ಲಡಾಖ್:ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ (ಎಸ್ಬಿಐ), ಇತ್ತೀಚೆಗೆ ಘೋಷಣೆಯಾದ ನೂತನ ಕೇಂದ್ರಾಡಳಿತ ಪ್ರದೇಶ ಲಡಾಖ್ನಲ್ಲಿ ತನ್ನ 14ನೇ ಶಾಖೆ ತೆರೆದಿದೆ.
ಲಡಾಖ್ನಲ್ಲಿ 14ನೇ ಶಾಖೆ ತೆರೆದ ಎಸ್ಬಿಐ; ಕಣಿವೆ ರಾಜ್ಯದಲ್ಲಿ ಜಾಲ ವೃದ್ಧಿಗೆ ಒತ್ತು - State Bank Of India News
ಎಸ್ಬಿಐ ಮುಖ್ಯಸ್ಥ ರಜನೀಶ್ ಕುಮಾರ್ ಅವರು ದಿಸ್ಕಿಟ್ ಪಟ್ಟಣದ ನುಬ್ರ ವ್ಯಾಲಿಯಲ್ಲಿ ನೂತನ ಶಾಖೆಗೆ ಚಾಲನೆ ನೀಡಿದರು. ಈ ಮೂಲಕ ಲಡಾಖ್ ವ್ಯಾಪ್ತಿಯಲ್ಲಿ 14ನೇ ಶಾಖೆ ತೆರೆದಂತಾಗಿದ್ದು, ದೇಶಾದ್ಯಂತ ಒಟ್ಟು 22,024 ಶಾಖೆಗಳನ್ನು ಹೊಂದಿದೆೆ.
ಸಾಂದರ್ಭಿಕ ಚಿತ್ರ
ಎಸ್ಬಿಐ ಮುಖ್ಯಸ್ಥ ರಜನೀಶ್ ಕುಮಾರ್ ದಿಸ್ಕಿಟ್ ಪಟ್ಟಣದ ನುಬ್ರ ವ್ಯಾಲಿಯಲ್ಲಿ ನೂತನ ಶಾಖೆಗೆ ಚಾಲನೆ ನೀಡಿದರು. ಈ ಮೂಲಕ ಲಡಾಖ್ ವ್ಯಾಪ್ತಿಯಲ್ಲಿ 14ನೇ ಶಾಖೆಯನ್ನು ತೆರೆದಂತಾಗಿದ್ದು, ದೇಶದಲ್ಲಿ ಒಟ್ಟು 22,024 ಬ್ರಾಂಚ್ಗಳನ್ನು ಬ್ಯಾಂಕ್ ಹೊಂದಿದೆೆ.
ಜೆ&ಕೆ ಬ್ಯಾಂಕ್ ಜಮ್ಮುಕಾಶ್ಮೀರ ಹಾಗೂ ಲಡಾಖ್ನಲ್ಲಿ ಪ್ರಾಬಲ್ಯ ಹೊಂದಿದೆ. ಕಣಿವೆ ರಾಜ್ಯಗಳಲ್ಲಿ ತನ್ನ ಶಾಖೆಗಳನ್ನು ಇನ್ನಷ್ಟು ವಿಸ್ತರಿಸಿ ಪ್ರಥಮ ಸ್ಥಾನ ಪಡೆಯುವ ಇಂಗಿತವನ್ನು ಎಸ್ಬಿಐ ಹೊಂದಿದೆ. ದೇಶದ ಎಲ್ಲ ರಾಜ್ಯಗಳಲ್ಲಿ ಎಸ್ಬಿಐ ಅತಿದೊಡ್ಡ ಸಾಲದಾತ ಬ್ಯಾಂಕರ್ ಎನಿಸಿಕೊಂಡಿದೆ.