ಕರ್ನಾಟಕ

karnataka

ETV Bharat / business

ಮಾರುಕಟ್ಟೆ ಬಂಡವಾಳದಲ್ಲಿ 14 ಲಕ್ಷ ಕೋಟಿ ರೂ. ದಾಟಿದ ದೇಶದ ಮೊದಲ ಕಂಪನಿ ರಿಲಯನ್ಸ್​ !

ಆರ್‌ಐಎಲ್ ದೇಶದ ಅತಿದೊಡ್ಡ ಅತ್ಯಮೂಲ್ಯ ಕಂಪನಿಯಾಗಿದ್ದರೆ, ಎರಡನೇ ಸ್ಥಾನದಲ್ಲಿರುವ ಟಿಸಿಎಸ್ 8,07,419.38 ಕೋಟಿ ರೂ. ಎಂ - ಕ್ಯಾಪ್​ ಹೊಂದಿದ್ದರೆ, ಎಚ್‌ಡಿಎಫ್‌ಸಿ ಬ್ಯಾಂಕ್ ಮೂರನೇ ಸ್ಥಾನದಲ್ಲಿ 6,11,095.46 ಕೋಟಿ ರೂ. ಹೊಂದಿದೆ.

Reliance
ರಿಲಯನ್ಸ್​

By

Published : Jul 24, 2020, 3:00 PM IST

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​​ನ ಮಾರುಕಟ್ಟೆ ಮೌಲ್ಯವು ಶುಕ್ರವಾರದ ವಹಿವಾಟಿನದ ದಿನದಂದು 14 ಲಕ್ಷ ಕೋಟಿ ರೂ. ದಾಟಿದೆ.

ನಿನ್ನೆ ಜಾಗತಿಕ ಅಗ್ರ 50 ಅಮೂಲ್ಯ ಕಂಪನಿಗಳ ಒಳಗೆ ಸ್ಥಾನಪಡೆದ ದೇಶದ ಏಕೈಕ ಕಂಪನಿ ರಿಲಯನ್ಸ್​, ಇಂದಿನ ವಹಿವಾಟಿನಲ್ಲಿ ಶೇ 4ರಷ್ಟು ಷೇರು ಮೌಲ್ಯ ಏರಿಕೆಯಾಗಿದೆ. ಭಾಗಶಃ ಪಾವತಿಸಿದ ಷೇರುಗಳು 53,821 ಕೋಟಿ ರೂ. ಮಾರುಕಟ್ಟೆ ಬಂಡವಾಳ ಹೊಂದಿದೆ. ರಿಲಯನ್ಸ್ ಇಂಡಸ್ಟ್ರೀಸ್​​ನ ಒಟ್ಟು ಮಾರುಕಟ್ಟೆ ಬಂಡವಾಳೀಕರಣವು 14,07,854.41 ಕೋಟಿ ರೂ.ಯಷ್ಟಿದೆ.

ದೇಶದ ಅತ್ಯಮೂಲ್ಯ ಸಂಸ್ಥೆಯ ಷೇರು ಮೌಲ್ಯದಲ್ಲಿ ಶೇ 4.32ರಷ್ಟು ಜಿಗಿದು ದಾಖಲೆಯ ಗರಿಷ್ಠ 2,149.70 ರೂ.ಗೆ ತಲುಪಿದೆ. ಬಿಎಸ್‌ಇಯ ಬೆಳಗಿನ ವಹಿವಾಟಿನಲ್ಲಿ ತನ್ನ ಮಾರುಕಟ್ಟೆ ಮೌಲ್ಯಮಾಪನವನ್ನು 13,54,033.41 ಕೋಟಿ ರೂ.ನಿಂದ 14ಲಕ್ಷಕ್ಕೆ ಏರಿಕೆಯಾಗಿದೆ.

ಗುರುವಾರದ ವಹಿವಾಟಿನಂದು ಶೇ 3ರಷ್ಟು ಏರಿಕೆ ಕಂಡಿದ್ದು, ಕಂಪನಿಯ ಚಿಲ್ಲರೆ ವ್ಯಾಪಾರ ವಿಭಾಗದಲ್ಲಿ ಅಮೆಜಾನ್ ತನ್ನ ಪಾಲು ಎದುರು ನೋಡುತ್ತಿದೆ ಎಂಬ ವರದಿಗಳು ಹರಿದಾಡುತ್ತಿವೆ.

ABOUT THE AUTHOR

...view details