ಮುಂಬೈ:ಷೇರುಪೇಟೆಯ ಸೋಮವಾರದ ವಹಿವಾಟಿನಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ತನ್ನ ಷೇರು ಮೌಲ್ಯದಲ್ಲಿ ಏರಿಕೆ ಕಂಡ ಕಾರಣ ಮಾರುಕಟ್ಟೆ ಬಂಡವಾಳ (ಎಂ- ಕ್ಯಾಪಿಟಲ್) 10 ಲಕ್ಷ ಕೋಟಿ ರೂ. ದಾಟಿದೆ.
ಇಂದಿನ ವಹಿವಾಟಿನ ಬೆಳಿಗ್ಗೆ 11.04ರ ವೇಳೆಗೆ ಬಿಎಸ್ಇನಲ್ಲಿ ಆರ್ಐಎಲ್ನ ಪ್ರತಿ ಷೇರು ಈ ಹಿಂದಿನ 1,593.10 ಮುಕ್ತಾಯದ ದರಕ್ಕಿಂತ ಶೇ 2ರಷ್ಟು ಅಥವಾ 31.30ರಷ್ಟು ಏರಿಕೆಯಾಗಿದೆ. ತತ್ಪರಿಣಾಮ ಮಧ್ಯಂತರ ವಹಿವಾಟಿನಂದು ಪ್ರತಿ ಷೇರು 1.614.85 ರೂ.ಗೆ ತಲುಪಿತು.