ಕರ್ನಾಟಕ

karnataka

ETV Bharat / business

ನೀವು SBI ಗ್ರಾಹಕರೇ? ನಾಳೆಯಿಂದ ಎಟಿಎಂಗೆ ಹೋಗುವಾಗ ಮೊಬೈಲ್​ ಕೊಂಡೊಯ್ಯಲು ಮರೆಯದಿರಿ

ಎಸ್‌ಬಿಐ ಎಟಿಎಂಗಳಲ್ಲಿನ ನಿಮ್ಮ ವಹಿವಾಟುಗಳು ಈಗ ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿವೆ. ಎಸ್‌ಬಿಐ ಒಟಿಪಿ ಆಧಾರಿತ ನಗದು ಹಿಂತೆಗೆದುಕೊಳ್ಳುವ ಸೌಲಭ್ಯವನ್ನು ₹ 10,000 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಸೆಪ್ಟೆಂಬರ್ 18ರಿಂದ ಒದಗಿಸಲಾಗುತ್ತದೆ ಎಂದು ಟ್ವಿಟ್ಟರ್​ ಮೂಲಕ ತಿಳಿಸಿದೆ.

SBI ATM
ಎಸ್​ಬಿಐ ಎಟಿಎಂ

By

Published : Sep 17, 2020, 4:30 PM IST

ನವದೆಹಲಿ:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ದೇಶದ ಎಲ್ಲಾ ಎಟಿಎಂಗಳಲ್ಲಿ ₹ 10,000 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತ ಪಡೆಯಲು ಒನ್ ಟೈಮ್​ ಪಾಸ್‌ವರ್ಡ್ (ಒಟಿಪಿ) ಆಧಾರಿತ ನಗದು ಹಿಂಪಡೆಯುವಿಕೆ ಸೇವೆ ನಾಳೆಯಿಂದ (ಸೆಪ್ಟೆಂಬರ್ 18) ಜಾರಿಗೆ ಬರಲಿದೆ.

ಮುಂದಿನ ಬಾರಿ ಎಸ್​​ಬಿಐನ ಎಟಿಎಂ ಕಾರ್ಡ್​ದಾರರು ₹ 10,000 ಅಥವಾ ಹೆಚ್ಚಿನ ವಿತ್​ಡ್ರಾ ಮಾಡಿಕೊಳ್ಳಲು ಎಟಿಎಂ ಕಡೆಗೆ ಹೋಗುವ ಮುನ್ನ ಮೊಬೈಲ್ ನಿಮ್ಮೊಂದಿಗೆ ಕೊಂಡೊಯ್ಯಲು ಮರೆಯದಿರಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬ್ಯಾಂಕ್ ಕಳುಹಿಸಿದ ಒಟಿಪಿ ನೀವು ನಮೂದಿಸಬೇಕಾಗುತ್ತದೆ. ಒಂದು ವೇಳೆ ಒಟಿಪಿ ನಮೂದಿಸಲು ವಿಫಲವಾದರೆ, ವ್ಯವಹಾರವು ರದ್ದುಗೊಳ್ಳುತ್ತದೆ.

ಪ್ರಸ್ತುತ, ಈ ಸೌಲಭ್ಯವು ಎಸ್‌ಬಿಐ ಎಟಿಎಂಗಳಲ್ಲಿ ರಾತ್ರಿ 8ರಿಂದ ಬೆಳಿಗ್ಗೆ 8ರ ನಡುವಿನ ವಹಿವಾಟುಗಳಿಗೆ ಹೆಚ್ಚುವರಿ ಭದ್ರತೆಯಡಿ ಒದಗಿಸಲಾಗುತ್ತದೆ.

ಎಸ್‌ಬಿಐ ಎಟಿಎಂಗಳಲ್ಲಿನ ನಿಮ್ಮ ವಹಿವಾಟುಗಳು ಈಗ ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿವೆ. ಎಸ್‌ಬಿಐ ಒಟಿಪಿ ಆಧಾರಿತ ನಗದು ಹಿಂತೆಗೆದುಕೊಳ್ಳುವ ಸೌಲಭ್ಯವನ್ನು ₹ 10,000 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಸೆಪ್ಟೆಂಬರ್ 18ರಿಂದ ಒದಗಿಸಲಾಗುತ್ತದೆ ಎಂದು ಟ್ವಿಟ್ಟರ್​ ಮೂಲಕ ತಿಳಿಸಿದೆ.

24x7 ಒಟಿಪಿ ಆಧಾರಿತ ನಗದು ಹಿಂಪಡೆಯುವಿಕೆ ಸೌಲಭ್ಯವನ್ನು ಪರಿಚಯಿಸುವುದರೊಂದಿಗೆ, ಎಸ್‌ಬಿಐ ಎಟಿಎಂ ನಗದು ವಿಥ್​ ಡ್ರಾ ಭದ್ರತಾ ಮಟ್ಟವನ್ನು ಮತ್ತಷ್ಟು ಬಲಪಡಿಸಿದೆ. ದಿನವಿಡೀ ಈ ಸೌಲಭ್ಯ ಜಾರಿಗೊಳಿಸುವುದರಿಂದ ಎಸ್‌ಬಿಐ ಡೆಬಿಟ್ ಕಾರ್ಡ್‌ಹೋಲ್ಡರ್‌ಗಳು ವಂಚಕರು, ಅನಧಿಕೃತ ವಿಥ್ ಡ್ರಾ, ಕಾರ್ಡ್ ಸ್ಕಿಮ್ಮಿಂಗ್, ಕಾರ್ಡ್ ಕ್ಲೋನಿಂಗ್ ಮತ್ತು ವಂಚಕರಿಗೆ ಬಲಿಯಾಗುವ ಅಪಾಯ ತಡೆಯುತ್ತದೆ ಎಂದು ಎಸ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details