ಕರ್ನಾಟಕ

karnataka

ETV Bharat / business

SBI ಗ್ರಾಹಕರ ಗಮನಕ್ಕೆ..! ನಿಮ್ಮ ಠೇವಣಿ ಮೇಲಿನ ಬಡ್ಡಿ ದರ ಮತ್ತೆ ಇಳಿಕೆ - ಚಿಲ್ಲರೆ ಬಡ್ಡಿ ದರ

ಜನವರಿ 10ರಿಂದ ಅನ್ವಯ ಆಗುವಂತೆ ದೀರ್ಘಾವಧಿಯ ₹ 2 ಕೋಟಿವರೆಗಿನ ಉಳಿತಾಯ ಖಾತೆಗಳ ಠೇವಣಿ ಮತ್ತು ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಿದೆ. ಈ ಹಿಂದೆ ಆರ್​ಬಿಐ ರೆಪೋ ದರ ತಗ್ಗಿಸಿದ್ದ ತತ್ಪರಿಣಾಮ ಅದಕ್ಕೆ ಅನ್ವಯವಾಗುವಂತೆ ಬಡ್ಡಿ ದರಗಳನ್ನು ಎಸ್​ಬಿಐ ಕೂಡ ಇಳಿಕೆ ಮಾಡಿತ್ತು. ಚಿಲ್ಲರೆ ದೀರ್ಘಾವಧಿ ಠೇವಣಿ ಮೇಲಿನ ಬಡ್ಡಿ ದರ 15 ಬೇಸಿಸ್​​ ಪಾಯಿಂಟ್​ಗಳಷ್ಟು ಇಳಿಕೆ ಮಾಡಿದೆ. ಒಂದು ವರ್ಷದಿಂದ 10 ವರ್ಷದವರೆಗಿನ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ 6.25ರಿಂದ ಶೇ 6.10ಕ್ಕೆ ತಗ್ಗಿಸಲಾಗಿದೆ.

SBI
ಎಸ್​ಬಿಐ

By

Published : Jan 14, 2020, 11:33 PM IST

ನವದೆಹಲಿ:ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಮತ್ತೊಮ್ಮೆ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಕಡಿತ ಮಾಡಿದೆ.

ಜನವರಿ 10ರಿಂದ ಅನ್ವಯ ಆಗುವಂತೆ ದೀರ್ಘಾವಧಿಯ ₹ 2 ಕೋಟಿವರೆಗಿನ ಉಳಿತಾಯ ಖಾತೆಗಳ ಠೇವಣಿ ಮತ್ತು ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಿದೆ. ಈ ಹಿಂದೆ ಆರ್​ಬಿಐ ರೆಪೋ ದರ ತಗ್ಗಿಸಿದ್ದ ತತ್ಪರಿಣಾಮ ಅದಕ್ಕೆ ಅನ್ವಯವಾಗುವಂತೆ ಬಡ್ಡಿ ದರಗಳನ್ನು ಎಸ್​ಬಿಐ ಕೂಡ ಇಳಿಕೆ ಮಾಡಿತ್ತು.

ಚಿಲ್ಲರೆ ದೀರ್ಘಾವಧಿ ಠೇವಣಿ ಮೇಲಿನ ಬಡ್ಡಿ ದರ 15 ಬೇಸಿಸ್​​ ಪಾಯಿಂಟ್​ಗಳಷ್ಟು ಇಳಿಕೆ ಮಾಡಿದೆ. ಒಂದು ವರ್ಷದಿಂದ 10 ವರ್ಷದವರೆಗಿನ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ 6.25ರಿಂದ ಶೇ 6.10ಕ್ಕೆ ತಗ್ಗಿಸಲಾಗಿದೆ ಎಂದು ತನ್ನ ವೆಬ್​ಸೈಟ್​ನಲ್ಲಿ ತಿಳಿಸಿದೆ.

7 ದಿನದಿಂದ 45 ದಿನದವರೆಗೆ ಹಾಗೂ 469 ದಿನಗಳಿಂದ 179 ದಿನಗಳವರೆಗಿನ ನಿಶ್ಚಿತ ಠೇವಣಿ ಮೇಲೆ ಕ್ರಮವಾಗಿ ಶೇ 4.50ರಷ್ಟು ಮತ್ತು ಶೇ 5.50ರಷ್ಟು ಬಡ್ಡಿ ನಿಗದಿಪಡಿಸಿದೆ. 180 ದಿನಗಳಿಂದ 1 ವರ್ಷದವರೆಗಿನ ಠೇವಣಿಯ ಮೇಲೆ ಶೇ 5.80ರಷ್ಟು ಹಾಗೂ ಹಿರಿಯ ನಾಗರಿಕರಿಗೆ 50 ಬೇಸಿಸ್​ ಪಾಯಿಂಟ್​ಗಳ ಬಡ್ಡಿಯ ಕೊಡಿಗೆ ನೀಡಿದೆ.

ABOUT THE AUTHOR

...view details