ಕರ್ನಾಟಕ

karnataka

ETV Bharat / business

Royal ಎನ್​​ಫೀಲ್ಡ್​​​​ನ ಅತಿ ಕಡಿಮೆ ಬೆಲೆಯ 6 ಶೈಲಿಯ​ ಬುಲೆಟ್​ ಬೈಕ್​ ಲಾಂಚ್​... ಖರೀದಿ ಹೇಗೆ? - ಮೋಟಾರ್‌ ಸೈಕಲ್

ಭಾರತೀಯ ಬೈಕ್​ ಪ್ರಿಯರ ಆಕಾಂಕ್ಷೆಗಳನ್ನು ಗಮನದಲ್ಲಿ ಇರಿಸಿಕೊಂಡು, ಆರು ವಿಭಿನ್ನ ಶೈಲಿಯ ಬೈಕ್​ಗಳನ್ನು ಟೈರ್​-2 ಹಾಗೂ ಟೈರ್- 3 ನಗರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಬೈಕ್​ಗಳ ಬೆಲೆಯೂ ₹ 1.12 ಲಕ್ಷದಿಂದ (ಎಕ್ಸ್​ ಶೋ ರೂಂ) ಆರಂಭವಾಗಲಿದೆ. ರಾಯಲ್​ ಎನ್​ಫೀಲ್ಡ್​ನ ಬುಲೆಟ್​ ಬೈಕ್​ಗಳಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಮಾರಾಟ ಆಗಲಿವೆ ಎಂದು ಹೇಳಲಾಗುತ್ತಿದೆ.

ಬಿಡುಗಡೆಯಾದ ಬೈಕ್​ಗಳು

By

Published : Aug 10, 2019, 9:07 PM IST

ಮುಂಬೈ:ಬುಲೆಟ್​​ ಬೈಕ್ ತಯಾರಕ ರಾಯಲ್ ಎನ್‌ಫೀಲ್ಡ್ ತನ್ನ ಐಕಾನಿಕ್ ಶೈಲಿಯ ಆರು ಬುಲೆಟ್​ ಬೈಕ್​ಗಳನ್ನು ಹೊಸ ರೂಪಾಂತರದಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.

ಭಾರತೀಯ ಬೈಕ್​ ಪ್ರಿಯರ ಆಕಾಂಕ್ಷೆಗಳನ್ನು ಗಮನದಲ್ಲಿ ಇರಿಸಿಕೊಂಡು ಆರು ವಿಭಿನ್ನ ಶೈಲಿಯ ಬೈಕ್​ಗಳನ್ನು ಟೈರ್​-2 ಹಾಗೂ ಟೈರ್- 3 ನಗರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಬೈಕ್​ಗಳ ಬೆಲೆಯೂ ₹ 1.12 ಲಕ್ಷದಿಂದ (ಎಕ್ಸ್​ ಶೋ ರೂಂ) ಆರಂಭವಾಗಲಿದೆ. ರಾಯಲ್​ ಎನ್​ಫೀಲ್ಡ್​ನ ಬುಲೆಟ್​ ಬೈಕ್​ಗಳಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಮಾರಾಟ ಆಗಲಿವೆ ಎಂದು ಹೇಳಲಾಗುತ್ತಿದೆ.

ದೇಶಾದ್ಯಂತ 930 ಡೀಲರ್​ಗಳನ್ನು ರಾಯಲ್​ ಎನ್​ಫೀಲ್ಡ್​ ಹೊಂದಿದೆ. ಹೊಸ ರೂಪಾಂತರದೊಂದಿಗೆ ಮಾರುಕಟ್ಟೆಗೆ ಬಂದಿರುವ ಬೈಕ್​ಗಳ ಬುಕಿಂಗ್ ಪ್ರಕ್ರಿಯೆ ಶುಕ್ರವಾರದಿಂದ ಆರಂಭವಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಸಣ್ಣ ಮತ್ತು ಮಧ್ಯಮ ನಗರಗಳಲ್ಲಿ ನಮ್ಮ ಕಂಪನಿಯ ಉತ್ಪನ್ನಕ್ಕೆ ಭಾರೀ ಬೇಡಿಕೆ ಕಂಡು ಬರುತ್ತಿರುವುದನ್ನು ಗಮನಿಸಿದ್ದೇವೆ. ಶೀಘ್ರದಲ್ಲೇ ಮಧ್ಯಮ ತೂಕದ ಮೋಟಾರ್‌ ಸೈಕಲ್ ವಿಭಾಗಕ್ಕೆ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಲಿದ್ದೇವೆ ಎಂದು ರಾಯಲ್ ಎನ್‌ಫೀಲ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನೋದ್ ಕೆ. ದಸಾರಿ ಹೇಳಿದರು.

ABOUT THE AUTHOR

...view details