ನವದೆಹಲಿ: ಇನ್‌ಪುಟ್ ವೆಚ್ಚ ಹೆಚ್ಚಳದ ಪರಿಣಾವಾಗಿ ಮುಂದಿನ ತಿಂಗಳಿನಿಂದ ತನ್ನ ಎಲ್ಲಾ ಮಾದರಿ ಕಾರುಗಳ ಬೆಲೆಯಲ್ಲಿ 28,000 ರೂ. ಹೆಚ್ಚಿಸುವುದಾಗಿ ವಾಹನ ತಯಾರಕ ರೆನಾಲ್ಟ್ ಇಂಡಿಯಾ ತಿಳಿಸಿದೆ.
ಕ್ವಿಡ್, ಡಸ್ಟರ್ ಮತ್ತು ಟ್ರೈಬರ್‌ನಂತಹ ಮಾದರಿಗಳನ್ನು ಮಾರಾಟ ಮಾಡುವ ಕಂಪನಿಯು ಜನವರಿಯಿಂದ ಬೆಲೆ ಏರಿಕೆಯ ಮಾಡಲ್ ಮತ್ತು ಉತ್ಪನ್ನಗಳಲ್ಲಿ ಬದಲಾವಣೆ ಆಗಲಿದೆ ಎಂದು ಹೇಳಿದೆ.
ಸಾಂಕ್ರಾಮಿಕ ಸಮಯದಲ್ಲಿ ಉಕ್ಕು, ಅಲ್ಯೂಮಿನಿಯಂ, ಪ್ಲಾಸ್ಟಿಕ್ ಮತ್ತು ಇತರ ವೆಚ್ಚಗಳ ಹೆಚ್ಚಳವಾಗಿದೆ. ಇನ್‌ಪುಟ್ ವೆಚ್ಚಗಳು ಕೂಡ ಸ್ಥಿರವಾಗಿ ಏರಿಕೆ ಆಗುತ್ತಿದೆ. ಅನಿವಾರ್ಯವಾಗಿ ದರ ಏರಿಕೆ ಮೊರೆ ಹೋಗಬೇಕಾಗಿದೆ ಎಂದು ರೆನಾಲ್ಟ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.
ಕಾರು ಪ್ರಿಯರಿಗೆ ಶಾಕಿಂಗ್!: ಹೊಸ ವರ್ಷದಿಂದ ಈ ಕಾರುಗಳು ದರದಲ್ಲಿ ಭಾರಿ ಏರಿಕೆ
ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚದ ಪರಿಣಾಮ ಸರಿದೂಗಿಸಲು 2021ರ ಜನವರಿ 1ರಿಂದ ದ್ವಿಚಕ್ರ ವಾಹನಗಳ ಪ್ರಮುಖ ಹೀರೋ ಮೊಟೊಕಾರ್ಪ್ ತನ್ನ ವಾಹನಗಳ ಬೆಲೆಯನ್ನು 1,500 ರೂ.ವರೆಗೆ ಹೆಚ್ಚಿಸುವುದಾಗಿ ಘೋಷಿಸಿತು. ಎಂಜಿ ಮೋಟಾರ್ ಇಂಡಿಯಾ ಸಹ ಶೇ 3ರಷ್ಟು ಏರಿಕೆ ಮಾಡುವುದಾಗಿ ಪ್ರಕಟಿಸಿದೆ. ಇದರೊಂದಿಗೆ ಮಾರುತಿ ಸುಜುಕಿ ಇಂಡಿಯಾ, ಫೋರ್ಡ್ ಇಂಡಿಯಾ (ಶೇ 3ರಷ್ಟು) ಹಾಗೂ ಮಹೀಂದ್ರಾ ಅಂಡ್ ಮಹೀಂದ್ರಾ ಕೂಡ ಸೇರಿದೆ.