ಕರ್ನಾಟಕ

karnataka

ETV Bharat / business

ಸ್ಯಾಮ್​ಸಂಗ್ ಗ್ಯಾಲಕ್ಸಿ ಮೊಬೈಲ್​ ಖರೀದಿಸಿದ್ರೆ ₹ 5,000 ಬೋನಸ್​​... ಯಾವೆಲ್ಲ ಫೋನ್​ಗಳಿವೆ ಗೊತ್ತೆ..? - ಗ್ಯಾಲಕ್ಸಿ ಎಸ್​20 ಸೀರಿಸ್​ನಲ್ಲಿ ಹೊಸ ಆಫರ್

ಗ್ಯಾಲಕ್ಸಿ ಎಸ್ 20 ಮತ್ತು ಎಸ್ 20 ಅಲ್ಟ್ರಾ ಮೊಬೈಲ್​ ಅನ್ನು ಮುಂಗಡವಾಗಿ ಕಾಯ್ದಿರಿಸುವ ಸಂಭಾವ್ಯ ಗ್ರಾಹಕರು ಗ್ಯಾಲಕ್ಸಿ ಬಡ್ಸ್ 1,999 ರೂ.ಗೆ ಖರೀದಿಸಬಹುದು. ಗ್ಯಾಲಕ್ಸಿ ಎಸ್ 20 ಖರೀದಿಸುವರು ಅವುಗಳನ್ನು 2,999 ರೂ. ಕೊಂಡುಕೊಳ್ಳಬಹುದಾಗಿದೆ.

Samsung
ಸ್ಯಾಮ್​ಸಂಗ್

By

Published : Feb 27, 2020, 4:17 PM IST

ಗುರುಗ್ರಾಮ್​:ಸ್ಯಾಮ್​ಸಂಗ್​ ಕಂಪನಿಯು ಗುರುವಾರ ನೂತನ ಕೊಡುಗೆ ಘೋಷಿಸಿದ್ದು, ಗ್ಯಾಲಕ್ಸಿ ಎ20 ಸೀರಿಸ್​ಗೆ ಹಳೆಯ ಸ್ಮಾರ್ಟ್​ಫೋನ್​ ಎಕ್ಸ್​ಚೇಂಜ್​ ಮಾಡಿಕೊಂಡರೆ ₹ 5,000 ವರೆಗೂ ರಿಯಾಯಿತಿ ದೊರೆಯಲಿದೆ.

ಭಾರತದಲ್ಲಿ ಗ್ಯಾಲಕ್ಸಿ ಎಸ್​20 ಸ್ಮಾರ್ಟ್​ಫೋನ್​ ಬೆಲೆ ₹ 66,999, ಎಸ್​20+ ದರ ₹ 73,999 ಮತ್ತು ಗ್ಯಾಲಕ್ಸಿ ಎಸ್​20 ಅಲ್ಟ್ರ ಫೋನ್​ ₹ 92,999ಗೆ ಮಾರಾಟ ಆಗುತ್ತಿದೆ.

ಗ್ಯಾಲಕ್ಸಿ ಎಸ್ 20 ಮತ್ತು ಎಸ್ 20 ಅಲ್ಟ್ರಾ ಮೊಬೈಲ್​ ಅನ್ನು ಮುಂಗಡವಾಗಿ ಕಾಯ್ದಿರಿಸುವ ಸಂಭಾವ್ಯ ಗ್ರಾಹಕರು ಗ್ಯಾಲಕ್ಸಿ ಬಡ್ಸ್ 1,999 ರೂ.ಗೆ ಖರೀದಿಸಬಹುದು. ಗ್ಯಾಲಕ್ಸಿ ಎಸ್ 20 ಖರೀದಿಸುವರು ಅವುಗಳನ್ನು 2,999 ರೂ. ಕೊಂಡುಕೊಳ್ಳಬಹುದಾಗಿದೆ.

ಸ್ಯಾಮ್‌ಸಂಗ್ ಕೇರ್ (ಆಕಸ್ಮಿಕ ಮತ್ತು ದ್ರವ ಹಾನಿ ರಕ್ಷಣೆ) ಅನ್ನು ಕೇವಲ 1,999 ರೂ.ಯಲ್ಲಿ (ಮೂಲ ಬೆಲೆ ₹ 3,999) ದೊರೆಯಲಿದೆ. ಸ್ಯಾಮ್‌ಸಂಗ್ ಕೇರ್ ಯಾವುದೇ ರೀತಿಯ ಹಾನಿ ಅಥವಾ ದ್ರವ್ಯತ ಹಾನಿಯಿಂದ ಫೋನ್‌ಗೆ ಸಂಪೂರ್ಣ ರಕ್ಷಣೆ ನೀಡುತ್ತದೆ. ಇದು ಮುಂಭಾಗದಲ್ಲಿ ಪರದೆ ಹೊಂದಿದ್ದು, ಒಂದು ವರ್ಷದ ವಾಯ್ದೆ ಸಹ ಒಳಗೊಂಡಿದೆ.

ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್​ ತಯಾರಕರ ಜೊತೆಗೆ ನೆಟವರ್ಕ್​ ಸೇವೆ ನೀಡುವಂತಹ ರಿಲಯನ್ಸ್​ ಜಿಯೋ, ಏರ್​ಟೆಲ್ ಹಾಗೂ ವೊಡಾಫೋನ್- ಐಡಿಯಾ ಗ್ಯಾಲಕ್ಸಿ ಎಸ್​20 ಮೇಲೆ ಹೆಚ್ಚುವರಿ ಕೊಡುಗೆಗಳನ್ನು ನೀಡುತ್ತಿವೆ.

ABOUT THE AUTHOR

...view details