ಕರ್ನಾಟಕ

karnataka

ETV Bharat / business

SBIನಲ್ಲಿ ಇಂದಿನಿಂದ ಠೇವಣಿ ಇಡುವ ಮುನ್ನ ಯೋಚಿಸಿ! -

ಕನಿಷ್ಠ ವೆಚ್ಚ ಆಧಾರಿತ ಸಾಲದ ಬಡ್ಡಿದರ (ಎಂಸಿಎಲ್‌ಆರ್) ಶೇ 8.45 ರಿಂದ ಶೇ 8.40ಕ್ಕೆ ಇಳಿಕೆಯಾಗಿದೆ. ಗೃಹ ಸಾಲ, ಕಾರು ಸಾಲ, ವೈಯಕ್ತಿಕ ಸಾಲ ಸೇರಿದಂತೆ ಇತರೆ ಸಾಲಗಳ ಮೇಲಿನ ಬಡ್ಡಿದರವನ್ನು ಬ್ಯಾಂಕ್ ಕಡಿತಗೊಳಿಸಲಿದೆ.

ಸಾಂದರ್ಭಿಕ ಚಿತ್ರ

By

Published : Jul 10, 2019, 6:26 PM IST

ನವದೆಹಲಿ:ಮಾರುಕಟ್ಟೆಯಲ್ಲಿ ಹಣದ ಹರಿವಿನ ಪ್ರಮಾಣ ಹೆಚ್ಚಿಸಲು ಇತ್ತೀಚೆಗೆ ಆರ್​ಬಿಐ ರೆಪೋ ದರ ಕಡಿತಗೊಳಿಸಿದ್ದು, ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ಗವರ್ನರ್​ ಶಕ್ತಿಕಾಂತ್ ದಾಸ್ ಬ್ಯಾಂಕುಗಳಿಗೆ ಮನವಿ ಮಾಡಿದ್ದರು.

ಗವರ್ನರ್ ಮನವಿ ಬೆನ್ನಲ್ಲೇ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಇಂದಿನಿಂದ ಅನ್ವಯವಾಗುವಂತೆ ಎಲ್ಲಾ ಅವಧಿಯ ಸಾಲಗಳ ಮೇಲಿನ ಬಡ್ಡಿದರಗಳಲ್ಲಿ ಶೇ 0.05ರಷ್ಟು ಕಡಿತ ಮಾಡಿದೆ.

ಕನಿಷ್ಠ ವೆಚ್ಚ ಆಧರಿತ ಸಾಲದ ಬಡ್ಡಿದರ (ಎಂಸಿಎಲ್ ಆರ್) ಶೇ 8.45 ರಿಂದ ಶೇ 8.40ಕ್ಕೆ ಇಳಿಕೆಯಾಗಿದೆ. ಗೃಹ ಸಾಲ, ಕಾರು ಸಾಲ, ವೈಯಕ್ತಿಕ ಸಾಲ ಸೇರಿದಂತೆ ಇತರ ಸಾಲಗಳ ಮೇಲಿನ ಬಡ್ಡಿದರವನ್ನು ಬ್ಯಾಂಕ್ ಕಡಿತಗೊಳಿಸಲಿದೆ.

ಬ್ಯಾಂಕು​ಗಳಲ್ಲಿ ಗ್ರಾಹಕರ ಠೇವಣಿಗಳ ಮೇಲಿನ ಬಡ್ಡಿದರ ಇಳಿಕೆ ಆಗಲಿದೆ. ಆದರೆ, ವಾಹನ, ಗೃಹ ಸಾಲ ಸೇರಿದಂತೆ ಇತರೆ ಸಾಲಗಳ ವಿಮಾ ಕಂತಿನಲ್ಲಿ ಇಳಿಕೆ ಕಂಡುಬರಲಿದ್ದು, ಈ ಗ್ರಾಹಕರಿಗೆ ಅನುಕೂಲವಾಗಲಿದೆ.

For All Latest Updates

TAGGED:

ABOUT THE AUTHOR

...view details