ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗೃಹ ಸಾಲದ ಮೇಲೆ 70 ಬೇಸಿಸ್ ಪಾಯಿಂಟ್‌ಗಳ ಬಡ್ಡಿ ರಿಯಾಯತಿ ಕಡಿಮೆ ಮಾಡುವ ಮೂಲಕ ಬಡ್ಡಿದರಗಳನ್ನು ಶೇ 6.7ರಿಂದ ಪ್ರಾರಂಭಿಸಿದೆ.
ಮಾರ್ಚ್ 31ರ ತನಕದ ಸಂಸ್ಕರಣಾ ಶುಲ್ಕದ ಮೇಲೆ ಶೇ 100ರಷ್ಟು ಮನ್ನಾ ಆಫರ್ ನೀಡುವುದಾಗಿ ದೇಶದ ಅತಿದೊಡ್ಡ ಸಾಲದಾತ ತಿಳಿಸಿದೆ. ಬಡ್ಡಿ ರಿಯಾಯತಿ ಸಾಲದ ಮೊತ್ತ ಮತ್ತು ಸಾಲಗಾರನ ಸಿಬಿಲ್ ಸ್ಕೋರ್ ಆಧರಿಸಿರುತ್ತದೆ.
ಉತ್ತಮ ಮರುಪಾವತಿ ಕಾಯ್ದುಕೊಳ್ಳುವ ಗ್ರಾಹಕರಿಗೆ ಉತ್ತಮ ದರ ವಿಸ್ತರಿಸಲಾಗುವುದು. 75 ಲಕ್ಷ ರೂ.ವರೆಗಿನ ಗೃಹ ಸಾಲಕ್ಕೆ ಶೇ 6.7ರಷ್ಟು ಬಡ್ಡಿ ಮತ್ತು 75 ಲಕ್ಷ ರೂ.ಗಿಂತ ಹೆಚ್ಚಿನ ಸಾಲಗಳಿಗೆ ಶೇ 6.75ರಿಂದ ಬಡ್ಡಿದರ ಪ್ರಾರಂಭವಾಗುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.