ಕರ್ನಾಟಕ

karnataka

ETV Bharat / business

ಎಸ್​ಬಿಐ ಗ್ರಾಹಕರ ಗಮನಕ್ಕೆ..! ಬದಲಾಗಿದೆ ATM ವಿತ್​ ಡ್ರಾ ಮಿತಿ, ಎಫ್​ಡಿ ಮೇಲಿನ ಸೇವಾ ಶುಲ್ಕ... - State Bank Of India News

ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರ ಮಾಸಿಕ ಎಟಿಎಂ ವಿತ್ ಡ್ರಾ ಮಿತಿ, ಠೇವಣಿ ಇರಿಸುವಿಕೆ, ಹಣ ವರ್ಗಾವಣೆ, ಸಿಡಿಎಂ ಸೇರಿದಂತೆ ಇತರ ಬ್ಯಾಂಕಿಂಗ್ ಸೇವೆಗಳ ಶುಲ್ಕವನ್ನು ಪರಿಷ್ಕರಿಸಿದೆ. ಈ ನೂತನ ಶುಲ್ಕ ದರವು ಅಕ್ಟೋಬರ್​ನಿಂದ ಜಾರಿಗೆ ಬಂದಿದೆ.

ಸಾಂದರ್ಭಿಕ ಚಿತ್ರ

By

Published : Oct 3, 2019, 12:08 PM IST

ನವದೆಹಲಿ:ಸಾರ್ವಜನಿಕ ವಲಯದಲ್ಲಿನ ದೇಶದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ, ಎಟಿಎಂ ವಿತ್ ಡ್ರಾ ಮಿತಿ ಸೇರಿದಂತೆ ಇತರ ಬ್ಯಾಂಕಿಂಗ್ ಸೇವೆಗಳ ಶುಲ್ಕವನ್ನು ಪರಿಷ್ಕರಿಸಿದೆ. ನೂತನ ಶುಲ್ಕ ದರವು ಅಕ್ಟೋಬರ್​ನಿಂದ ಜಾರಿಗೆ ಬಂದಿದೆ.

* ಉಳಿತಾಯ ಖಾತೆದಾರರು ಮಾಸಿಕ 3 ಅಥವಾ ವಾರ್ಷಿಕ 36 ಬಾರಿ ಠೇವಣಿ ಇರಿಸುವುದರ ಮೇಲೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಇದಕ್ಕೂ ಹೆಚ್ಚಿನ ಪ್ರತಿ ವಹಿವಾಟಿನ ಮೇಲೆ ₹ 50 + ಜಿಎಸ್​ಟಿ ಶುಲ್ಕ ಒಳಗೊಂಡಿರುತ್ತಿದೆ.

* ಉಚಿತವಾಗಿ ತಿಂಗಳಿಗೆ ಎರಡು ಬಾರಿ ಅಥವಾ ವಾರ್ಷಿಕ 24 ಬಾರಿ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದ ಶಾಖೆಗಳಿಂದ ಹಣ ವಿತ್ ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿದೆ.

* ಎಸ್​ಬಿಐ ಎಟಿಎಂಗಳಿಂದ ತಿಂಗಳಿಗೆ 5 ಬಾರಿ ಅಥವಾ ವಾರ್ಷಿಕ 60 ಬಾರಿ ವಿತ್​ ಡ್ರಾ ಮಾಡಬಹುದಾಗಿದೆ. ಇನ್ನಿತರ ಬ್ಯಾಂಕ್​ಗಳ ಎಟಿಎಂಗಳಿಂದ ಮಾಸಿಕ 5 ಬಾರಿ (ಟೈರ್​- 2 ಸಿಟಿ)/3 ಬಾರಿ ಮೆಟ್ರೋ ಸಿಟಿ ಅಥವಾ ವಾರ್ಷಿಕ 36 ಬಾರಿ/ 60 ಬಾರಿ ಉಚಿತವಾಗಿ ವಿತ್ ಡ್ರಾ ಮಾಡಿಕೊಳ್ಳಬಹುದು.

* ಎಸ್​ಬಿಐ ಗ್ರಾಹಕರು ತಿಂಗಳಿಗೆ 28 ವಹಿವಾಟುಗಳಿಗೆ ಯಾವುದೇ ಶುಲ್ಕವಿಲ್ಲ. ಈ ತಿಂಗಳಲ್ಲಿ 13 ಬಾರಿ ಹಣ ವರ್ಗಾವಣೆ (ಠೇವಣಿ, ಹಣ ಸ್ವೀಕಾರ, ಸ್ವಂತ ಬ್ಯಾಂಕ್ ಎಟಿಎಂ, ಇತರ ಬ್ಯಾಂಕ್​ ಎಟಿಎಂ) ಸೇವೆಗಳನ್ನು ಮೆಟ್ರೋ ಸಿಟಿಗಳಲ್ಲಿ ಪಡೆಯಬಹುದು. ಇತರ ನಗರಗಳಲ್ಲಿ 15 ವಹಿವಾಟಿಗಳಿಗೆ ವಿನಾಯಿತಿ ನೀಡಲಾಗಿದೆ.

* ಡೆಬಿಟ್​ ಕಾರ್ಡ್​ ಫ್ರೀ ಗ್ರಾಹಕರಿಗೆ ಕ್ಯಾಶ್​ ಡೆಪಾಸಿಟ್​ ಮಷಿನ್​ (ಸಿಡಿಎಂ) ಸೇವೆಗಳ ಮೇಲೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ.

ABOUT THE AUTHOR

...view details