ನವದೆಹಲಿ :ರಿಲಯನ್ಸ್ ರಿಟೇಲ್ ವೆಂಚರ್ಸ್, ಕಿಶೋರ್ ಬಿಯಾನಿ ನೇತೃತ್ವದ ಫ್ಯೂಚರ್ ಗ್ರೂಪ್ ಸ್ವಾಧೀನಪಡಿಸಿಕೊಳ್ಳುವ ಗಡುವನ್ನು ಇನ್ನೂ ಆರು ತಿಂಗಳು ವಿಸ್ತರಿಸಿದೆ. ಈ ಹಿಂದೆ ನಿಗದಿಪಡಿಸಿದ್ದ 2021ರ ಮಾರ್ಚ್ 31ರ ದಿನಾಂಕವನ್ನು 2021ರ ಸೆಪ್ಟೆಂಬರ್ 30ಕ್ಕೆ ಬದಲಾಯಿಸಲಾಗಿದೆ ಎಂದು ರಿಲಯನ್ಸ್ ತಿಳಿಸಿದೆ.
ಫ್ಯೂಚರ್ ಗ್ರೂಪ್‌ನ ಚಿಲ್ಲರೆ ವ್ಯಾಪಾರ, ಸಗಟು, ಲಾಜಿಸ್ಟಿಕ್ಸ್ ಮತ್ತು ಉಗ್ರಾಣ ವ್ಯವಹಾರಗಳನ್ನು ಖರೀದಿಸಲು ರಿಲಯನ್ಸ್ ಕಳೆದ ವರ್ಷ ಒಪ್ಪಂದ ಮಾಡಿಕೊಂಡಿತ್ತು. ಇದರ ಮೌಲ್ಯ 24,713 ಕೋಟಿ ರೂ. ಆಗಿದೆ.