ಕರ್ನಾಟಕ

karnataka

ETV Bharat / business

ಗ್ರಾಹಕರ ಗಮನಕ್ಕೆ: ತಿಂಗಳಲ್ಲಿ 2ನೇ ಬಾರಿ ಬಡ್ಡಿದರ ತಗ್ಗಿಸಿದ ಎಸ್​ಬಿಐ

ವ್ಯವಸ್ಥೆಯಲ್ಲಿ ಸಾಕಷ್ಟು ನಗದು ಹರಿದಾಡುವ ದೃಷ್ಟಿಯಿಂದ ಎಸ್‌ಬಿಐ ತನ್ನ ಉಳಿತಾಯ ಠೇವಣೀಗಳ ಮೇಲಿನ ಬಡ್ಡಿದರಗಳನ್ನು ಮರುಹೊಂದಿಕೆ ಮಾಡಿದೆ. 1 ಲಕ್ಷ ರೂ.ವರೆಗಿನ ಠೇವಣಿ ಮೇಲೆ 25 ಬೇಸಿಸ್ ಪಾಯಿಂಟ್​ಗಳ (ಬಿಪಿಎಸ್) ಶೇ 3% ರಿಂದ ಶೇ 2.75ರಷ್ಟಕ್ಕೆ ಇಳಿಸಲಾಗಿದೆ. 1 ಲಕ್ಷ ರೂ. ಮೇಲ್ಪಟ್ಟ ಠೇವಣಿ ಮೇಲೆ 25 ಬಿಪಿಎಸ್​ನ ಶೇ 3% ರಿಂದ ಶೇ 2.75ರಷ್ಟಕ್ಕೆ ಇಳಿದಿದೆ ಎಂದು ಎಸ್‌ಬಿಐ ತಿಳಿಸಿದೆ.

State Bank of India
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

By

Published : Apr 8, 2020, 6:35 PM IST

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಎಲ್ಲಾ ಉಳಿತಾಯ ಖಾತೆಗಳ ಬಡ್ಡಿ ದರವನ್ನು ಶೇ 2.75ರಷ್ಟಕ್ಕೆ ತರ್ಕಬದ್ಧಗೊಳಿಸಿದೆ. ಇದು ಬ್ಯಾಂಕಿನ 44.51 ಕೋಟಿ ಖಾತೆದಾರರ ಮೇಲೆ ಪರಿಣಾಮ ಬೀರುತ್ತದೆ.

ಪ್ರಸ್ತುತ, ಎಸ್‌ಬಿಐ ಉಳಿತಾಯ ಖಾತೆಗಳ ಬಡ್ಡಿದರ 1 ಲಕ್ಷ ರೂ.ವರೆಗಿನ ಠೇವಣಿಗಳಿಗೆ 3ರಷ್ಟಿದ್ದು ಮತ್ತು 1 ಲಕ್ಷ ರೂ.ಗಿಂತ ಅಧಿಕ ಠೇವಣಿಗೆ ಹೊಸ ದರ 2020ರ ಏಪ್ರಿಲ್ 15ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.

ವ್ಯವಸ್ಥೆಯಲ್ಲಿ ಸಾಕಷ್ಟು ನಗದು ಹರಿದಾಡುವ ದೃಷ್ಟಿಯಿಂದ ಎಸ್‌ಬಿಐ ತನ್ನ ಉಳಿತಾಯ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಮರುಹೊಂದಿಕೆ ಮಾಡಿದೆ. '1 ಲಕ್ಷ ರೂ.ವರೆಗಿನ ಠೇವಣಿ ಮೇಲೆ 25 ಬೇಸಿಸ್ ಪಾಯಿಂಟ್​ಗಳ (ಬಿಪಿಎಸ್) ಶೇ 3% ರಿಂದ ಶೇ 2.75ರಷ್ಟಕ್ಕೆ ಇಳಿಸಲಾಗಿದೆ. 1 ಲಕ್ಷ ರೂ. ಮೇಲ್ಪಟ್ಟ ಠೇವಣಿ ಮೇಲೆ 25 ಬಿಪಿಎಸ್​ನ ಶೇ 3% ರಿಂದ ಶೇ 2.75ರಷ್ಟಕ್ಕೆ ಇಳಿದಿದೆ' ಎಂದು ಎಸ್‌ಬಿಐ ತಿಳಿಸಿದೆ.

ಕಳೆದ ತಿಂಗಳು ದೇಶದ ಅತಿದೊಡ್ಡ ಸಾಲದಾತ ಬ್ಯಾಂಕ್, ಎಲ್ಲಾ ಉಳಿತಾಯ ಖಾತೆಗಳ ಬಡ್ಡಿದರವನ್ನು ಶೇ 3ರಷ್ಟಕ್ಕೆ ಇಳಿಸಿತ್ತು. ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್‌) ಸಾಲಗಳ ಮೇಲಿನ ಬಡ್ಡಿ ದರ 35 ಬಿಪಿಎಸ್ ಕಡಿಮೆ ಮಾಡಿದೆ. ಒಂದು ವರ್ಷದ ಎಂಸಿಎಲ್‌ಆರ್ 2020ರ ಏಪ್ರಿಲ್ 10 ರಿಂದ ಜಾರಿಗೆ ಬರುವಂತೆ ಶೇ 7.75ರಿಂದ ವಾರ್ಷಿಕ ಶೇ 7.40ಕ್ಕೆ ಇಳಿಯುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details