ಕರ್ನಾಟಕ

karnataka

ETV Bharat / business

SBI ಗ್ರಾಹಕರ ಗಮನಕ್ಕೆ! ಸೇವಿಂಗ್​ ಅಕೌಂಟ್​​ ಇಮೇಲ್​ ಐಡಿ ನವಿಕರೀಸುವ ವಿಧಾನ ಇಲ್ಲಿದೆ - ಎಸ್‌ಬಿಐ ಹೊಸ ಆನ್‌ಲೈನ್ ಸೇವೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ತಮ್ಮ ಉಳಿತಾಯ ಖಾತೆಗೆ ಲಿಂಕ್ ಮಾಡಲಾದ ಇಮೇಲ್ ಐಡಿ ಬದಲಾಯಿಸಲು ಅಥವಾ ನವೀಕರಿಸಲು ಅನುವು ಮಾಡಿಕೊಡುತ್ತದೆ.

SBI
SBI

By

Published : Feb 27, 2021, 4:54 PM IST

ನವದೆಹಲಿ:ಭಾರತದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ತಮ್ಮ ಉಳಿತಾಯ ಖಾತೆಗೆ ಲಿಂಕ್ ಮಾಡಲಾದ ಇಮೇಲ್ ಐಡಿ ಬದಲಾಯಿಸಲು ಅಥವಾ ನವೀಕರಿಸಲು ಅನುವು ಮಾಡಿಕೊಡುತ್ತದೆ.

ಗ್ರಾಹಕರು ಇದನ್ನು ಆನ್‌ಲೈನ್ ಅಥವಾ ಮೊಬೈಲ್ ಅಪ್ಲಿಕೇಷನ್ ಮೂಲಕ ಅಥವಾ ಎಸ್‌ಬಿಐ ಶಾಖೆಗೆ ಭೇಟಿ ನೀಡುವ ಮುಖೇನ ಮಾಡಿಕೊಳ್ಳಬಹುದು. ಆದ್ದರಿಂದ, ಗ್ರಾಹಕರು ಇತ್ತೀಚೆಗೆ ತಮ್ಮ ಇಮೇಲ್ ಐಡಿ ಬದಲಾಯಿಸಿದ್ದರೆ ಅದನ್ನು ಬ್ಯಾಂಕ್‌ನೊಂದಿಗೆ ನವೀಕರಿಸಬಹುದು. ನಿಮ್ಮ ಎಲ್ಲಾ ವಹಿವಾಟುಗಳ ಬಗ್ಗೆ ದಾಖಲೆ ಇರಿಸಿಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ.

ಇಮೇಲ್ ಐಡಿಯನ್ನು ಆನ್‌ಲೈನ್‌ನಲ್ಲಿ ನವೀಕರಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ:

-ಎಸ್‌ಬಿಐ ಅಧಿಕೃತ ವೆಬ್‌ಸೈಟ್ www.onlinesbi.comಗೆ ಭೇಟಿ ನೀಡಿ

-ಪ್ರೊಫೈಲ್ ವೈಯಕ್ತಿಕ ವಿವರ ಇಮೇಲ್​ ಬದಲಾವಣೆ (Profile-Personal Details-Change email ID) ಕ್ಲಿಕ್ ಮಾಡಿ

-ಇದು 'ಮೈ ಅಕೌಂಟ್ಸ್​' ಅಡಿಯಲ್ಲಿ ಇರುತ್ತದೆ. ಇದು ಸ್ಕ್ರೀನ್​ನ ಎಡ ಭಾಗದಲ್ಲಿ ಕಾಣಸಿಗುತ್ತದೆ

-ಮುಂದಿನ ಪುಟದಲ್ಲಿ ಖಾತೆ ಸಂಖ್ಯೆ ಆಯ್ಕೆ ಮಾಡಿ, ಇಮೇಲ್ ಐಡಿಯನ್ನು ನಮೂದಿಸಿ -ಸಬ್​​ಮಿಟ್ ಆಯ್ಕೆ ಕ್ಲಿಕ್ ಮಾಡಿ

-ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಒಟಿಪಿ ಬಳಸಿ ಇಮೇಲ್ ವಿಳಾಸಕ್ಕೆ ಬದಲಾವಣೆಗಳನ್ನು ಸ್ವಯಂ ಅನುಮೋದನೆ ಮಾಡಬಹುದು

ಗ್ರಾಹಕರು ಪರ್ಯಾಯವಾಗಿ ಬ್ಯಾಂಕ್​ ಶಾಖೆಗೆ ಭೇಟಿ ಮಾಡಿ ಸಲ್ಲಿಸಬಹುದು.

-ನಿಮ್ಮ ಹತ್ತಿರದ ಎಸ್‌ಬಿಐ ಶಾಖೆಗೆ ಭೇಟಿ ನೀಡಿ

-ಮನವಿ ಪತ್ರ ಭರ್ತಿ ಮಾಡಿ

-ಮೇಲಿನ ಪತ್ರವನ್ನು ಸಲ್ಲಿಸಿ

-ಬ್ಯಾಂಕ್​ ಸಿಬ್ಬಂದಿಯ ಅಗತ್ಯ ಪರಿಶೀಲನೆಯ ನಂತರ, ಶಾಖೆಯಿಂದ ನವೀಕರಣ ಮಾಡಲಾಗುತ್ತದೆ

-ನೀವು ನವೀಕರಿಸಿದ ಇಮೇಲ್ ಐಡಿಗೆ ಎಸ್‌ಎಂಎಸ್ ಬರುತ್ತದೆ

ನೀವು ನಿಮ್ಮ ಇಮೇಲ್ ಐಡಿಯನ್ನು ಎಸ್‌ಬಿಐ ಮೊಬೈಲ್ ಅಪ್ಲಿಕೇಶನ್ ಮೂಲಕ ನವೀಕರಿಸಬಹುದು

- ಎಸ್‌ಬಿಐ ಮೊಬೈಲ್ ಅಪ್ಲಿಕೇಷನ್‌ಗೆ ಲಾಗ್ ಇನ್ ಆಗಬೇಕು

-ಮೆನು ಟ್ಯಾಬ್‌ನಿಂದ, 'ಮೈ ಪ್ರೊಫೈಲ್'ಗೆ ಹೋಗಿ ಎಡಿಟ್​ ಐಕಾನ್ ಕ್ಲಿಕ್ ಮಾಡಿ

-ಇಮೇಲ್ ಐಡಿ ನಮೂದಿಸಿ

-ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ

-ಒಟಿಪಿ ನಮೂದಿಸಿ, 'ಸಬ್​ಮಿಟ್​' ಕ್ಲಿಕ್ ಮಾಡಿ

ABOUT THE AUTHOR

...view details