ನವದೆಹಲಿ:ಬ್ಯಾಂಕ್ಗಳಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ಅದನ್ನು ಮರುಪಾವತಿಸದೇ 'ಉದ್ದೇಶಪೂರ್ವಕ ಸುಸ್ತಿದಾರ'ರಾದ (ವಿಲ್‌ಫುಲ್ ಡಿಫಾಲ್ಟರ್ಸ್) 10 ಹೆಸರುಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಬಹಿರಂಗಪಡಿಸಿದೆ.
ಫಾರ್ಮಾಸ್ಯುಟಿಕಲ್ಸ್, ವಜ್ರಾಭರಣ, ಇಂಧನ, ಮೂಲಸೌಕರ್ಯ ವಲಯ ಸೇರಿದಂತೆ ಇತರ ಕ್ಷೇತ್ರಗಳ ಉದ್ದೇಶಪೂರ್ವಕ ಸುಸ್ತಿದಾರರು ಇದ್ದಾರೆ. ಇದರಲ್ಲಿ ಬಹುತೇಕರು ಮುಂಬೈ ಮೂಲದ ಉದ್ಯಮಿಗಳಾಗಿದ್ದಾರೆ. ಮುಂದಿನ 15 ದಿನಗಳ ಒಳಗೆ ಬಡ್ಡಿ ಮತ್ತು ಇತರ ಶುಲ್ಕಗಳ ಬಾಕಿ ಹಣ ಮರುಪಾವತಿಸಲು ವಿಫಲವಾದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಸ್‌ಬಿಐ ಎಚ್ಚರಿಸಿದೆ.
ಸ್ಪ್ಯಾನ್ಕೋ ಲಿಮಿಟೆಡ್ನ ನಿರ್ದೇಶಕರಾದ ಕಪಿಲ್ ಪುರಿ ಹಾಗೂ ಕವಿತಾ ಪುರಿ ಅವರು ಅತ್ಯಧಿಕ ಮೊತ್ತದ ವಿಲ್‌ಫುಲ್ ಡಿಫಾಲ್ಟರ್ಸ್ ಆಗಿದ್ದಾರೆ. ಇವರು ಸ್ಪ್ಯಾನ್ಕೋ ಲಿಮಿಟೆಡ್ ₹ 347.30 ಕೋಟಿಯಷ್ಟು ಈ ಕಂಪನಿ ಹೆಸರಿನಡಿ ಸಾಲ ಪಡೆದಿದ್ದು, ಇದುವರೆಗೂ ಮರುಪಾವತಿಸಲ್ಲ ಎಂದು ಎಸ್‌ಬಿಐ ಹೇಳಿದೆ.
ಕ್ಯಾಲಿಕ್ಸ್ ಕೆಮಿಕಲ್ಸ್ & ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ನ ನಿರ್ದೇಶಕರಾದ ಸ್ಮಿತೇಶ್ ಸಿ. ಶಾ, ಭಾರತ್ ಎಸ್. ಮೆಹ್ತಾ ಮತ್ತು ರಜತ್ ಐ. ದೋಶಿ ಅವರು ₹ 327.81 ಕೋಟಿ ಸಾಲ ಪಡೆದಿದ್ದಾರೆ. ಲೋಹಾ ಇಸ್ಪಾತ್ ಲಿಮಿಟೆಡ್ ₹ 287.30 ಕೋಟಿ, ಯುರೋ ಗೋಲ್ಡ್ ಜ್ಯುವೆಲ್ಲರಿ ಪ್ರೈವೇಟ್ ಲಿಮಿಟೆಡ್ ₹ 229.05 ಕೋಟಿ, ಖಾನ್ ಆಫ್ ಎಕ್ಸೆಲ್ ಮೆಟೆಲ್ ಪ್ರೋಸಸರ್ ಪ್ರೈವೇಟ್ ಲಿಮಿಟೆಡ್ ₹ 61.23 ಕೋಟಿ, ಮೈಕ್ರೋಕೋಸ್ಮ್ ಇನ್ಫ್ರಾಸ್ಟ್ರಕ್ಚರ್ & ಪವರ್ ಪ್ರೈವೇಟ್ ಲಿಮಿಟೆಡ್ ₹ 56.73 ಕೋಟಿ, ಮೆಟಲ್ ಲಿಂಕ್ ಅಲಾಯ್ಸ್ ಲಿಮಿಟೆಡ್ ₹ 53.79 ಕೋಟಿ, ರಿಸಿಲೇಂಟ್ ಆಟೋ ಇಂಡಿಯಾ ಲಿಮಿಟೆಡ್ ₹ 32.71 ಕೋಟಿ, ರಂಗರ ಇಂಡಸ್ಟ್ರಿಸ್ ಪ್ರೈವೇಟ್ ಲಿಮಿಟೆಡ್ ₹ 29.510 ಕೋಟಿ ಮತ್ತು ಗ್ಲೋಬಲ್ ಹೈಟೆಕ್ ಇಂಡಸ್ಟ್ರಿ ಲಿಮಿಟೆಡ್ ₹ 27.80 ಕೋಟಿ ಸಾಲ ಪಡೆದಿದ್ದಾರೆ ಎಂದು ವಿವರಿಸಿದೆ.