ಸಿಂಗಾಪುರ: ದಕ್ಷಿಣ ಕೊರಿಯಾದ ಎಲೆಕ್ಟ್ರಾನಿಕ್ಸ್ ದೈತ್ಯ ಸ್ಯಾಮ್‌ಸಂಗ್‌ನ ಮಾಜಿ ಅಧ್ಯಕ್ಷ ಲೀ ಕುನ್-ಹೀ ಅವರ ಕುಟುಂಬ ಪ್ರಮುಖ ನಿರ್ಧಾರ ಕೈಗೊಂಡಿದೆ. ಪಿತ್ರಾರ್ಜಿತ ತೆರಿಗೆ ಅಡಿಯಲ್ಲಿ ಸರ್ಕಾರಕ್ಕೆ 10.78 ಬಿಲಿಯನ್ ಡಾಲರ್ (ಅಂದಾಜು 80,000 ಕೋಟಿ ರೂ.) ಪಾವತಿಸಲು ನಿರ್ಧರಿಸಿದೆ.
ಇದರೊಂದಿಗೆ ಲೀ ಕುನ್-ಹೀ ಅವರು ಉಳಿದಿರುವ ಸ್ವತ್ತುಗಳ ಮೌಲ್ಯದ ಅರ್ಧಕ್ಕಿಂತ ಹೆಚ್ಚಿನದನ್ನು ಆನುವಂಶಿಕ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಹೋಗಲಿದೆ. ಈ ಪಾವತಿ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಸ್ಯಾಮ್‌ಸಂಗ್‌ನ ಉತ್ತರಾಧಿಕಾರಿಗಳು ವಿಶ್ವದ ಅತಿ ಹೆಚ್ಚು ಪಿತ್ರಾರ್ಜಿತ ತೆರಿಗೆ ಪಾವತಿಸುವವರಾಗುತ್ತಾರೆ.
ದಕ್ಷಿಣ ಕೊರಿಯಾವು ವಿಶ್ವದಲ್ಲೇ ಅತಿ ಹೆಚ್ಚು ಪಿತ್ರಾರ್ಜಿತ ತೆರಿಗೆ ದರ ಹೊಂದಿದೆ. ಇಲ್ಲಿ ಉತ್ತರಾಧಿಕಾರಿಗಳು ಆಸ್ತಿ ವರ್ಗಾವಣೆಯ ಸಮಯದಲ್ಲಿ ಶೇ 50ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಲೀ ಕುವಾನ್ ಯೂ ಅವರ ಉತ್ತರಾಧಿಕಾರಿಗಳು ಪಾವತಿಸಬೇಕಾದ ತೆರಿಗೆ ಕಳೆದ ವರ್ಷ ದಕ್ಷಿಣ ಕೊರಿಯಾದಲ್ಲಿ ವಿಧಿಸಿದ ಆಸ್ತಿ ತೆರಿಗೆಯ ನಾಲ್ಕು ಪಟ್ಟು ಅಧಿಕವಾಗಿದೆ. ಈ ಮೊತ್ತವನ್ನು 2021ರ ಏಪ್ರಿಲ್ನಿಂದ ಮುಂದಿನ ಐದು ವರ್ಷಗಳಲ್ಲಿ ಸರ್ಕಾರಕ್ಕೆ ನೀಡಲಾಗುವುದು ಎಂದು ಘೋಷಿಸಲಾಗಿದೆ.