ನವದೆಹಲಿ: ಮೇ ಮತ್ತು ಜೂನ್ ತಿಂಗಳಲ್ಲಿ ನಾಲ್ಕು ದಿನಗಳವರೆಗೆ ವೇತನವಿಲ್ಲದೇ (ಎಲ್‌ಡಬ್ಲ್ಯೂಪಿ) ಕಡ್ಡಾಯ ರಜೆ ಹೋಗಬೇಕೆಂದು ವಿಸ್ತಾರ ವಿಮಾನಯಾನ ಸಂಸ್ಥೆಯು ತನ್ನ ಹಿರಿಯ ಉದ್ಯೋಗಿಗಳಿಗೆ ಸೂಚಿಸಿದೆ.
ಮೇ ಮತ್ತು ಜೂನ್ 2020ರವರೆಗೆ ಲೆವೆಲ್ 1 'ಎ' ಮತ್ತು 1 'ಬಿ'ಯಲ್ಲಿ ಪೈಲಟ್ ಮತ್ತು ಸಿಬ್ಬಂದಿ ಹೊರತುಪಡಿಸಿ ಉಳಿದ ನೌಕರರಿಗೆ ಕಡ್ಡಾಯವಾಗಿ ಯಾವುದೇ ವೇತನ ಇಲ್ಲದೇ ರಜೆ (ಸಿಎನ್‌ಪಿಎಲ್) ಮುಂದುವರಿಸುತ್ತೇವೆ. 4 ಮತ್ತು 5ನೇ ಹಂತದ ಸಿಬ್ಬಂದಿ ತಿಂಗಳಿಗೆ 4 ದಿನಗಳವರೆಗೆ ಸಿಎನ್‌ಪಿಎಲ್, ಹಂತ 2 ಮತ್ತು 3ರಲ್ಲಿನ ಸಿಬ್ಬಂದಿ ತಿಂಗಳಿಗೆ 3 ದಿನಗಳ ಸಿಎನ್‌ಪಿಎಲ್, ಲೆವೆಲ್ 1 'ಸಿ'ಯಲ್ಲಿರುವ ಸಿಬ್ಬಂದಿ ತಿಂಗಳಿಗೆ 1 ದಿನ ಸಿಎನ್‌ಪಿಎಲ್ ಪಡೆಯುವಂತೆ ಸಂಸ್ಥೆಯ ಸಿಇಒ ಲೆಸ್ಲಿ ಥಂಗ್ ತನ್ನ ಉದ್ಯೋಗಿಗಳಿಗೆ ತಿಳಿಸಿದ್ದಾರೆ.