ಕರ್ನಾಟಕ

karnataka

ಎಸ್​ಬಿಐಗೆ 1,800 ಕೋಟಿ ರೂ. ಸಾಲ ವಂಚನೆ: ಮೂರು ಕಡೆ ಸಿಬಿಐ ದಾಳಿ, ಕಂಪನಿಗಳ ಕಡತ ಶೋಧ

By

Published : Dec 4, 2020, 10:06 PM IST

ಎಸ್​​ಬಿಐ ಬ್ಯಾಂಕ್ ನೇತೃತ್ವದ ಒಕ್ಕೂಟಕ್ಕೆ 1,800.72 ಕೋಟಿ ರೂ. ನಷ್ಟವನ್ನುಂಟು ಮಾಡಿದ್ದಕ್ಕಾಗಿ ಲಜಪತ್ ನಗರ ಮೂಲದ ಕಂಪನಿ ಹಾಗೂ ಅದರ ಪ್ರವರ್ತಕರು ಮತ್ತು ನಿರ್ದೇಶಕರ ವಿರುದ್ಧ ಕೇಂದ್ರೀಯ ತನಿಖಾ ದಳಕ್ಕೆ ಎಸ್‌ಬಿಐನಿಂದ ದೂರು ಬಂದಿದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.

CBI raids
ಸಿಬಿಐ

ನವದೆಹಲಿ:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1,800 ಕೋಟಿ ರೂ. ವಂಚನೆ ಆರೋಪದಡಿ ಜೇ ಪಾಲಿಚೆಮ್ ಲಿಮಿಟೆಡ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ನಂತರ ಸಿಬಿಐ ಮೂರು ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಂಕ್ ನೇತೃತ್ವದ ಒಕ್ಕೂಟಕ್ಕೆ 1,800.72 ಕೋಟಿ ರೂ. ನಷ್ಟವನ್ನುಂಟು ಮಾಡಿದ್ದಕ್ಕಾಗಿ ಲಜಪತ್ ನಗರ ಮೂಲದ ಕಂಪನಿ ಹಾಗೂ ಅದರ ಪ್ರವರ್ತಕರು ಮತ್ತು ನಿರ್ದೇಶಕರ ವಿರುದ್ಧ ಕೇಂದ್ರೀಯ ತನಿಖಾ ದಳಕ್ಕೆ ಎಸ್‌ಬಿಐನಿಂದ ದೂರು ಬಂದಿದೆ ಎಂದು ಹೇಳಿದರು.

ಶಾಕ್​ ನಂ-3: ಸೆಪ್ಟೆಂಬರ್​​ ತನಕ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ... ಜನಸಾಮಾನ್ಯರಿಗೆ ತಪ್ಪದ ಕಣ್ಣೀರು

ಬ್ಯಾಂಕ್ ನಿಧಿಗಳು, ಕಾಲ್ಪನಿಕ ವಹಿವಾಟು, ಖೋಟಾ ವಹಿವಾಟು ಸೇರಿದಂತೆ ಇತರ ಕಡೆಗಳಿಗೆ ಹಣ ವರ್ಗಾಯಿಸಲಾಗಿದೆ ಎಂದು ಎಫ್​ಐಆರ್​ನಲ್ಲಿ ದಾಖಲಾಗಿದ್ದು, ಲೆಕ್ಕಪರಿಶೋಧನೆಯಲ್ಲಿ ತಿಳಿದು ಬಂದಿದೆ. ದೆಹಲಿಯ ಮೂರು ಸ್ಥಳಗಳಲ್ಲಿ ಸಾಲಗಾರ ಕಂಪನಿ ಮತ್ತು ಇತರ ಆರೋಪಿಗಳ ಕಚೇರಿ ಮತ್ತು ಮನೆಗಳ ಮೇಲೆ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ಸಿಬಿಐ ವಕ್ತಾರ ಆರ್ ಕೆ ಗೌರ್ ತಿಳಿಸಿದ್ದಾರೆ.

ABOUT THE AUTHOR

...view details