ಕರ್ನಾಟಕ

karnataka

ETV Bharat / business

SBI ಗ್ರಾಹಕರಿಗೆ ಬಂಪರ್... ಇನ್ಮುಂದೆ ಮಿನಿಮಮ್ ಬ್ಯಾಲೆನ್ಸ್, SMS ಶುಲ್ಕವಿಲ್ಲ! - ಎಸ್​ಬಿಐ ಉಳಿತಾಯ ಖಾತೆ ಮೇಲೆ ಬಡ್ಡಿದರ ಕಡಿತ

ಉಳಿತಾಯ ಖಾತೆಗಳ (ಎಸ್​ಬಿ) ಮೇಲೆ ಶೇ. 3ರಷ್ಟು ಬಡ್ಡಿದರ ವಿಧಿಸಲಾಗುವುದು. ಪ್ರಸ್ತುತ 1 ಲಕ್ಷ ರೂ.ವರೆಗಿನ ಎಸ್​ಬಿ ಖಾತೆಗಳ ಮೇಲಿನ ಬಡ್ಡಿದರ ಶೇ. 3.25ರಷ್ಟು ಇದೆ. 1 ಲಕ್ಷ ರೂ.ಗೂ ಮೇಲ್ಪಟ್ಟ ಖಾತೆಗಳ ಬಡ್ಡಿಯು ಶೇ. 3ರಷ್ಟಿದೆ. ಇನ್ನು ಮುಂದೆ ಎಲ್ಲ ವಿಧದ ಎಸ್​ಬಿ ಖಾತೆಗಳಿಗೆ ಏಕರೂಪದ ಬಡ್ಡಿದರ ಅನ್ವಯವಾಗಲಿದೆ. ಅಂತೆಯೇ ಇನ್ಮುಂದೆ ಕನಿಷ್ಠ ಬ್ಯಾಲೆನ್ಸ್​​ ಮತ್ತು ಎಸ್​ಎಂಎಸ್​ ಶುಲ್ಕ ಇರುವುದಿಲ್ಲ ಎಂದು ಬ್ಯಾಂಕ್​ ಹೇಳಿದೆ.

SBI
ಎಸ್​ಬಿಐ

By

Published : Mar 11, 2020, 7:02 PM IST

ನವದೆಹಲಿ: ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ನ ಎಲ್ಲಾ ಉಳಿತಾಯ ಖಾತೆಗಳ (ಎಸ್​ಬಿ) ಬಡ್ಡಿದರವನ್ನು ಶೇ. 3ಕ್ಕೆ ತರ್ಕಬದ್ಧಗೊಳಿಸಿದ್ದು, 44.51 ಕೋಟಿ ಖಾತೆದಾರರ ಮೇಲೆ ಪರಿಣಾಮ ಬೀರಲಿದೆ.

ಎಸ್‌ಬಿ ಖಾತೆಗಳ ಕನಿಷ್ಠ ಮೊತ್ತ ತೆಗೆದು ಹಾಕಿ ಎಸ್‌ಎಂಎಸ್ ಶುಲ್ಕವನ್ನು ಮನ್ನಾ ಮಾಡಲಾಗಿದೆ ಎಂದು ಬ್ಯಾಂಕ್ ಹೇಳಿದೆ.

ಉಳಿತಾಯ ಖಾತೆಗಳ (ಎಸ್​ಬಿ) ಮೇಲೆ ಶೇ. 3ರಷ್ಟು ಬಡ್ಡಿದರ ವಿಧಿಸಲಾಗುವುದು. ಪ್ರಸ್ತುತ 1 ಲಕ್ಷ ರೂ.ವರೆಗಿನ ಎಸ್​ಬಿ ಖಾತೆಗಳ ಮೇಲಿನ ಬಡ್ಡಿದರ ಶೇ. 3.25ರಷ್ಟಿದೆ. 1 ಲಕ್ಷ ರೂ.ಗೂ ಮೇಲ್ಪಟ್ಟ ಖಾತೆಗಳ ಬಡ್ಡಿಯು ಶೇ. 3ರಷ್ಟಿದೆ. ಇನ್ನು ಮುಂದೆ ಎಲ್ಲ ವಿಧದ ಎಸ್​ಬಿ ಖಾತೆಗಳಿಗೆ ಏಕರೂಪದ ಬಡ್ಡಿದರ ಅನ್ವಯವಾಗಲಿದೆ.

ಎಲ್ಲ ಎಸ್​ಬಿ ಖಾತೆದಾರರ ಮಾಸಿಕ ಕನಿಷ್ಠ ಉಳಿತಾಯವನ್ನು (ಎಎಂಬಿ) ಮನ್ನಾ ಮಾಡಲು ನಿರ್ಧರಿಸಲಾಗಿದೆ. ಇದು ಬ್ಯಾಂಕ್​ನ 45.51 ಕೋಟಿ ಗ್ರಾಹಕರ ಮೇಲಿನ ಹೊರೆಯನ್ನು ತಗ್ಗಿಸಲಿದೆ. ಮೆಟ್ರೋ, ಅರೆ ನಗರ ಹಾಗೂ ಗ್ರಾಮೀಣ ಭಾಗದ ಗ್ರಾಹಕರು ಎಎಂಬಿ ಪ್ರಮಾಣ ಕ್ರಮವಾಗಿ ₹ 3,000, ₹ 2,000 ಹಾಗೂ ₹ 1,000 ಇರಿಸಬೇಕಿತ್ತು. ಕನಿಷ್ಠ ಠೇವಣಿ ಇರಿಸದ್ದಕ್ಕೆ ₹ 5 ರಿಂದ ₹ 15 ದಂಡದ ಜತೆಗೆ ತೆರಿಗೆ ಕೂಡ ಹಾಕಲಾಗುತ್ತಿತ್ತು. ಆದ್ರೆ ಈ ಎಲ್ಲ ಶುಲ್ಕಗಳನ್ನು ತೆಗೆದುಹಾಕಲಾಗಿದೆ.

ABOUT THE AUTHOR

...view details