ಕರ್ನಾಟಕ

karnataka

ETV Bharat / business

ಯುಟಿಐ AMCಯಲ್ಲಿನ ಎಲ್‌ಐಸಿ, ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ ಷೇರು ಪಾಲು ತಗ್ಗಿಸಿ: ಸೆಬಿ - SBI

ಯುಟಿಐ ಎಎಂಸಿನ ನಾಲ್ಕು ಸಾರ್ವಜನಿಕ ವಲಯದ ಹಣಕಾಸು ಸಂಸ್ಥೆಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಭಾರತೀಯ ಜೀವ ವಿಮಾ ನಿಗಮ (ಎಲ್​​ಐಸಿ), ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಒಳಗೊಂಡಿವೆ. ಪ್ರಸ್ತುತ ಫಂಡ್ ಹೌಸ್​​ನಲ್ಲಿ ಪ್ರತಿಯೊಂದೂ ಶೇ 18.24ರಷ್ಟು ಪಾಲನ್ನು ಹೊಂದಿವೆ. ಇದನ್ನು ಶೇ 10ಕ್ಕಿಂತ ಕಡಿಮೆ ಪಾಲನು ಕಾಪಾಡಿಕೊಳ್ಳುವಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ ಸೂಚಿಸಿದೆ.

SEBI
ಸೆಬಿ

By

Published : Dec 7, 2019, 5:17 PM IST

ನವದೆಹಲಿ:ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ಯುಟಿಐ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಯಲ್ಲಿನ (ಎಎಂಸಿ) ತಮ್ಮ ಪಾಲನ್ನು ಶೇ 10ಕ್ಕಿಂತ ಕಡಿಮೆಗೊಳಿಸುವಂತೆ ಎಲ್‌ಐಸಿ, ಎಸ್‌ಬಿಐ ಮತ್ತು ಬ್ಯಾಂಕ್ ಆಫ್ ಬರೋಡಾಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಸೂಚಿಸಿದೆ.

ನಿರ್ದೇಶನಗಳನ್ನು ಪಾಲಿಸದಿದ್ದಲ್ಲಿ ಯುಟಿಐ ಎಎಂಸಿ ಮತ್ತು ಯುಟಿಐ ಟ್ರಸ್ಟಿಯಲ್ಲಿನ ಘಟಕಗಳ ಷೇರುದಾರರ ಮತ್ತು ಮತದಾನದ ಹಕ್ಕುಗಳನ್ನು ಶೇ 9.99ಕ್ಕಿಂತ ಕಡಿಮೆಗೊಳಿಸಲಾಗುತ್ತದೆ. ಆದೇಶಗಳನ್ನು ಪಾಲಿಸುವವರೆಗೆ ಕಾರ್ಪೊರೇಟ್ ಪ್ರಯೋಜನಗಳನ್ನು ತಡೆಹಿಡಿಯಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಯುಟಿಐ ಎಎಂಸಿನ ನಾಲ್ಕು ಸಾರ್ವಜನಿಕ ವಲಯದ ಹಣಕಾಸು ಸಂಸ್ಥೆಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಭಾರತೀಯ ಜೀವ ವಿಮಾ ನಿಗಮ (ಎಲ್​​ಐಸಿ), ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಒಳಗೊಂಡಿವೆ. ಪ್ರಸ್ತುತ ಫಂಡ್ ಹೌಸ್​​ನಲ್ಲಿ ಪ್ರತಿಯೊಂದೂ ಶೇ 18.24ರಷ್ಟು ಪಾಲನ್ನು ಹೊಂದಿವೆ. ಖಾಸಗಿ ಇಕ್ವಿಟಿ ಸಂಸ್ಥೆಯಾದ ಟಿ ರೋವ್ ಪ್ರೈಸ್ ಇಂಟರ್​ನ್ಯಾಷನಲ್ ಯುಟಿಐ ಎಎಂಸಿಯಲ್ಲಿ ಶೇ 26ರಷ್ಟು ಪಾಲುದಾರಿಕೆ ಇದೆ.

ಎಲ್‌ಐಸಿ, ಎಸ್‌ಬಿಐ ಮತ್ತು ಬಿಒಬಿ ಒಂದಕ್ಕಿಂತ ಹೆಚ್ಚು ಮ್ಯೂಚುವಲ್ ಫಂಡ್‌ನ ಪ್ರಾಯೋಜಕರು ಮತ್ತು ಒಂದಕ್ಕಿಂತ ಹೆಚ್ಚು ಎಎಂಸಿ ಮತ್ತು ಟ್ರಸ್ಟಿ ಕಂಪನಿಯಲ್ಲಿ ಶೇ 10ಕ್ಕಿಂತ ಹೆಚ್ಚಿನ ಷೇರುಗಳನ್ನು ಹೊಂದಿವೆ. ಇದು ಎಂಎಫ್‌ನ ನಿಯಮಗಳ ಅವಶ್ಯಕತೆಗಳಿಗೆ ಅನುಗುಣವಾಗಿಲ್ಲ ಎಂದು ಸೆಬಿ ನೋಟಿಸ್​ನಲ್ಲಿ ಹೇಳಿದೆ.

ABOUT THE AUTHOR

...view details