ನವದೆಹಲಿ: '2020ರ ಫಾರ್ಚೂನ್ ಇಂಡಿಯಾ 500' ಭಾರತದ ಅತಿದೊಡ್ಡ ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಅಗ್ರ ಸ್ಥಾನಪಡೆದಿದೆ.
ನಿಧಾನಗತಿಯ ಆರ್ಥಿಕತೆಯ ಸವಾಲುಗಳ ಹೊರತಾಗಿಯೂ 2020ರ ಫಾರ್ಚೂನ್ ಇಂಡಿಯಾ ಪಟ್ಟಿಯಲ್ಲಿ ಆರ್‌ಐಎಲ್ ಅಗ್ರಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ. ಫಾರ್ಚೂನ್ ಇಂಡಿಯಾ 500 ಪಟ್ಟಿಯು ಕಂಪನಿಗಳ ಆದಾಯ ಆಧರಿಸಿದ್ದು, ಈ ವರ್ಷದ ಅಂಕಿ - ಅಂಶಗಳು 2019-2020ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿವೆ.
ಚಿಂತೆ ಬೇಡ,'ಆರ್ಥಿಕತೆ 'V' ಆಕಾರದಲ್ಲಿ ತ್ವರಿತ ಚೇತರಿಕೆ ಕಾಣುತ್ತಿದೆ': ವಿತ್ತ ಸಚಿವಾಲಯ
ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ಜಾಗತಿಕ ಆರ್ಥಿಕತೆಗೆ ತಗುಲಿದ್ದು, ಭಾರತದ ಅತಿದೊಡ್ಡ ಕಂಪನಿಗಳು ಕೂಡ ಇದರ ಪ್ರಭಾವಕ್ಕೆ ಒಳಗಾಗಿವೆ. ಭಾರತೀಯ ಕಾರ್ಪೊರೇಟ್ ವಲಯವು ಅದರ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಸ್ಥಿರತೆ ತೋರಿಸುತ್ತಿವೆ. ಜಾಗತಿಕ ಆರ್ಥಿಕತೆಯ ಭೂದೃಶ್ಯವು ವೇಗವಾಗಿ ಬದಲಾಗುತ್ತಿದೆ. ಸಾಂಕ್ರಾಮಿಕದ ನಂತರ ಮತ್ತು ಕಾರ್ಪೊರೇಟ್ ಭಾರತವು ಈ ಹೊಸ ಜಗತ್ತಿನ ದಿಕ್ಸೂಚಿ ಮಾಡುವ ಅಗತ್ಯವಿದೆ ಎಂದು ಫಾರ್ಚೂನ್ ಇಂಡಿಯಾ ಹೇಳಿದೆ.
2020 ಫಾರ್ಚೂನ್ ಇಂಡಿಯಾ -500 ಪಟ್ಟಿಯಲ್ಲಿ ಅಗ್ರ 10 ಕಂಪನಿಗಳು:
1. ರಿಲಯನ್ಸ್ ಇಂಡಸ್ಟ್ರೀಸ್
2. ಭಾರತೀಯ ತೈಲ ನಿಗಮ
3. ತೈಲ ಮತ್ತು ನೈಸರ್ಗಿಕ ಅನಿಲ ನಿಗಮ