ರಿಯಾದ್: ತೈಲ ದೈತ್ಯ ಸೌದಿ ಅರಾಮ್ಕೊ ಕಂಪೆನಿ ಕಚ್ಚಾ ತೈಲ ಪೂರೈಕೆಯನ್ನು ಏಪ್ರಿಲ್ ತಿಂಗಳಲ್ಲಿ ಪ್ರತಿನಿತ್ಯ 12.3 ಮಿಲಿಯನ್ ಬ್ಯಾರೆಲ್ಗಳಿಗೆ ಹೆಚ್ಚಿಸಲಿದೆ ಎಂದು ಘೋಷಿಸಿದೆ.
ಸೌದಿಯ ಈ ನಿರ್ಧಾರವು ರಷ್ಯಾ ವಿರುದ್ಧ ತೈಲ ದರ ಸಮರಕ್ಕೆ ಉತ್ತೇಜನ ನೀಡಿದಂತಾಗಿದ್ದು, ಭವಿಷ್ಯದಲ್ಲಿ ಮಾರುಕಟ್ಟೆಯಲ್ಲಿ ತೈಲ ಪೂರೈಕೆಯ ಪ್ರಮಾಣ ಹೆಚ್ಚಳವಾಗಲಿದೆ.
ವಿಶ್ವದ ಅತಿದೊಡ್ಡ ಕಚ್ಚಾ ತೈಲ ರಫ್ತುದಾರ ಅರಾಮ್ಕೊ, ಪ್ರಸ್ತುತ ಸುಮಾರು 9.8 ಮಿಲಿಯನ್ ಬಿಪಿಡಿಯಷ್ಟು ತೈಲ ಉತ್ಪತಿ ಮಾಡುತ್ತಿದ್ದು, ಏಪ್ರಿಲ್ನಿಂದ ಇದಕ್ಕೆ ಕನಿಷ್ಠ 2.5 ಮಿಲಿಯನ್ ಬಿಪಿಡಿ ಸೇರ್ಪಡೆಯಾಗಲಿದೆ.
2020ರ ಏಪ್ರಿಲ್ 1ರಿಂದ ತನ್ನ ಗ್ರಾಹಕರಿಗೆ ಅಗತ್ಯವಾದಷ್ಟು ತೈಲ ಒದಗಿಸಲು ಕಂಪೆನಿ ಒಪ್ಪಿಕೊಂಡಿದೆ. ಇದು ಸಕಾರಾತ್ಮಕ, ದೀರ್ಘಕಾಲೀನ ಆರ್ಥಿಕ ಪರಿಣಾಮ ಬೀರಲಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ.
ಸೌದಿ ಅರೇಬಿಯಾ 12 ಮಿಲಿಯನ್ ಬಿಪಿಡಿ ತೈಲ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಆದರೆ, ಅದು ಎಷ್ಟು ಸಮಯದವರೆಗೆ ಉಳಿಸಿಕೊಳ್ಳುತ್ತದೆ ಎಂಬುದು ಮಾತ್ರ ತಿಳಿದಿಲ್ಲ.