ಕರ್ನಾಟಕ

karnataka

ETV Bharat / business

SBI ಗ್ರಾಹಕರ ಗಮನಕ್ಕೆ! ಜ.1ರಿಂದ ಹೊಸ ಚೆಕ್​ ಪಾವತಿ ಸಿಸ್ಟಮ್​ ಜಾರಿ : ಈ ತಪ್ಪುಗಳು ಮಾಡದಿರಿ! - ಹೊಸ ಚೆಕ್ ಪಾವತಿ

ಎಸ್‌ಬಿಐ ಗ್ರಾಹಕರಿಗೆ ಪಾಸಿಟಿವ್​ ಪೇ ಸಿಸ್ಟಮ್‌ಗೆ ತಮ್ಮ ಆಯ್ಕೆ ನೀಡುವಂತೆ ಕೇಳಿದ್ದು, ಯಾವುದೇ ಪ್ರಶ್ನೆಗಳು ಇದ್ದಲ್ಲಿ ತಮ್ಮ ಹತ್ತಿರದ ಶಾಖೆಗೆ ಸಂಪರ್ಕಿಸಬಹುದು ಎಂದು ಮನವಿ ಮಾಡಿದೆ. ಪಾಸಿಟಿವ್ ಪಾವತಿ ವ್ಯವಸ್ಥೆ ಎನ್ನುವುದು ಸ್ವಯಂಚಾಲಿತ ವಂಚನೆ ಪತ್ತೆ ಹಚ್ಚುವ ಸಾಧನವಾಗಿದೆ..

SBI
ಎಸ್​​ಬಿಐ

By

Published : Dec 29, 2020, 12:55 PM IST

ನವದೆಹಲಿ :ದೇಶದ ಅತಿದೊಡ್ಡ ಸಾಲಗಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಚೆಕ್‌ ವಹಿವಾಟುಗಳಿಗೆ ಪಾಸಿಟಿವ್​ ಪಾವತಿ ವ್ಯವಸ್ಥೆ ರೂಪಿಸಲು ಸಜ್ಜಾಗಿದ್ದು, ಈ ಹೊಸ ಚೆಕ್​ ಪಾವತಿ ವ್ಯವಸ್ಥೆ 2021ರ ಜನವರಿ 1ರಿಂದ ಜಾರಿಗೆ ಬರಲಿದೆ.

ಹೊಸ ನಿಯಮದ ಪ್ರಕಾರ 50,000 ರೂ. ಮೀರಿದ ಪಾವತಿಗಳಿಗೆ ಪ್ರಮುಖ ವಿವರಗಳ ಮರು ದೃಢೀಕರಣ ಅಗತ್ಯವಿರುತ್ತದೆ. ಈ ಹೊಸ ಚೆಕ್ ಪಾವತಿ ನಿಯಮವನ್ನು ಗ್ರಾಹಕರು ಮುಂದಿನ ತಿಂಗಳಿಂದ ಪಾಲಿಸಬೇಕಿದೆ.

ಆರ್‌ಬಿಐ ನೂತನ ಮಾರ್ಗಸೂಚಿಗಳ ಪ್ರಕಾರ, ಹೆಚ್ಚುವರಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ಧನಾತ್ಮಕ ವೇತನ ವ್ಯವಸ್ಥೆಯನ್ನು (ಪಿಪಿಎಸ್) ಪರಿಚಯಿಸುತ್ತಿದ್ದೇವೆ. ಚೆಕ್ ನೀಡುವ ಗ್ರಾಹಕರು ಈಗ ಖಾತೆ ಸಂಖ್ಯೆ, ಚೆಕ್ ಸಂಖ್ಯೆ, ಚೆಕ್ ಮೊತ್ತ, ಚೆಕ್ ದಿನಾಂಕ ಪಾವತಿಸುವವರ ಹೆಸರಿನಂತಹ ವಿವರಗಳನ್ನು ಒದಗಿಸಬೇಕಾಗುತ್ತದೆ. ಚೆಕ್ ಪಾವತಿಗಳಿಗೆ ಸಂಬಂಧ ಎಸ್​ಬಿಐ ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: 'ಲಾವಾ' ಮೇಡ್​ ಇನ್ ಇಂಡಿಯಾ ಸ್ಮಾರ್ಟ್​ಫೋನ್ ಲಾಂಚ್.. ಇಷ್ಟೊಂದು ಕಡಿಮೆ ದರಕ್ಕೆ ಸಿಗುವುದು ಕನಸಿನ ಮಾತು​!

ಎಸ್‌ಬಿಐ ಗ್ರಾಹಕರಿಗೆ ಪಾಸಿಟಿವ್​ ಪೇ ಸಿಸ್ಟಮ್‌ಗೆ ತಮ್ಮ ಆಯ್ಕೆ ನೀಡುವಂತೆ ಕೇಳಿದ್ದು, ಯಾವುದೇ ಪ್ರಶ್ನೆಗಳು ಇದ್ದಲ್ಲಿ ತಮ್ಮ ಹತ್ತಿರದ ಶಾಖೆಗೆ ಸಂಪರ್ಕಿಸಬಹುದು ಎಂದು ಮನವಿ ಮಾಡಿದೆ. ಪಾಸಿಟಿವ್ ಪಾವತಿ ವ್ಯವಸ್ಥೆ ಎನ್ನುವುದು ಸ್ವಯಂಚಾಲಿತ ವಂಚನೆ ಪತ್ತೆ ಹಚ್ಚುವ ಸಾಧನವಾಗಿದೆ.

ಇದರ ಅಡಿಯಲ್ಲಿ ಚೆಕ್ ನೀಡುವ ವ್ಯಕ್ತಿಯ ದಿನಾಂಕ, ಫಲಾನುಭವಿಗಳ ಹೆಸರು, ಸ್ವೀಕರಿಸುವವರ ಹೆಸರು ಹಾಗೂ ಪಾವತಿಯ ಮೊತ್ತವನ್ನು ಮರು ಚೆಕ್​ ನೀಡುವ ವ್ಯಕ್ತಿಯ ಈ ಮಾಹಿತಿಯನ್ನು ಎಲೆಕ್ಟ್ರಾನಿಕ್​ ವಿಧಾನಗಳಾದ ಎಸ್​ಎಂಎಸ್​, ಮೊಬೈಲ್​ ಅಪ್ಲಿಕೇಷನ್​, ಇಂಟರ್​ನೆಟ್​ ಬ್ಯಾಂಕಿಂಗ್​ ಅಥವಾ ಎಟಿಎಂ ಮೂಲಕ ಒದಗಿಸಬಹುದು.

ಈ ಬಳಿಕ ಚೆಕ್​ ಪಾವತಿಸುವ ಮೊದಲ ಈ ಎಲ್ಲ ವಿವರಗಳನ್ನು ಅಡ್ಡ ಪರಿಶೀಲನೆ ನಡೆಸಲಾಗುತ್ತದೆ. ಚೆಕ್​ನಲ್ಲಿ ಯಾವುದೇ ಅಕ್ರಮ ಕಂಡು ಬರದಿದ್ದಲ್ಲಿ ಪಾವತಿ ಮಾಡಲಾಗುತ್ತದೆ.

ABOUT THE AUTHOR

...view details