ಕರ್ನಾಟಕ

karnataka

ETV Bharat / business

ಎಸ್‌ಬಿಐನ ಕಾರ್ಡ್ & ಪೇಮೆಂಟ್​ ಸಿಇಒ ರಾಜೀನಾಮೆ: ತೆರವಾದ ಸ್ಥಾನಕ್ಕೆ ಅಶ್ವಿನಿ ಕುಮಾರ್ ತಿವಾರಿ ನೇಮಕ - ಪಾವತಿ ಸೇವೆ

ಹರ್ದಾಯಾಳ್​ ಪ್ರಸಾದ್ ಅವರಿಂದ ತೆರವಾದ ಸ್ಥಾನಕ್ಕೆ ಅಶ್ವಿನಿ ಕುಮಾರ್ ತಿವಾರಿ ಅವರನ್ನು ಹೊಸ ಎಂಡಿ ಮತ್ತು ಸಿಇಒ ಆಗಿ ನೇಮಕ ಮಾಡಲಾಗಿದೆ. ಜುಲೈ 31ರ ಬಳಿಕ ಪ್ರಸಾದ್ ಅವರ ರಾಜೀನಾಮೆ ಅಗೀಕಾರವಾಗಲಿದೆ ಎಸ್‌ಬಿಐ ಕಾರ್ಡ್ಸ್​ ನಿಯಂತ್ರಕ ಫೈಲಿಂಗ್​ನಲ್ಲಿ ತಿಳಿಸಿದೆ.

SBI
ಎಸ್​ಬಿಐ

By

Published : Jul 16, 2020, 7:54 PM IST

ಮುಂಬೈ: ಎಸ್‌ಬಿಐ ಕಾರ್ಡ್ಸ್ ಮತ್ತು ಪೇಮೆಂಟ್​ ಸೇವೆಗಳ ಎಂಡಿ ಮತ್ತು ಸಿಇಒ ಹರ್ದಾಯಾಳ್​ ಪ್ರಸಾದ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಪ್ರಸಾದ್ ಅವರಿಂದ ತೆರವಾದ ಸ್ಥಾನಕ್ಕೆ ಅಶ್ವಿನಿ ಕುಮಾರ್ ತಿವಾರಿ ಅವರನ್ನು ಹೊಸ ಎಂಡಿ ಮತ್ತು ಸಿಇಒ ಆಗಿ ನೇಮಕ ಮಾಡಲಾಗಿದೆ. ಜುಲೈ 31ರ ಬಳಿಕ ಪ್ರಸಾದ್ ಅವರ ರಾಜೀನಾಮೆ ಅಗೀಕಾರವಾಗಲಿದೆ ಎಸ್‌ಬಿಐ ಕಾರ್ಡ್ಸ್​ ನಿಯಂತ್ರಕ ಫೈಲಿಂಗ್​ನಲ್ಲಿ ತಿಳಿಸಿದೆ.

ಅಶ್ವಿನಿ ಕುಮಾರ್ ತಿವಾರಿ ಅವರು ಕಂಪನಿಯ ನೂತನ ಎಂಡಿ ಮತ್ತು ಸಿಇಒ ಆಗಿ 2020ರ ಆಗಸ್ಟ್ 1ರಿಂದ ಎರಡು ವರ್ಷಗಳ ಅವಧಿಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

2020ರ ಆಗಸ್ಟ್ 1ರಿಂದ ಎರಡು ವರ್ಷಗಳ ಅವಧಿಗೆ ಜಾರಿಗೆ ಬರುವಂತೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ / ಸಿಇಒ ಅಶ್ವಿನಿ ಕುಮಾರ್ ತಿವಾರಿ ಅವರನ್ನು ನೇಮಕ ಮಾಡಲು ಮಂಡಳಿಯು ಬುಧವಾರ ಅನುಮೋದನೆ ನೀಡಿದೆ ಎಂದು ಫೈಲಿಂಗ್ ತಿಳಿಸಿದೆ.

ABOUT THE AUTHOR

...view details