ಕರ್ನಾಟಕ

karnataka

ETV Bharat / business

ಬಿಇವಿಯಲ್ಲಿ ಬಂಡವಾಳ ಹೂಡಿ ಬಿಲ್​ ಗೇಟ್ಸ್​, ಬೆಝೋಸ್​, ಜಾಕ್​ ಮಾ ಸಾಲಿಗೆ ಸೇರಿದ ಮುಖೇಶ್ ಅಂಬಾನಿ! - ಆರ್​​ಐಎಲ್ ಬ್ರೇಕ್​ಥ್ರೊ ಎನರ್ಜಿ ವೆಂಚರ್ಸ್

ಸೀಮಿತ ಪಾಲುದಾರಿಕೆಯ ಬ್ರೇಕ್‌ಥ್ರೂ ಎನರ್ಜಿ ವೆಂಚರ್ಸ್ II, ಎಲ್​​ಪಿಯಲ್ಲಿ (ಬಿಇವಿ) ಕಂಪನಿಯು 50 ಮಿಲಿಯನ್ ಬಂಡವಾಳ ಹೂಡಿಕೆಯ ಒಪ್ಪಂದ ಮಾಡಿಕೊಂಡಿದೆ. ಇದನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಡೆಲವೇರ್ ಸ್ಟೇಟ್ ಲಾಸ್ ಅಡಿ ಹೊಸದಾಗಿ ಸಂಯೋಜಿಸಲಾಗಿದೆ ಎಂದು ಆರ್​​ಐಎಲ್​ ವಿನಿಮಯ ಫೈಲಿಂಗ್​ನಲ್ಲಿ ತಿಳಿಸಿದೆ.

Reliance
ರಿಲಯನ್ಸ್​

By

Published : Nov 13, 2020, 4:12 PM IST

ನವದೆಹಲಿ:ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ (ಆರ್​​ಐಎಲ್), ಬ್ರೇಕ್​ಥ್ರೊ ಎನರ್ಜಿ ವೆಂಚರ್ಸ್​​ನಲ್ಲಿ (ಬಿಇವಿ) 50 ಮಿಲಿಯನ್ ಡಾಲರ್​ ಹೂಡಿಕೆ ಒಪ್ಪಂದ ಮಾಡಿಕೊಂಡಿದೆ.

ಈ ಬಂಡವಾಳ ಹೂಡಿಕೆ ನಿಧಿಯ ಗಾತ್ರ ಶೇ 5.75ರಷ್ಟಿದೆ. ಮುಂದಿನ 8-10 ವರ್ಷಗಳಲ್ಲಿ ಈ ಹೂಡಿಕೆ ತಾತ್ಕಾಲಿಕವಾಗಿ ಮಾಡಲಾಗುವುದು.

ಸೀಮಿತ ಪಾಲುದಾರಿಕೆಯ ಬ್ರೇಕ್‌ಥ್ರೂ ಎನರ್ಜಿ ವೆಂಚರ್ಸ್ II, ಎಲ್​​ಪಿಯಲ್ಲಿ (ಬಿಇವಿ) ಕಂಪನಿಯು 50 ಮಿಲಿಯನ್ ಬಂಡವಾಳ ಹೂಡಿಕೆಯ ಒಪ್ಪಂದ ಮಾಡಿಕೊಂಡಿದೆ. ಇದನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಡೆಲವೇರ್ ಸ್ಟೇಟ್ ಲಾಸ್ ಅಡಿ ಹೊಸದಾಗಿ ಸಂಯೋಜಿಸಲಾಗಿದೆ ಎಂದು ಆರ್​​ಐಎಲ್​ ವಿನಿಮಯ ಫೈಲಿಂಗ್​ನಲ್ಲಿ ತಿಳಿಸಿದೆ.

ಈ ಹೂಡಿಕೆಯೊಂದಿಗೆ ಮುಖೇಶ್ ಅಂಬಾನಿ ಅವರು ಬಿಲ್ ಗೇಟ್ಸ್, ಜೆಫ್ ಬೆಝೋಸ್, ಮೈಕೆಲ್ ಬ್ಲೂಮ್‌ಬರ್ಗ್, ಜ್ಯಾಕ್ ಮಾ, ಮಸಯೋಶಿ ಸನ್ ಸೇರಿದಂತೆ ಇತರರು ಈ ನಿಧಿಯಲ್ಲಿ ಹೂಡಿಕೆ ಮಾಡಿದ ದಿಗ್ಗಜ ಉದ್ಯಮಿಗಳಾಗಿದ್ದಾರೆ.

ಇಂಧನ ಮತ್ತು ಕೃಷಿ ತಂತ್ರಜ್ಞಾನಅಭಿವೃದ್ಧಿ ಉದ್ದೇಶಗಳಿಗೆ ಹೂಡಿಕೆ ಮಾಡುವ ಮೂಲಕ ಹವಾಮಾನ ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯಲು ಬಿಇವಿ ಪ್ರಯತ್ನಿಸುತ್ತದೆ. ಶುದ್ಧ ಇಂಧನ ಪರಿಹಾರಗಳಲ್ಲಿ ಹೊಸತನವನ್ನು ಬೆಂಬಲಿಸಲು ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಬಿಇವಿ ಹೂಡಿಕೆ ಮಾಡುತ್ತದೆ. ನಿವ್ವಳ ಶೂನ್ಯ ಹೊಗೆ ಹೊರಸೂಸುವಿಕೆಗೆ ಕೆಲಸ ಮಾಡುವ ಕಂಪನಿಗಳಲ್ಲಿ ಹೂಡಿಕೆ ಮಾಡುವುದು ನಿಧಿಯ ಉದ್ದೇಶವಾಗಿದೆ.

ABOUT THE AUTHOR

...view details