಕು ಎಂದ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರ ಹೇಳಿಕೆಯನ್ನು ದಾಸ್ ಉಲ್ಲೇಖಿಸಿದ್ದು, ನಾನು ಕ್ರಿಕೆಟ್‌ನ ಅಭಿಮಾನಿ ಎಂದಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬ್ಯಾಂಕ್​ಗಳು ಫಿನ್‌ಟೆಕ್ ಕಂಪನಿಗಳಿಂದ ತೀವ್ರ ಸ್ಪರ್ಧೆ ಎದುರಿಸುತ್ತಿಲ್ಲ. ಆದರೆ, ದೊಡ್ಡ ತಂತ್ರಜ್ಞಾನ ಕಂಪನಿಗಳು (ಬಿಗ್ ಟೆಕ್) ಹಣಕಾಸು ಸೇವೆಗಳ ಉದ್ಯಮಕ್ಕೆ ದೊಡ್ಡ ಪ್ರಮಾಣದಲ್ಲಿ ಪ್ರವೇಶಿಸುತ್ತಿವೆ. ಬ್ಯಾಂಕ್​ಗಳು ಪ್ರಸ್ತುತವಾಗಲು ಹೆಚ್ಚು ಹೆಚ್ಚು ಶ್ರಮಿಸಬೇಕಾಗುತ್ತದೆ ಎಂದು ಸಲಹೆ ನೀಡಿದರು. ಈ ಮೂಲಕ ಅವರು ವಯಸ್ಸು ಹೆಚ್ಚಿದಂತೆ ಕೆಲಸದ ಒತ್ತಡ ನಿಭಾಯಿಸುವುದು ಕಷ್ಟವಾಗುತ್ತದೆ. ಹಾಗಾಗಿ ನಿವೃತ್ತಿ ವಯಸ್ಸು ಹೆಚ್ಚಳ ಮಾಡುವುದು ಸಮರ್ಥನೀಯವಲ್ಲ ಎಂದು ಶಕ್ತಿಕಾಂತ್​ ದಾಸ್ ಪ್ರತಿಪಾದಿಸಿದರು.

ಸೆಂಟ್ರಲ್ ಬ್ಯಾಂಕ್ ನಿವೃತ್ತಿ ವಯಸ್ಸನ್ನು ಪರಿಶೀಲಿಸುತ್ತಿದೆ. ಕೆಲವು ತಿಂಗಳ ಹಿಂದೆ ಆರ್‌ಬಿಐ ತನ್ನ ನಿರ್ಧಾರವನ್ನು ಎರಡು ಬ್ಯಾಂಕ್​ಗಳಿಗೆ ತಿಳಿಸಿದೆ. ಅಲ್ಲಿರುವವರು ನಿವೃತ್ತಿ ವಯಸ್ಸನ್ನು ಸಮೀಪಿಸುತ್ತಿದ್ದಾರೆ. ಹೊಸಬರನ್ನು ನೇಮಿಸಿಕೊಳ್ಳುವುದನ್ನು ಆರ್​ಬಿಐ ನಿರೀಕ್ಷಿಸುತ್ತಿದೆ ಎಂದರು.

ಕೆಲವು ಕಂಪನಿಗಳು ಹೊಸ ಕಂಪನಿಗಳ ಕಾಯ್ದೆಗೆ ಸಮನಾಗಿ ಆರ್‌ಬಿಐ ನಿಯಮಗಳನ್ನು ತರಲು ವಯಸ್ಸಿನ ಮಿತಿಯನ್ನು 75 ವರ್ಷಕ್ಕೆ ಏರಿಸಬೇಕೆಂದು ಬಯಸಿವೆ. ಆದರೆ, ಈ ಬಗ್ಗೆ ಆರ್‌ಬಿಐ ಯಾವುದೇ ಚಿಂತನೆಯಿಲ್ಲ ಎಂದು ದಾಸ್ ಹೇಳಿದರು.

ABOUT THE AUTHOR

...view details