ನವದೆಹಲಿ:ತಾಂತ್ರಿಕ ಅಡೆಚಣೆಯಿಂದಾಗಿ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಇಂಡಿಯಾ (ಎಸ್‌ಬಿಐ) ಬ್ಯಾಂಕ್ನ ಗ್ರಾಹಕರು ಆನ್‌ಲೈನ್ ಸೇವೆಗಳಲ್ಲಿ ತೊಂದರೆ ಅನುಭವಿಸಿದ್ದಾರೆ.
ಗ್ರಾಹಕರು ಮಂಗಳವಾರ ಬೆಳಗ್ಗೆ ಆನ್ಲೈನ್ನ ಅನಾನುಕೂಲತೆ ಎದುರಿಸಿದ್ದಾರೆ. ಆದರೂ ಎಟಿಎಂ ಮತ್ತು ಪಿಓಎಸ್ ಯಂತ್ರಗಳು ಯಾವುದೇ ಸಮಸ್ಯೆಯಿಲ್ಲದೆ ಕಾರ್ಯನಿರ್ವಹಿಸುವೆ.
ಬೆಳಗ್ಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಎಸ್‌ಬಿಐ ಗ್ರಾಹಕರಿಗೆ ಉಂಟಾಗುವ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸುತ್ತೇವೆ. ಶೀಘ್ರದಲ್ಲೇ ಸಾಮಾನ್ಯ ಸೇವೆಗಳು ಪುನರಾರಂಭಗೊಳ್ಳಲಿವೆ ಎಂದು ಭರವಸೆ ನೀಡಿತು.
ನಮ್ಮ ಗ್ರಾಹಕರು ನಮ್ಮೊಂದಿಗೆ ಸಹಿಸಿಕೊಳ್ಳಬೇಕೆಂದು ನಾವು ವಿನಂತಿಸುತ್ತೇವೆ. ಸಾಮಾನ್ಯ ಸೇವೆ ಶೀಘ್ರದಲ್ಲೇ ಪುನಾರಂಭಗೊಳ್ಳುತ್ತದೆ ಎಂದು ಎಸ್‌ಬಿಐ ಟ್ವೀಟ್ ಮಾಡಿತ್ತು. ಸಮಸ್ಯೆ ಇತ್ಯರ್ಥಪಡಿಸಿದ ಬಳಿಕ, ನಮ್ಮೊಂದಿಗೆ ಸಹಕರಿಸಿದ ಗ್ರಾಹಕರಿಗೆ ಧನ್ಯವಾದಗಳು. ನಿಮ್ಮ ಸಹನೆಯನ್ನು ನಾವು ಗೌರವಿಸುತ್ತೇವೆ ಎಂದು ಮತ್ತೊಂದು ಟ್ವೀಟ್ ಮಾಡಿತು.