ಕರ್ನಾಟಕ

karnataka

ETV Bharat / business

ಜಿಯೋ ಚಿನ್ನದ ಗರಿಯ ಕೋಳಿ: ₹ 11, 367 ಕೋಟಿ ಹೂಡಿದ ರಿಲಯನ್ಸ್​ನ 11ನೇ ಗೆಳೆಯ - ಜಿಯೋ ಪ್ಲಾಟ್‌ಫಾರ್ಮ್

ತೈಲದಿಂದ ಚಿಲ್ಲರೆ ವ್ಯಾಪಾರ, ಟೆಲಿಕಾಂ ಘಕಟವಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಈಗ ಜಿಯೋದಲ್ಲಿ ಶೇ 24.7 ಪಾಲು ಕಳೆದುಕೊಂಡಿದೆ. ವಿಶ್ವದ ಉನ್ನತ ತಂತ್ರಜ್ಞಾನ ಕಂಪನಿಗಳಿಂದ 115,693.95 ಕೋಟಿ ರೂ.ಯಷ್ಟು ಹೂಡಿಕೆಯಾಗಿದೆ.

Jio Platforms
ಜಿಯೋ

By

Published : Jun 19, 2020, 2:38 AM IST

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಜಿಯೋ ಪ್ಲಾಟ್‌ಫಾರ್ಮ್​ ಲಿಮಿಟೆಡ್​ನಲ್ಲಿ ಸಾವರಿನ್ ವೆಲ್ತ್ ಫಂಡ್​ ಸೌದಿ ಅರೇಬಿಯಾದ ಪಬ್ಲಿಕ್​ ಇನ್ವೆಸ್ಟ್​ಮೆಂಟ್ ಫಂಡ್​ (ಪಿಐಎಫ್​) ಕಂಪನಿ 11, 367 ಕೋಟಿ ರೂ. ಹೂಡಿಕೆ ಮಾಡಿದೆ.

ಈ ಹೂಡಿಕೆಯು ಜಿಯೋ ಪ್ಲಾಟ್‌ಫಾರ್ಮ್‌ನ 4.91 ಲಕ್ಷ ಕೋಟಿ ರೂ. ಈಕ್ವಿಟಿ ಮೌಲ್ಯ ಮತ್ತು ಉದ್ಯಮದ ಮೌಲ್ಯ 5.16 ಲಕ್ಷ ಕೋಟಿ ರೂ. ಏರಿಕೆಯಾಗಿದೆ. ತೈಲದಿಂದ ಚಿಲ್ಲರೆ ವ್ಯಾಪಾರ, ಟೆಲಿಕಾಂ ಘಕಟವಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಈಗ ಜಿಯೋದಲ್ಲಿ ಶೇ 24.7 ಪಾಲು ಕಳೆದುಕೊಂಡಿದೆ. ವಿಶ್ವದ ಉನ್ನತ ತಂತ್ರಜ್ಞಾನ ಕಂಪನಿಗಳಿಂದ 115,693.95 ಕೋಟಿ ರೂ. ಹೂಡಿಕೆಯಾಗಿದೆ.

ಈ ಹೂಡಿಕೆಯೊಂದಿಗೆ ಜಿಯೋ ಪ್ಲಾಟ್‌ಫಾರ್ಮ್‌ನಲ್ಲಿ 2020ರ ಏಪ್ರಿಲ್‌ನಿಂದ ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ಟಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಡಾಲಾ, ಎಡಿಐಎ, ಟಿಪಿಜಿ ಮತ್ತು ಎಲ್ ಕ್ಯಾಟರ್ಟನ್ ಸೇರಿದಂತೆ ಪ್ರಮುಖ ಜಾಗತಿಕ ಹೂಡಿಕೆದಾರರಿಂದ 1,15,693.95 ಕೋಟಿ ರೂ.ಯಷ್ಟು ಹೂಡಿಕೆಯಾಗಿದೆ.

ನಾವು ರಿಲಯನ್ಸ್​ನಲ್ಲಿ ಸೌದಿ ಅರೇಬಿಯಾ ಎಂಪಾಯರ್​ ಜತೆಗೆ ಹಲವು ದಶಕಗಳಿಂದ ದೀರ್ಘ ಮತ್ತು ಫಲಪ್ರದ ಸಂಬಂಧ ಹೊಂದಿದ್ದೇವೆ. ತೈಲ ಆರ್ಥಿಕತೆಯಿಂದ ಈ ಸಂಬಂಧವು ಈಗ ಭಾರತದ ಹೊಸ ತೈಲ ಆರ್ಥಿಕತೆಯನ್ನು ಬಲಪಡಿಸುವ ಚಾಲನಾ ಶಕ್ತಿ ಆಗಲಿದೆ. ಇದು ಜಿಯೋ ಪ್ಲಾಟ್‌ಫಾರ್ಮ್‌ಗಳಿಗೆ ಪಿಐಎಫ್ ಹೂಡಿಕೆಯಿಂದ ಸ್ಪಷ್ಟವಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಹೇಳಿದ್ದಾರೆ.

ಇದಕ್ಕೂ ಮೊದಲು ಅಬುಧಾಬಿ ಇನ್ವೆಸ್ಟ್​ಮೆಂಟ್ ಅಥಾರಿಟಿ (ಎಡಿಐಎ) ಶೇ 1.16 ಪಾಲನ್ನು 5,683.5 ಕೋಟಿ ರೂ.ಗೆ ಖರೀದಿಸಿತ್ತು. ಏಪ್ರಿಲ್ 22ರಂದು ಫೇಸ್​ಬುಕ್​ ಶೇ 9.99ರಷ್ಟು ಷೇರುಗಳನ್ನು 43,574 ಕೋಟಿ ರೂ.ಗೆ ಪಡೆದುಕೊಂಡಿತ್ತು. ತದನಂತರ ಜನರಲ್ ಅಟ್ಲಾಂಟಿಕ್, ಸಿಲ್ವರ್ ಲೇಕ್, ವಿಸ್ಟಾ ಇಕ್ವಿಟಿ ಪಾರ್ಟ್‌‌ನರ್ಸ್‌, ಕೆಕೆಆರ್, ಮುಬಡಾಲಾ ಇನ್ವೆಸ್ಟ್‌ಮೆಂಟ್ ಕಂಪನಿ ಮತ್ತು ಎಡಿಐಎ ಜಿಯೋ ಷೇರುಗಳನ್ನು ಕೊಂಡುಕೊಂಡವು.

ABOUT THE AUTHOR

...view details