ನವದೆಹಲಿ:ಮೈಕ್ರೊಮ್ಯಾಕ್ಸ್ ಕಂಪನಿಯ ಸಹ ಸಂಸ್ಥಾಪಕ ರಾಹುಲ್ ಶರ್ಮಾ ಸ್ಥಾಪಿಸಿದ ಎಲೆಕ್ಟ್ರಿಕ್ ಕಂಪನಿಯಿಂದ ಭಾರತದ ಪ್ರಥಮ ಎಲೆಕ್ಟ್ರಿಕ್ ಬೈಕ್ ಬುಧವಾರ ಲೋಕಾರ್ಪಣೆಗೊಂಡಿದೆ.
‘ರೆವೊಲ್ಟ್ ಮೋಟರ್ಸ್ ‘ ತನ್ನ ಮೊದಲ ಎಲೆಕ್ಟ್ರಿಕ್ ಬೈಕನ್ನು ‘ರೆವೊಲ್ಟ್ ಆರ್ವಿ 400' ಮತ್ತು 'ಆರ್ವಿ 300' ಹೆಸರಿನಡಿ ಎರಡು ಬಣ್ಣಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ. ಅನೇಕ ವಿಶೇಷತೆಗಳನ್ನು ಒಳಗೊಂಡಿರುವ ಎಲೆಕ್ಟ್ರಿಕ್ ಬೈಕ್ ಇದಾಗಿದ್ದು, ಸಂಪೂರ್ಣವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಬಳಸಿಕೊಂಡು ತಯಾರಿಸಲಾಗಿದೆ. ಈ ಬೈಕ್ನಲ್ಲಿ 4ಜಿ ಸಿಮ್ ಕಾರ್ಡ್ ಅಳವಡಿಸಲಾಗಿದ್ದು, ಇಂಟರ್ನೆಟ್ ಸಂಪರ್ಕದ ಮೂಲಕವೂ ಚಾಲನೆ ಮಾಡಬಹುದಾಗಿದೆ. ಆಂಡ್ರಾಯ್ಡ್ ಜೊತೆಗೆ ಐಫೋನ್ ಆ್ಯಪ್ ಇದಕ್ಕೆ ಹೊಂದಿಕೆಯಾಗಲಿದ್ದು, ಮೊಬೈಲ್ ಮುಖೇನ ಬೈಕ್ ನಿಯಂತ್ರಿಸಬಹುದು.