ಕರ್ನಾಟಕ

karnataka

ETV Bharat / business

ಸೈರಸ್ ಮಿಸ್ತ್ರಿ ಮುಂದುವರಿಕೆ ಆದೇಶಕ್ಕೆ ತಡೆ ನೀಡಿದ ಸುಪ್ರೀಂ... ಟಾಟಾ ಸನ್ಸ್​ಗೆ ಮುನ್ನಡೆ - ಸುಪ್ರೀಂಕೋರ್ಟ್

ರಾಷ್ಟ್ರೀಯ ಕಂಪನಿ ಕಾನೂನುಗಳ ಮೇಲ್ಮನವಿ ನ್ಯಾಯಾಧಿಕರಣದ (ಎನ್​ಸಿಎಲ್​ಎಟಿ), ಡಿಸೆಂಬರ್ 18ರಂದು ಸೈರಸ್ ಮಿಸ್ತ್ರಿ ಅವರನ್ನು ಗುಂಪಿನ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ನೇಮಕ ಮಾಡಿಕೊಳ್ಳುವಂತೆ ಟಾಟಾ ಸನ್ಸ್​ಗೆ ಆದೇಶ ನೀಡಿತ್ತು. ಜೊತೆಗೆ ಟಾಟಾ ಗ್ರೂಪ್​ ವಜಾ ನಡೆಯನ್ನು 'ಕಾನೂನುಬಾಹಿರ' ಎಂದು ಹೇಳಿತ್ತು. ಇದನ್ನು ಪ್ರಶ್ನಿಸಿ ಟಾಟಾ ಗ್ರೂಪ್​ ಸುಪ್ರೀಂಕೋರ್ಟ್​ ಮೊರೆ ಹೋಗಿತ್ತು.

Cyrus Mistry
ಸೈರಸ್ ಮಿಸ್ತ್ರಿ

By

Published : Jan 11, 2020, 7:01 AM IST

ನವದೆಹಲಿ: ಟಾಟಾ ಗ್ರೂಪ್‌ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಸೈರಸ್‌ ಮಿಸ್ತ್ರಿ ಮುಂದುವರಿಯುವಂತೆ ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣ (ಎನ್‌ಸಿಎಲ್‌ಎಟಿ) ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

ರಾಷ್ಟ್ರೀಯ ಕಂಪನಿ ಕಾನೂನುಗಳ ಮೇಲ್ಮನವಿ ನ್ಯಾಯಾಧಿಕರಣದ (ಎನ್​ಸಿಎಲ್​ಎಟಿ), ಡಿಸೆಂಬರ್ 18ರಂದು ಸೈರಸ್ ಮಿಸ್ತ್ರಿ ಅವರನ್ನು ಗುಂಪಿನ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ನೇಮಕ ಮಾಡಿಕೊಳ್ಳುವಂತೆ ಟಾಟಾ ಸನ್ಸ್​ಗೆ ಆದೇಶ ನೀಡಿತ್ತು. ಜೊತೆಗೆ ಟಾಟಾ ಗ್ರೂಪ್​ ವಜಾ ನಡೆಯನ್ನು 'ಕಾನೂನುಬಾಹಿರ' ಎಂದು ಹೇಳಿತ್ತು. ಇದನ್ನು ಪ್ರಶ್ನಿಸಿ ಟಾಟಾ ಗ್ರೂಪ್​ ಸುಪ್ರೀಂಕೋರ್ಟ್​ ಮೊರೆ ಹೋಗಿತ್ತು.

ಎನ್‌ಸಿಎಲ್‌ಎಟಿ ಆದೇಶವನ್ನು ಪ್ರಶ್ನಿಸಿ ಟಾಟಾ ಗ್ರೂಪ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೋಬ್ಡೆ ನೇತೃತ್ವದ ನ್ಯಾಯ ಪೀಠವು, ಎನ್​ಸಿಎಲ್​ಎಟಿ ತೀರ್ಪು ದೋಷದಿಂದ ಕೂಡಿದೆ. ನಾವು ಈ ಬಗ್ಗೆ ವಿವರಗಳನ್ನು ತಿಳಿಯಬೇಕಾಗಿದೆ ಎಂದು ತಿಳಿಸಿದೆ. ಜತೆಗೆ ಮಿಸ್ತ್ರಿ ಮತ್ತು ಇತರರಿಗೆ ನೋಟಿಸ್‌ ನೀಡಿದೆ.

2012ರಲ್ಲಿ ಟಾಟಾ ಕುಟುಂಬಸ್ಥರು ಹೊರತುಪಡಿಸಿ ಮೊದಲ ಬಾರಿಗೆ ಸೈರಸ್​ ಮಿಸ್ತ್ರಿ ಅವರು, ಟಾಟಾ ಸಮೂಹದ ಅತ್ಯುನ್ನತ ಹುದ್ದೆಗೆ ನೇಮಕ ಮಾಡಲಾಯಿತು. 2016ರ ಅಕ್ಟೋಬರ್ ತಿಂಗಳಲ್ಲಿ ಅವರನ್ನು ಆ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಎನ್​ಸಿಎಲ್​ಎಟಿ ಮೊರೆ ಹೋಗಿದ್ದರು.

ABOUT THE AUTHOR

...view details