ನವದೆಹಲಿ:ಬ್ಯಾಂಕ್ ವಂಚನೆ, ಅಕ್ರಮ ಹಣ ವರ್ಗಾವಣೆ ಆರೋಪಿಗಳಾದ ಉದ್ಯಮಿ ವಿಜಯ್ ಮಲ್ಯ ಹಾಗೂ ವಜ್ರದ ವ್ಯಾಪಾರಿ ನೀರವ್ ಮೋದಿ ಅವರಿಗಿಂತ ಮತ್ತೊಂದು ದೊಡ್ಡ ಬ್ಯಾಂಕ್ ಸಾಲ ವಂಚನೆಯನ್ನು ಜಾರಿ ನಿರ್ದೇಶನಾಲಯ ಬಯಲಿಗೆಳದಿದೆ.
ಸ್ಟರ್ಲಿಂಗ್ ಬಯೊಟೆಕ್ ಲಿಮಿಟೆಡ್ (ಎಸ್ಬಿಎಲ್)/ಸಂದೇಸರ ಗ್ರೂಪ್ ಮತ್ತು ಅದರ ಮುಖ್ಯ ಮುಖ್ಯಸ್ಥ ನಿತಿನ್ ಸಂದೇಸರ, ಚೇತನ್ ಸಂದೇಸರ ಮತ್ತು ದೀಪ್ತಿ ಸಂದೇಸರ ಅವರು ಇಂಡಿಯನ್ ಬ್ಯಾಂಕ್ಗೆ ಸುಮಾರು ₹ 14,500 ಕೋಟಿ ವಂಚಿಸಿದ್ದಾರೆ. ಇದು ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಮಾಡಿದ ಹಣದ ಮೊತ್ತಕ್ಕಿಂತ ಅಧಿಕವಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಬ್ಯಾಂಕ್ಗೆ ಸುಮಾರು ₹ 5,383 ಕೋಟಿ ವಂಚಿಸಿದ ಆರೋಪದಡಿ 2017ರ ಅಕ್ಟೋಬರ್ನಲ್ಲಿ ಸಿಬಿಐ ಎಫ್ಐಆರ್ ದಾಖಲಿಸಿತ್ತು. ಬಳಿಕ ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯ ವಹಿಸಿಕೊಂಡಿತ್ತು. ಸಂದೇಸರಾ ಗ್ರೂಪ್ನ ವಿದೇಶಿ ಕಂಪೆನಿಗಳು ಇಂಡಿಯನ್ ಬ್ಯಾಂಕ್ನ ವಿದೇಶಿ ಶಾಖೆಗಳಲ್ಲಿ ಸುಮಾರು ₹ 9,000 ಕೋಟಿ ಸಾಲ ಪಡೆದುಕೊಂಡಿವೆ ಎಂದು ತನಿಖೆ ವೇಳೆ ತಿಳಿಸಿವೆ.
ಎಸ್ಬಿಎಲ್ ಗ್ರೂಪ್ ಇಂಡಿಯನ್ ಬ್ಯಾಂಕ್ನ ಭಾರತೀಯ ಮತ್ತು ವಿದೇಶಿ ಕರೆನ್ಸಿ ಸಾಲ ಪಡೆದಿದ್ದವು. ಇವುಗಳಿಗೆ ಒಕ್ಕೂಟದ ಬ್ಯಾಂಕ್ಗಳಾದ ಆಂಧ್ರ ಬ್ಯಾಂಕ್, ಯುಸಿಒ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಅಲಹಾಬಾದ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಡಿಯಾದಿಂದ ಸಾಲ ಮಂಜೂರಾಗಿದೆ ಎಂದು ವಿವರಿಸಿದೆ.