ಕರ್ನಾಟಕ

karnataka

ETV Bharat / business

ರಿಲಯನ್ಸ್​ಗೆ ಕೊರೊನಾ ಏಟು.. ಬಯಲಾಯ್ತು ಅಂಬಾನಿ ಸಾಮ್ರಾಜ್ಯದ 90 ದಿನಗಳ ಬಂಡವಾಳ! - Reliance Industries Q2 revenue

ಕೊರೊನಾ ಪ್ರೇರೇಪಿತ ತೈಲ ಬೇಡಿಕೆ ಕುಸಿದ ನಂತರ ಬಿಲಿಯನೇರ್ ಮುಖೇಶ್ ಅಂಬಾನಿಯ ಆರ್​ಐಎಲ್​, ಎರಡನೇ ತ್ರೈಮಾಸಿಕದ ನಿವ್ವಳ ಲಾಭದಲ್ಲಿ ಶೇ 15ರಷ್ಟು ಕುಸಿತ ಕಂಡಿದೆ. ಜುಲೈ-ಸೆಪ್ಟೆಂಬರ್​​ನಲ್ಲಿ ಒಟ್ಟು ನಿವ್ವಳ ಲಾಭ 9,567 ಕೋಟಿ ರೂ. ಹೋಲಿಸಿದರೆ, ಒಂದು ವರ್ಷದ ಹಿಂದಿನ 11,262 ಕೋಟಿ ರೂ.ಗಿಂತ ಕಡಿಮೆಯಾಗಿದೆ..

Reliance Industries
ರಿಲಯನ್ಸ್ ಇಂಡಸ್ಟ್ರೀಸ್​

By

Published : Oct 31, 2020, 3:53 PM IST

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ ಅಂಗಸಂಸ್ಥೆಯಾದ ರಿಲಯನ್ಸ್ ರಿಟೇಲ್​ ವೆಂಚರ್ಸ್​ ಲಿಮಿಟೆಡ್​ನಲ್ಲಿ ಸಾವಿರಾರು ಕೋಟಿ ರೂ. ಹೂಡಿಕೆ ಹರಿದು ಬಂದಿದ್ದರೂ ಕೊರೊನಾ ಛಾಯೆಯಿಂದ ತಪ್ಪಿಸಿಕೊಳ್ಳಲು ಸಂಸ್ಥೆಗೆ ಸಾಧ್ಯವಾಗಲಿಲ್ಲ.

ಕೊರೊನಾ ಪ್ರೇರೇಪಿತ ತೈಲ ಬೇಡಿಕೆ ಕುಸಿದ ನಂತರ ಬಿಲಿಯನೇರ್ ಮುಖೇಶ್ ಅಂಬಾನಿಯ ಆರ್​ಐಎಲ್​, ಎರಡನೇ ತ್ರೈಮಾಸಿಕದ ನಿವ್ವಳ ಲಾಭದಲ್ಲಿ ಶೇ. 15ರಷ್ಟು ಕುಸಿತ ಕಂಡಿದೆ.

ಜುಲೈ-ಸೆಪ್ಟೆಂಬರ್​​ನಲ್ಲಿ ಒಟ್ಟು ನಿವ್ವಳ ಲಾಭ 9,567 ಕೋಟಿ ರೂ. ಹೋಲಿಸಿದ್ರೆ, ಒಂದು ವರ್ಷದ ಹಿಂದಿನ 11,262 ಕೋಟಿ ರೂ.ಗಿಂತ ಕಡಿಮೆಯಾಗಿದೆ.

ಸಾಂಕ್ರಾಮಿಕ ರೋಗ ಉಲ್ಬಣಗೊಂಡ ನಂತರ ದೇಶಾದ್ಯಂತ ಲಾಕ್​ಡೌನ್​ ಹೇರಲಾಯಿತು. ಗೃಹ ಬಂಧಿಯಾದ ಜನರಿಂದಾಗಿ ಇಂಧನ ಬೇಡಿಕೆ ಪಾತಾಳ ಕಂಡಿತು. ಆರ್ಥಿಕತೆಯನ್ನು ಗಟ್ಟಿಗೊಳಿಸಿತು. ಸಾಂಪ್ರದಾಯಿಕ ನಗದು ವಹಿವಾಟು, ತೈಲ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ಸ್​​ ಮೇಲೆ ಬಲವಾದ ಹೊಡೆತ ನೀಡಿತು. ತುಸು ಸಮಾಧಾನ ಎಂಬುವಂತೆ ಟೆಲಿಕಾಂ ಟು ರಿಟೇಲ್​ವರೆಗಿನ ಗ್ರಾಹಕ ಆಧಾರಿತ ವ್ಯವಹಾರಗಳ ಆದಾಯವು ಉತ್ತಮವಾಗಿ ಮುಂದುವರಿಯಿತು.

ಆರ್‌ಐಎಲ್‌ನ ಜಿಯೋ ಟೆಲಿಕಾಂ ಮತ್ತು ಡಿಜಿಟಲ್ ಅಂಗಸಂಸ್ಥೆಯ ನಿವ್ವಳ ಲಾಭವು 2,520 ಕೋಟಿ ರೂ.ಗಳಿಂದ ಶೇ.12.9ರಷ್ಟು ಏರಿಕೆಯಾಗಿ 2,844 ಕೋಟಿ ರೂ.ಗೆ ತಲುಪಿದೆ. ತ್ರೈಮಾಸಿಕಕ್ಕೆ ಹೋಲಿಸಿದ್ರೆ ಆದಾಯವು ಶೇ.5.6 ಹೆಚ್ಚಳದಿಂದ 17,481 ಕೋಟಿ ರೂ.ಯಷ್ಟಾಗಿದೆ.

ನಾಲ್ಕು ವರ್ಷದ ಜಿಯೋ ಚಂದಾದಾರರ ಸಂಖ್ಯೆ 406 ದಶಲಕ್ಷಕ್ಕೆ ಏರಿದ ನಂತರ ಇದು ಭಾರತದ ಅತಿದೊಡ್ಡ ಟಿಲಿಕಾಂ ಆಪರೇಟ್​ ಆಗಿದೆ. 7.3 ಮಿಲಿಯನ್ ಚಂದಾದಾರರ ನಿವ್ವಳ ಸೇರ್ಪಡೆ ಮತ್ತು ಪ್ರತಿ ಬಳಕೆದಾರರ ಆದಾಯ 145 ರೂ.ಗೆ ಏರಿದುವುದು ಟೆಲಿಕಾಂ ವ್ಯವಹಾರ ಹೆಚ್ಚಿಸಲು ಸಹಾಯವಾಗಿದೆ.

ಮಾರುಕಟ್ಟೆ ಮತ್ತು ಮಾಲ್‌ಗಳು ಪುನರಾರಂಭದ ಬಳಿಕ ಕಂಪನಿಯ ಚಿಲ್ಲರೆ ವ್ಯಾಪಾರವು ಬಹುತೇಕ ಸಮತಟ್ಟಾದ ಆದಾಯದೊಂದಿಗೆ ಚೇತರಿಸಿಕೊಳ್ಳುತ್ತಿದೆ. ಶೇ 14ರಷ್ಟು ಕಡಿಮೆಯಾದ ಇಬಿಐಟಿಡಿಎ (ಬಡ್ಡಿ, ತೆರಿಗೆ, ಸವಕಳಿ ಮತ್ತು ಭೋಗ್ಯಕ್ಕೂ ಮುಂಚಿನ ಗಳಿಕೆ) 2,009 ಕೋಟಿ ರೂ.ಯಷ್ಟಾಗಿದೆ.

ಎರಡನೇ ತ್ರೈಮಾಸಿಕದ ವೇಳೆಗೆ ಶೇ 85ರಷ್ಟು ಚಿಲ್ಲರೆ ಅಂಗಡಿಗಳು ತೆರೆದಿವೆ ಎಂದು ರಿಲಯನ್ಸ್ ಹೇಳಿದೆ. 232 ಮಳಿಗೆಗಳು ಹೊಸದಾಗಿ ಸೇರ್ಪಡೆ ಆಗಿದ್ದು, ಒಟ್ಟು ಮಳಿಗೆಗಳ ಸಂಖ್ಯೆ 11,931ಕ್ಕೆ ತಲುಪಿದೆ.

ಡಿಜಿಟಲ್ ಮತ್ತು ಚಿಲ್ಲರೆ ಘಟಕಗಳ ಷೇರುಗಳ ಮಾರಾಟ ಮತ್ತು ರೈಟ್ಸ್​ ಹಂಚಿಕೆಯಿಂದ ಅಂಬಾನಿ ಏಪ್ರಿಲ್‌ನಿಂದ 2.5 ಲಕ್ಷ ಕೋಟಿ ರೂ. ಪಡೆದಿದ್ದಾರೆ. ಈ ಪೈಕಿ ಈಗಾಗಲೇ 1.76 ಲಕ್ಷ ಕೋಟಿ ರೂ. ಸಾಲ ಕಳೆದು ಶೂನ್ಯ ಡೆಬಿಟ್​ ಗುರಿ ಸಾಧಿಸಿದೆ.

ಪೆಟ್ರೋಕೆಮಿಕಲ್ಸ್ ಆದಾಯವು ಶೇ 23ರಷ್ಟು ಕುಸಿದು 29,665 ಕೋಟಿ ರೂ. ತಲುಪಿದೆ. ತೆರಿಗೆ ಪೂರ್ವದ ಲಾಭವು ಶೇ 33ರಷ್ಟು ಇಳಿದು 5,964 ಕೋಟಿ ರೂ.ಯಷ್ಟಾಗಿದೆ. ಆದಾಯವು ಶೇ 36ರಷ್ಟು ಕುಸಿದಿದ್ದರಿಂದ ಇಬಿಐಟಿಎ (ಬಡ್ಡಿ, ತೆರಿಗೆ ಮತ್ತು ಭೋಗ್ಯಕ್ಕೆ ಮುಂಚಿನ ಗಳಿಕೆ) ಸುಮಾರು 3,002 ಕೋಟಿ ರೂ.ಯಷ್ಟಿದೆ.

ABOUT THE AUTHOR

...view details