ಕರ್ನಾಟಕ

karnataka

ETV Bharat / business

ಐಸಿಐಸಿಐ-ವಿಡಿಯೋಕಾನ್ ಲೇವಾದೇವಿ ವ್ಯವಹಾರ.. ಚಂದಾ ಕೊಚ್ಚಾರ್ ಮೇಲ್ಮನವಿ ತಿರಸ್ಕರಿಸಿದ ಸುಪ್ರೀಂ - ಐಸಿಐಸಿಐ ಬ್ಯಾಂಕ್- ವಿಡಿಯೊಕಾನ್ ಕೇಸ್​

ಐಸಿಐಸಿಐ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ತನ್ನ ಸೇವೆಗಳನ್ನು ರದ್ದುಗೊಳಿಸುವುದರ ವಿರುದ್ಧದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್‌ನ ಮಾರ್ಚ್ 5ರ ಆದೇಶದ ವಿರುದ್ಧ ಕೊಚ್ಚಾರ್​ ಅವರು ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು..

chanda kochhar
ಚಂದಾ ಕೊಚ್ಚಾರ್

By

Published : Dec 1, 2020, 3:09 PM IST

Updated : Dec 1, 2020, 5:09 PM IST

ನವದೆಹಲಿ :ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ಚಂದಾ ಕೊಚ್ಚಾರ್ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

ಐಸಿಐಸಿಐ-ವಿಡಿಯೊಕಾನ್ ಮನಿ ಲ್ಯಾಂಡರಿಂಗ್​ (ಲೇವಾದೇವಿ ವ್ಯವಹಾರ) ಪ್ರಕರಣ ಸಂಬಂಧ ಐಸಿಐಸಿಐ ಬ್ಯಾಂಕ್​ನ ಮಾಜಿ ಸಿಇಒ ಚಂದಾ ಕೊಚ್ಚಾರ್ ಮತ್ತು ಅವರ ಪತಿ ದೀಪಕ್ ಕೊಚ್ಚಾರ್​ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮುಂಬೈನ ವಿಶೇಷ ನ್ಯಾಯಾಲಯ ಕೂಡ ತಿರಸ್ಕರಿಸಿತ್ತು.

ಕೋವಿಡ್ ಬಿಕ್ಕಟ್ಟು.. ನವೆಂಬರ್​ನಲ್ಲಿ ಉತ್ಪಾದನಾ ವಲಯಕ್ಕೆ ಭಾರಿ ಹಿನ್ನಡೆ

ಕ್ಷಮಿಸಿ, ನಾವು ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಒಲವು ತೋರುತ್ತಿಲ್ಲ. ಇದು ಖಾಸಗಿ ಬ್ಯಾಂಕ್ ಮತ್ತು ನೌಕರರ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ನ್ಯಾಯಪೀಠ ಹೇಳಿದೆ.

ಐಸಿಐಸಿಐ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ತನ್ನ ಸೇವೆಗಳನ್ನು ರದ್ದುಗೊಳಿಸುವುದರ ವಿರುದ್ಧದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್‌ನ ಮಾರ್ಚ್ 5ರ ಆದೇಶದ ವಿರುದ್ಧ ಕೊಚ್ಚಾರ್​ ಅವರು ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು.

Last Updated : Dec 1, 2020, 5:09 PM IST

ABOUT THE AUTHOR

...view details