ನವದೆಹಲಿ: ಷೇರು ನಿಯಂತ್ರಕ ಸೆಬಿಯು ತನ್ನ ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ಅಧ್ಯಕ್ಷ ಕಿಶೋರ್ ಬಿಯಾನಿ ಹಾಗೂ ಇತರ ಕೆಲವು ಪ್ರವರ್ತಕರಿಗೆ ಒಂದು ವರ್ಷದ ನಿಷೇಧ ಹೇರಿದ್ದರಿಂದ ರಿಲಯನ್ಸ್ ಜೊತೆಗಿನ 24,713 ಕೋಟಿ ರೂ. ಒಪ್ಪಂದದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಫ್ಯೂಚರ್ ರಿಟೇಲ್ ಲಿಮಿಟೆಡ್ ಹೇಳಿದೆ.
ಕಿಶೋರ್ ಬಿಯಾನಿ, ಇತರ ಕೆಲವು ಪ್ರವರ್ತಕರು ಮತ್ತು ಫ್ಯೂಚರ್ ಕಾರ್ಪೊರೇಟ್ ರಿಸೋರ್ಸಸ್ ಪ್ರೈವೇಟ್ ಲಿಮಿಟೆಡ್ (ಎಫ್‌ಸಿಆರ್‌ಪಿಎಲ್) ವಿರುದ್ಧ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಬುಧವಾರ ಅಂಗೀಕರಿಸಿದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಚಿಂತಿಸಿದೆ.