ಮುಂಬೈ: ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಬುಧವಾರದ ಆರಂಭಿಕ ವಹಿವಾಟಿನಲ್ಲಿ 16 ಲಕ್ಷ ಕೋಟಿ ರೂ. ಮಾರುಕಟ್ಟೆ ಬಂಡವಾಳ ಮೌಲ್ಯ ಗಳಿಸಿದ ಮೊದಲ ಭಾರತೀಯ ಸಂಸ್ಥೆಯಾಗಿದೆ.
ಮಾರುಕಟ್ಟೆಯಲ್ಲಿ ರಿಲಯನ್ಸ್ ಷೇರು ದಿನದ ವಹಿವಾಟು ಸಾರ್ವಕಾಲಿಕ ಗರಿಷ್ಠ 2,368 ರೂ.ಗೆ ತಲುಪಿದ ಬಳಿಕ ಈ ಸಾಧನೆಗೈದ ದೇಶದ ಪ್ರಪ್ರಥಮ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ. ಆರ್‌ಐಎಲ್‌ನ ಷೇರು ಬೆಲೆ ಬಿಎಸ್‌ಇನಲ್ಲಿ ಹಿಂದಿನ ವಹಿವಾಟಿನದ 2,317 ರೂ.ಗೆ ಹೋಲಿಸಿದರೆ ಶೇ 2.2ರಷ್ಟು ಏರಿಕೆ ಕಂಡು 2,368 ರೂ.ಗೆ ತಲುಪಿತು.