ನವದೆಹಲಿ: ಗ್ರಾಹಕರ ಎಟಿಎಂ ಕಾರ್ಡ್‌ಗಳನ್ನು ನಕಲು ಮಾಡಿ ವಂಚಿಸುವ ಪ್ರಕರಣಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೂತನ ಸೇವೆಯನ್ನು ಆರಂಭಿಸಿದೆ.
ತನ್ನ ಗ್ರಾಹಕರಿಗೆ ಎಟಿಎಂಗಳಲ್ಲಿ ಯಾವುದೇ ಕಾರ್ಡ್ ಇಲ್ಲದೆಯೂ ಹಣ ಹಿಂತೆಗೆದುಕೊಳ್ಳುವ 'ಯೋನೊ ಕ್ಯಾಶ್' ಎನ್ನುವ ಹೊಸ ಸೌಲಭ್ಯ ಪರಿಚಯಿಸಿದೆ. ಈ ವಿನೂತನ ಸೇವೆ ನೀಡುತ್ತಿರುವ ಭಾರತದ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಎಸ್‌ಬಿಐ ಪಾತ್ರವಾಗಿದೆ. ಬ್ಯಾಂಕ್‌ನ 16,500 ಎಟಿಎಂಗಳಲ್ಲಿ ಈ ಸೇವೆ ಲಭ್ಯ. ಇಂಥ ಸೇವೆಯ ಎಟಿಎಂಗಳನ್ನು 'ಯೋನೊ ಕ್ಯಾಶ್ ಪಾಯಿಂಟ್'ಗಳೆಂದು ಗುರುತಿಸಲಾಗುತ್ತದೆ.
ಯೊನೊ ಕ್ಯಾಷ್ ಪಾಯಿಂಟ್ಸ್ ' ಎಂದು ಕರೆಯಲಾಗುವ ಈ ವ್ಯವಸ್ಥೆಯಿಂದಾಗಿ ಸ್ಕಿಮಿಂಗ್ ಮತ್ತು ಕ್ಲೋನಿಂಗ್ ಸಮಸ್ಯೆ ನಿವಾರಣೆಯಾಗಲಿದೆ. ಈ ವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಬ್ಯಾಂಕ್ ಹೇಳಿದೆ.
ಈ ಸೇವೆಯ ಮುಖೇನ ಹಣ ಪಡೆಯುವ ಪ್ರಕ್ರಿಯೆ ಎರಡು ಅಂಶದ ದೃಢೀಕರಣ ಒಳಗೊಂಡಿದ್ದು, ಗ್ರಾಹಕರು 'ಯೋನೊ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. ನಂತರ ವ್ಯವಹಾರಕ್ಕಾಗಿ ಪಿನ್ ಸೆಟ್ಟಿಂಗ್ ಮಾಡಬೇಕು.
ಅಂಡ್ರಾಯ್ಡ್ ಮತ್ತು ಐಒಎಸ್ ಪವರ್ ಮೊಬೈಲ್ ಹೊರತುಪಡಿಸಿ ಯೋನೊ ವೆಬ್ ಸೈಟ್ ಮೂಲಕ ಇದನ್ನು ಪಡೆದುಕೊಳ್ಳಬಹುದಾಗಿದೆ.
ನಗದು ಹಿಂಪಡೆಯುವ ಪ್ರಕ್ರಿಯೆಯನ್ನು ಆರಂಭಿಸಿದ ನಂತರ, ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ನಂಬರ್ಗೆ ಆರು ಸಂಖ್ಯೆಯ ವಿವರಣೆ ಸಂಖ್ಯೆಯೊಂದಿಗೆ ಎಸ್ಎಂಎಸ್ ಪಡೆಯುತ್ತಾರೆ. ಬಳಸುತ್ತಿರುವ ನೋಂದಾಯಿತ ಮೊಬೈಲ್ ನಂಬರ್ಗೆ ಆರು ಸಂಖ್ಯೆಯ ಎಸ್ಎಂಎಸ್ ಬರುತ್ತದೆ. ಇದಾದ ಕೆಲ ನಿಮಿಷಗಳಲ್ಲಿ ಪಿನ್ ಸಂಖ್ಯೆ ಜೊತೆಗೆ ಹಣವೂ ಬರುತ್ತದೆ.
ಇಲ್ಲಿ ಎರಡು ಹಂತದ ದೃಢೀಕರಣ ವ್ಯವಸ್ಥೆ ಇರುವುದರಿಂದ ಗ್ರಾಹಕರು ನಿಶ್ಚಿಂತೆಯಿಂದ ವ್ಯವಹಾರ ಮಾಡಬಹುದಾಗಿದೆ. 'ಗ್ರಾಹಕರಿಗೆ ಹೆಚ್ಚಿನ ಸೇವೆಗಳನ್ನು ನೀಡಿ, ಉತ್ತಮ ಅನುಭವ ನೀಡುವುದು ನಮ್ಮ ಗುರಿ. ಅದರನ್ವಯವೇ ಮತ್ತೊಂದು ವಿನೂತನ ಸೇವೆಯಾದ ಯೋನೊ ಕ್ಯಾಶ್‌ಗೆ ಚಾಲನೆ ನೀಡಿದ್ದೇವೆ' ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ತಿಳಿಸಿದ್ದಾರೆ.