ಕರ್ನಾಟಕ

karnataka

ETV Bharat / business

ರಿಲಯನ್ಸ್​​ಗೆ ಸಂಕ್ರಮಣ ಕಾಲ: 14 ಲಕ್ಷ ಕೋಟಿ ರೂ. ದಾಟಿದ ಮಾರುಕಟ್ಟೆ ಬಂಡವಾಳ! - ರಿಲಯನ್ಸ್ ಜಿಯೊ

ಹೂಡಿಕೆದಾರರ ಲವಲವಿಕೆಯ ಮನೋಭಾವದ ಬಳಿಕ ಕಂಪನಿಯ ಮಾರುಕಟ್ಟೆ ಮೌಲ್ಯಮಾಪನವು ಗುರುವಾರ 14,04,123.26 ಕೋಟಿ ರೂ. ತಲುಪಿದೆ. ದಾಖಲೆಯ ನಿಧಿ ಸಂಗ್ರಹಣೆ ಮತ್ತು ಸಾಲ ಪೂರ್ವ ಪಾವತಿಗಳ ನಂತರ ರಿಲಯನ್ಸ್ ಇಂಡಸ್ಟ್ರೀಸ್ ಈಗ ಹೆಚ್ಚಿನ ದ್ರವ್ಯತೆಯೊಂದಿಗೆ ಬಲವಾದ ಬ್ಯಾಲೆನ್ಸ್ ಶೀಟ್ ಹೊಂದಿದೆ.

Mukesh Ambani
Mukesh Ambani

By

Published : Jun 3, 2021, 1:43 PM IST

ಮುಂಬೈ:ಸತತ 7 ದಿನಗಳ ಮಾರುಕಟ್ಟೆ ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ (ಆರ್​ಐಎಲ್​) ಷೇರುಗಳ ಮೌಲ್ಯದಲ್ಲಿ ಹೆಚ್ಚಳ ಕಂಡುಬಂದಿದ್ದರ ಪರಿಣಾಮ ಆರ್​ಐಎಲ್ ಮಾರುಕಟ್ಟೆ ಮೌಲ್ಯ 14 ಲಕ್ಷ ಕೋಟಿ ರೂ. ದಾಟಿದೆ.

ಈ ಏಳು ವಹಿವಾಟಿನ ಅವಧಿಯಲ್ಲಿ ಆರ್​ಐಎಲ್​ನ ಪ್ರತಿ ಷೇರುಗಳ ಮೌಲ್ಯದಲ್ಲಿ ಶೇ. 14.53ರಷ್ಟು ಜಿಗಿತ ಕಂಡಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟವಾದ 2,250 ರೂ.ಗೆ ತಲುಪಿದೆ.

ಹೂಡಿಕೆದಾರರ ಲವಲವಿಕೆಯ ಮನೋಭಾವದ ಬಳಿಕ ಕಂಪನಿಯ ಮಾರುಕಟ್ಟೆ ಮೌಲ್ಯಮಾಪನವು ಗುರುವಾರ 14,04,123.26 ಕೋಟಿ ರೂ. ತಲುಪಿದೆ. ದಾಖಲೆಯ ನಿಧಿ ಸಂಗ್ರಹಣೆ ಮತ್ತು ಸಾಲ ಪೂರ್ವ ಪಾವತಿಗಳ ನಂತರ ರಿಲಯನ್ಸ್ ಇಂಡಸ್ಟ್ರೀಸ್ ಈಗ ಹೆಚ್ಚಿನ ದ್ರವ್ಯತೆಯೊಂದಿಗೆ ಬಲವಾದ ಬ್ಯಾಲೆನ್ಸ್ ಶೀಟ್ ಹೊಂದಿದೆ.

ಟೆಲಿಕಾಂ ಆರ್ಮ್ ಜಿಯೋ, ಚಿಲ್ಲರೆ ಮತ್ತು ತೈಲದಿಂದ ರಾಸಾಯನಿಕಗಳ ವ್ಯವಹಾರಗಳಲ್ಲಿ ಸದೃಢವಾದ ಬೆಳವಣಿಗೆ ಕಂಡುಬರುತ್ತಿರುವುದು ಮಾರುಕಟ್ಟೆ ಮೌಲ್ಯದ ಹೆಚ್ಚಳಕ್ಕೆ ಕಾರಣವಾಗಿವೆ ಎಂದು ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಹೇಳಿದ್ದಾರೆ.

ಬುಧವಾರ ಬಿಡುಗಡೆಯಾದ ಕಂಪನಿಯ ಇತ್ತೀಚಿನ ವಾರ್ಷಿಕ ವರದಿಯಲ್ಲಿ, ಕಂಪನಿಯು ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಕಿರು ಷೇರು ಪಾಲು ಮಾರಾಟ ಮಾಡಿದೆ. ಅದರ ಟೆಲಿಕಾಂ ಮತ್ತು ಡಿಜಿಟಲ್ ವ್ಯವಹಾರವನ್ನು ಹೊಂದಿರುವ ಘಟಕ ಮತ್ತು ಚಿಲ್ಲರೆ ಮಾರಾಟ ವಿಭಾಗವು ಸುಮಾರು 2 ಲಕ್ಷ ಕೋಟಿ ರೂ. ಆಗಿದೆ. ಇಂಧನ ಚಿಲ್ಲರೆ ವ್ಯಾಪಾರದಲ್ಲಿ ಶೇ. 49ರಷ್ಟು ಅಂದರೆ 7,629 ಕೋಟಿ ರೂ. ಮತ್ತು ಹಕ್ಕುಗಳ ವಿತರಣೆಯ ಮೂಲಕ ಇನ್ನೂ 53,124 ಕೋಟಿ ರೂ. ಆಗಿದೆ ಎಂದು ಕಂಪನಿ ಹೇಳಿದೆ.

ನಾವು ಈಗ ಹೆಚ್ಚಿನ ದ್ರವ್ಯತೆಯೊಂದಿಗೆ ಬಲವಾದ ಬ್ಯಾಲೆನ್ಸ್ ಶೀಟ್ ಹೊಂದಿದ್ದೇವೆ. ಅದು ನಮ್ಮ ಮೂರು ಹೈಪರ್-ಗ್ರೋತ್​ ಎಂಜಿನ್​ಗಳಾದ ಜಿಯೋ, ರಿಟೇಲ್ ಮತ್ತು ಒ2ಸಿ ಬೆಳವಣಿಗೆ ಯೋಜನೆಗಳನ್ನು ಬೆಂಬಲಿಸುತ್ತದೆ ಎಂದು ಅಂಬಾನಿ ತಿಳಿಸಿದ್ದಾರೆ.​

ABOUT THE AUTHOR

...view details