ಪೆನ್ಸಿಲ್ವೇನಿಯಾ:ಏಕಾಂತದಲ್ಲಿದ್ದಾಗ ಕದ್ದು- ಮುಚ್ಚಿ ಅಶ್ಲೀಲ ವಿಡಿಯೋ ವೀಕ್ಷಿಸಿದರೆ ಯಾರಿಗೂ ತಿಳಿಯುವುದಿಲ್ಲ ಎಂಬ ನೋಡುಗರ ಭಾವನೆಯನ್ನು ತಪ್ಪು ಎಂಬುದನ್ನು ಶೈಕ್ಷಣಿಕ ಅಧ್ಯಯನಯೊಂದು ಸಾಬೀತುಪಡಿಸಿದೆ.
ಲ್ಯಾಪ್‌ಟಾಪ್ ಅಥವಾ ಸ್ಮಾರ್ಟ್‌ಫೋನ್‌ನಲ್ಲಿ ಗೌಪ್ಯವಾಗಿ ಅಶ್ಲೀಲ ವಿಡಿಯೋ ವೀಕ್ಷಿಸುವವರ ಬಳಕೆಯ ಇತಿಹಾಸನ್ನು ಕೆಲವು ಸರ್ಚ್ ಎಂಜಿನ್ ಹಾಗೂ ಸೋಷಿಯಲ್ ಮೀಡಿಯಾ ಸೈಟ್ಗಳು ರಹಸ್ಯವಾಗಿ ಟ್ರ್ಯಾಕ್ ಮಾಡುತ್ತವೆ ಎಂದು ಮೈಕ್ರೋಸಾಫ್ಟ್, ಕಾರ್ನೆಗಿ ಮೆಲಾನ್ ವಿಶ್ವವಿದ್ಯಾನಿಲಯ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯವು ಜಂಟಿಯಾಗಿ ನಡೆಸಿದ ಅಧ್ಯಯನ ತಿಳಿಸಿದೆ.