ಕರ್ನಾಟಕ

karnataka

ETV Bharat / business

ರಿಲಯನ್ಸ್​- ಫ್ಯೂಚರ್ ಡೀಲ್ ಪರಿಶೀಲನೆ ಹಿಂದಕ್ಕೆ ಪಡೆದ ಬಿಎಸ್​​ಇ: ಆಸ್ತಿ ಮಾರಾಟಕ್ಕೆ ಸೆಬಿ ಅಸ್ತು

ಷೇರುದಾರರನ್ನು ಅಥವಾ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಅನುಮೋದನೆ ಕೋರುವಾಗ, ದೆಹಲಿ ಹೈಕೋರ್ಟ್‌ನ ಮುಂದೆ ಬಾಕಿ ಇರುವ ದಾವೆ ಮತ್ತು ಅಮೆಜಾನ್ ಒಪ್ಪಂದಕ್ಕೆ ಸ್ಪರ್ಧಿಸುವ ಮಧ್ಯಸ್ಥಿಕೆ ವಿಚಾರಣೆಯನ್ನು ನಿರ್ದಿಷ್ಟವಾಗಿ ನಮೂದಿಸುವಂತೆ ಸೆಬಿ ಫ್ಯೂಚರ್ ಗ್ರೂಪ್‌ಗೆ ಸೂಚಿಸಿದೆ ಎಂದು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ತನ್ನ ವೀಕ್ಷಣೆಯಲ್ಲಿ ತಿಳಿಸಿದೆ.

SEBI
SEBI

By

Published : Jan 21, 2021, 1:24 PM IST

ನವದೆಹಲಿ: ರಿಲಯನ್ಸ್‌ಗೆ ಫ್ಯೂಚರ್ ಗ್ರೂಪ್‌ನ ವ್ಯವಸ್ಥೆ ಮತ್ತು ಆಸ್ತಿ ಮಾರಾಟ ಯೋಜನೆಗೆ ಮಾರುಕಟ್ಟೆ ನಿಯಂತ್ರಕ ಸೆಬಿ ಹಸಿರು ನಿಶಾನೆ ತೋರಿದ್ದು, ಇದರ ಆಧಾರದ ಮೇಲೆ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ 24,713 ಕೋಟಿ ರೂ. ಒಪ್ಪಂದಕ್ಕೆ ತನ್ನ "ಪ್ರತಿಕೂಲ ಅವಲೋಕನವಿಲ್ಲ" ಎಂಬ ವರದಿ ನೀಡಿದೆ.

ಅಮೆಜಾನ್​ ಸೆಬಿ ಮತ್ತು ಇತರ ನಿಯಂತ್ರಕರಿಗೆ ಹಲವು ಪತ್ರಗಳನ್ನು ಬರೆದು, ಒಪ್ಪಂದದ ಬಗ್ಗೆ ತಮ್ಮ ಪರಿಶೀಲನೆ ಸ್ಥಗಿತಗೊಳಿಸುವಂತೆ ಮತ್ತು ಈ ವಿಚಾರಣೆಯು ದೆಹಲಿ ಹೈಕೋರ್ಟ್‌ನಲ್ಲಿ ಇರುವುದರಿಂದ ಯಾವುದೇ ಆಕ್ಷೇಪಣೆ ಪ್ರಮಾಣೀಕರಣ ನೀಡದಂತೆ ಕೇಳಿಕೊಂಡಿತ್ತು.

ಇದನ್ನೂ ಓದಿ: ಐತಿಹಾಸಿಕ ಅರ್ಧ ಲಕ್ಷಕ್ಕೇರಿದ ಸೆನ್ಸೆಕ್ಸ್​: ಈ ನಾಗಾಲೋಟದ ರಹಸ್ಯವೇನು ಗೊತ್ತೇ?

ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್​​ಚೇಂಜ್​ ಬೋರ್ಡ್ ಆಫ್ ಇಂಡಿಯಾ ಕಳೆದ ಆಗಸ್ಟ್​ನಲ್ಲಿ ಘೋಷಿಸಿದ ಐದು ತಿಂಗಳ ನಂತರ ಕೆಲವು ಸವಾಲುಗಳೊಂದಿಗೆ ಒಪ್ಪಂದಕ್ಕೆ ಅವಕಾಶ ನೀಡಿತ್ತು.

ಷೇರುದಾರರನ್ನು ಅಥವಾ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಅನುಮೋದನೆ ಕೋರುವಾಗ, ದೆಹಲಿ ಹೈಕೋರ್ಟ್‌ನ ಮುಂದೆ ಬಾಕಿ ಇರುವ ದಾವೆ ಮತ್ತು ಅಮೆಜಾನ್ ಒಪ್ಪಂದಕ್ಕೆ ಸ್ಪರ್ಧಿಸುವ ಮಧ್ಯಸ್ಥಿಕೆ ವಿಚಾರಣೆಯನ್ನು ನಿರ್ದಿಷ್ಟವಾಗಿ ನಮೂದಿಸುವಂತೆ ಸೆಬಿ ಫ್ಯೂಚರ್ ಗ್ರೂಪ್‌ಗೆ ಸೂಚಿಸಿದೆ ಎಂದು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ತನ್ನ ವೀಕ್ಷಣೆಯಲ್ಲಿ ತಿಳಿಸಿದೆ.

ಕರಡು ಯೋಜನೆಯ ವಿರುದ್ಧ ಕೆಲವು ದಾವೆಗಳು, ಮಧ್ಯಸ್ಥಿಕೆ, ಕಾನೂನು ಕ್ರಮಗಳು ನಡೆಯುತ್ತಿವೆ ಎಂಬುದನ್ನು ಗಮನಕ್ಕೆ ಬಂದಿದೆ. ಇದರ ದೃಷ್ಟಿಯಿಂದ ಕರಡು ಯೋಜನೆ ಕುರಿತು ಸೆಬಿಯ ಪ್ರತಿಕ್ರಿಯೆ ಸೂಕ್ತವಲ್ಲ ಎಂದು ಹೇಳಿದೆ.

ABOUT THE AUTHOR

...view details