ಕರ್ನಾಟಕ

karnataka

ETV Bharat / business

SBI ಗ್ರಾಹಕರ ಗಮನಕ್ಕೆ! ನಾನ್​ಸ್ಟಾಪ್​ ಸೇವೆಗಾಗಿ ಜೂ.30ರೊಳಗೆ ಈ ದಾಖಲೆ ನವೀಕರಿಸಿ - ಪ್ಯಾನ್​-ಆಧಾರ್​ ಲಿಂಕ್​ ಕೊನೆ ದಿನ

'ನಮ್ಮ ಗ್ರಾಹಕರಿಗೆ ಯಾವುದೇ ಅನಾನುಕೂಲತೆ ತಪ್ಪಿಸಲು ಮತ್ತು ತಡೆರಹಿತ ಬ್ಯಾಂಕಿಂಗ್ ಸೇವೆಯನ್ನು ಆನಂದಿಸಲು ಅವರ ಪ್ಯಾನ್ ಅನ್ನು ಆಧಾರ್​ನೊಂದಿಗೆ ಲಿಂಕ್ ಮಾಡಲು ನಾವು ಸಲಹೆ ನೀಡುತ್ತೇವೆ' ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಟ್ವೀಟ್ ಮಾಡಿದೆ.

SBI
SBI

By

Published : Jun 8, 2021, 10:01 AM IST

ನವದೆಹಲಿ:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ಈ ತಿಂಗಳ ಅಂತ್ಯದ ವೇಳೆಗೆ ಅಂದರೆ ಜೂನ್ 30ರೊಳಗೆ ಆಧರ್ ಕಾರ್ಡ್‌ಗಳೊಂದಿಗೆ ತಮ್ಮ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಲಿಂಕ್ ನವೀಕರಿಸಲು ತಿಳಿಸಿದೆ.

ಒಂದು ವೇಳೆ ಹಾಗೆ ಮಾಡಲು ವಿಫಲವಾದರೆ, ಈಗಿನ ಸೇವೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ದೇಶದ ಅತಿದೊಡ್ಡ ಸಾಲದಾತ ಹೇಳಿದೆ. 'ನಮ್ಮ ಗ್ರಾಹಕರಿಗೆ ಯಾವುದೇ ಅನಾನುಕೂಲತೆ ತಪ್ಪಿಸಲು ಮತ್ತು ತಡೆರಹಿತ ಬ್ಯಾಂಕಿಂಗ್ ಸೇವೆಯನ್ನು ಆನಂದಿಸಲು ಅವರ ಪ್ಯಾನ್ ಅನ್ನು ಆಧಾರ್​ನೊಂದಿಗೆ ಲಿಂಕ್ ಮಾಡಲು ನಾವು ಸಲಹೆ ನೀಡುತ್ತೇವೆ' ಎಂದು ಟ್ವೀಟ್ ಮಾಡಿದೆ.

ಓದಿ: ಕೋವಿಡ್​ ಹೋರಾಟಕ್ಕೆ ಐಐಟಿ ಮದ್ರಾಸ್​ ಹಳೇ ವಿದ್ಯಾರ್ಥಿಗಳಿಂದ 2 ಮಿಲಿಯನ್ ಡಾಲರ್​ ದೇಣಿಗೆ!

ಪ್ಯಾನ್ ನಿಷ್ಕ್ರಿಯ ಅಥವಾ ನಿಷ್ಕ್ರಿಯಗೊಳಿಸಲಾಗುವುದು ಮತ್ತು ನಿರ್ದಿಷ್ಟ ವಹಿವಾಟುಗಳಿಗೆ ಬಳಸಲಾಗುವುದಿಲ್ಲ ಎಂದು ಬ್ಯಾಂಕ್ ಹೇಳಿದೆ. ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ಕೊನೆಯ ದಿನಾಂಕ 2021ರ ಮಾರ್ಚ್ 31 ಆಗಿತ್ತು. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಆದಾಯ ತೆರಿಗೆ ಇಲಾಖೆ 2021ರ ಜೂನ್ 30ರವರೆಗೆ ವಿಸ್ತರಿಸಿದೆ.

ABOUT THE AUTHOR

...view details