ಮುಂಬೈ: ಗೃಹ ಸಾಲಕ್ಕೆ 30 ಬೇಸಿಸ್ ಪಾಯಿಂಟ್‌ಗಳವರೆಗೆ ಬಡ್ಡಿ ರಿಯಾಯಿತಿ ಮತ್ತು ಸಂಸ್ಕರಣಾ ಶುಲ್ಕದಲ್ಲಿ ಶೇ 100ರಷ್ಟು ಮನ್ನಾ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಿಸಿದೆ.
ಹೊಸ ಗೃಹಸಾಲ ಬಡ್ಡಿದರಗಳು ಸಿಬಿಲ್ ಸ್ಕೋರ್‌ಗೆ ಸಂಬಂಧಿಸಿದಂತೆ 30 ಲಕ್ಷ ರೂ.ವರೆಗಿನ ಸಾಲಗಳಿಗೆ ಶೇ 6.80ರಷ್ಟು ಮತ್ತು 30 ಲಕ್ಷ ರೂ.ಗಿಂತ ಹೆಚ್ಚಿನ ಸಾಲಗಳಿಗೆ ಶೇ 6.95ರಿಂದ ಪ್ರಾರಂಭವಾಗುತ್ತವೆ. ಮಹಿಳಾ ಸಾಲಗಾರರಿಗೆ 5 ಬಿಪಿಎಸ್ ರಿಯಾಯಿತಿ ಸಿಗಲಿದೆ ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಷೇರು ಹೂಡಿಕೆದಾರರ ಸಂಪತ್ತು 32.49 ಲಕ್ಷ ಕೋಟಿ ರೂ. ಹೆಚ್ಚಳ
ಮನೆ ಖರೀದಿದಾರರಿಗೆ ಆಕರ್ಷಕ ರಿಯಾಯಿತಿಗಳನ್ನು ನೀಡುವ ಉದ್ದೇಶದಿಂದ ದೇಶದ ಅತಿದೊಡ್ಡ ಸಾಲಗಾರ ಎಸ್‌ಬಿಐ ಗೃಹ ಸಾಲಗಳಿಗೆ 30 ಬಿಪಿಎಸ್ ತನಕ ಬಡ್ಡಿ ರಿಯಾಯಿತಿ ಮತ್ತು ಸಂಸ್ಕರಣಾ ಶುಲ್ಕದಲ್ಲಿ 100 ಪ್ರತಿಶತ ಮನ್ನಾ ಘೋಷಿಸಿದೆ.
ಎಂಟು ಮೆಟ್ರೋ ನಗರಗಳಲ್ಲಿ 5 ಕೋಟಿ ರೂ.ವರೆಗೆ ಸಾಲಕ್ಕಾಗಿ 30 ಬಿಪಿಎಸ್ ವರೆಗಿನ ಬಡ್ಡಿ ರಿಯಾಯಿತಿ ಲಭ್ಯವಿದೆ. ಗ್ರಾಹಕರು ತಮ್ಮ ಗೃಹ ಸಾಲಕ್ಕಾಗಿ ಸುಯೊನೊ ಆ್ಯಪ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು. 5 ಬಿಪಿಎಸ್ ಹೆಚ್ಚುವರಿ ಬಡ್ಡಿ ರಿಯಾಯಿತಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.