ಕರ್ನಾಟಕ

karnataka

ETV Bharat / business

ನೂತನ 'ಶುಗನ್' ಪಾಲಿಸಿ ಪ್ರಾರಂಭಿಸಿದ ಎಸ್‌ಬಿಐ ಜನರಲ್ ಇನ್ಶುರೆನ್ಸ್ - ಎಸ್‌ಬಿಐ ಜನರಲ್ ಇನ್ಶುರೆನ್ಸ್ ಲೇಟೆಸ್ಟ್ ನ್ಯೂಸ್

ಎಸ್‌ಬಿಐ ಜನರಲ್ ಇನ್ಶುರೆನ್ಸ್ ಪ್ರಾಯೋಗಿಕವಾಗಿ ಹೊಸ ಪಾಲಿಸಿ 'ಶಗುನ್' ಪ್ರಾರಂಭಿಸಿದ್ದು, ಈ ಪಾಲಿಸಿ ಉಪಯೋಗವು ಅವಶ್ಯಕತೆಯಿರುವ ಫಲಾನುಭವಿಗಳಿಗೆ ಉಡುಗೊರೆಯಾಗಿ ದೊರೆಯಲಿದೆ.

SBI General Insurance
ಎಸ್‌ಬಿಐ ಜನರಲ್ ಇನ್ಶುರೆನ್ಸ್

By

Published : Aug 19, 2020, 1:18 PM IST

ನವದೆಹಲಿ: ಎಸ್‌ಬಿಐ ಜನರಲ್ ಇನ್ಶುರೆನ್ಸ್ ಪ್ರಾಯೋಗಿಕವಾಗಿ ಹೊಸ ಪಾಲಿಸಿ 'ಶಗುನ್' ಅನ್ನು ಪ್ರಾರಂಭಿಸಿದ್ದು, ಇದರ ಪಾಲಿಸಿ ಉಪಯೋಗವು ಅವಶ್ಯಕತೆ ಇರುವ ಫಲಾನುಭವಿಗಳಿಗೆ ಉಡುಗೊರೆಯಾಗಿ ದೊರೆಯುವಲ್ಲಿ ಅನುವು ಮಾಡಿಕೊಡುತ್ತದೆ.

ಕಂಪನಿ ಪ್ರಕಾರ, ಪಾಲಿಸಿಯ ಪ್ರಮುಖ ವ್ಯತ್ಯಾಸ ಎಂದರೆ, ಪಾಲಿಸಿ ಉಡುಗೊರೆಯಾಗಿ ನೀಡಬಹುದು, ಅಂದರೆ ಪಾಲಿಸಿ ಖರೀದಿದಾರನು ವಿಮೆ ಮಾಡಿದ ವ್ಯಕ್ತಿಗೆ ಸಂಬಂಧಿಸಿರುವುದು ಅನಿವಾರ್ಯವಲ್ಲ.

"ಶಗುನ್ ವೈಯಕ್ತಿಕ ಅಪಘಾತ ವಿಮೆ ಒಳಗೊಂಡಿದ್ದು, ಇದು ವಿಮೆ ಮಾಡಿದ ವ್ಯಕ್ತಿಗೆ ಆಕಸ್ಮಿಕವಾಗಿ ಸಾವು ಮತ್ತು ಭಾಗಶಃ ಅಥವಾ ಸಂಪೂರ್ಣ ಅಂಗವೈಕಲ್ಯಗಳು. ಅಪಘಾತದಿಂದ ಉಂಟಾಗುವ ಶಾಶ್ವತ ಮತ್ತು ತಾತ್ಕಾಲಿಕ ಅಂಗವೈಕಲ್ಯಗಳ ವಿರುದ್ಧ ಸಂಪೂರ್ಣ ಆರ್ಥಿಕ ರಕ್ಷಣೆ ನೀಡುತ್ತದೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಎಸ್‌ಬಿಐ ಜನರಲ್ ಇನ್ಶುರೆನ್ಸ್ 2019-20ರ ಹಣಕಾಸು ವರ್ಷದಲ್ಲಿ 6,840 ಕೋಟಿ ರೂ.ಗಳ ಒಟ್ಟು ಲಿಖಿತ ಪ್ರೀಮಿಯಂ ಪಡೆದುಕೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ABOUT THE AUTHOR

...view details