ನವದೆಹಲಿ: ಸಾಲದಿಂದ ಬಳಲುತ್ತಿರುವ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಗ್ರೂಪ್‌ನ ಭಾಗವಾದ ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್ನ (ಆರ್‌ಸಿಎಲ್) ಅಂಗಸಂಸ್ಥೆ ಖರೀದಿಗೆ ಎಸ್‌ಬಿಐ ಲೈಫ್ ಸೇರಿ ಹೊಸದಾಗಿ 10 ಬಿಡ್‌ದಾರರು ಮುಂದೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ತಿಂಗಳ ಆರಂಭದಲ್ಲಿ ಡಿಬೆಂಚರ್ ಸಮಿತಿಯು ಆಸಕ್ತಿಯ ಅಭಿವ್ಯಕ್ತಿ (ಇಒಐ) ಸಲ್ಲಿಸಲು ಕೊನೆಯ ದಿನಾಂಕವನ್ನು 2020ರ ಡಿಸೆಂಬರ್ 17ಕ್ಕೆ ವಿಸ್ತರಿಸಿತು. ಈ ಬಳಿಕ ರಿಲಯನ್ಸ್ ಕ್ಯಾಪಿಟಲ್‌ನ ಆಸ್ತಿ ಕೊಳ್ಳಲು 10 ಹೊಸ ಬಿಡ್‌ಗಳು ಬಂದಿದ್ದು, ಒಟ್ಟು ಬಿಡ್‌ಗಳ ಸಂಖ್ಯೆ 70ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: 968 ಅಂಕ ಪಾತಾಳಕ್ಕಿಳಿದು ಮತ್ತೆ ಪುಟ್ಟಿದೆದ್ದ ಸೆನ್ಸೆಕ್ಸ್: ಬ್ರಿಟನ್ ವೈರಸ್ ವಿರುದ್ಧ ಗೂಳಿಗೆ ಆರಂಭಿಕ ಜಯ!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಂಗಸಂಸ್ಥೆ ಎಸ್‌ಬಿಐ ಲೈಫ್ ಸಹ ರಿಲಯನ್ಸ್ ನಿಪ್ಪಾನ್ ಲೈಫ್ ಇನ್ಶುರೆನ್ಸ್‌ನಲ್ಲಿ ರಿಲಯನ್ಸ್ ಕ್ಯಾಪಿಟಲ್‌ನ ಪಾಲು ತೆಗೆದುಕೊಳ್ಳಲು ಆಸಕ್ತಿ ತೋರಿಸಿದೆ.
ಶೇ 49ರಷ್ಟು ಷೇರುಗಳನ್ನು ಹೊಂದಿರುವ ಜಪಾನ್‌ನ ಅತಿದೊಡ್ಡ ಜೀವ ವಿಮೆದಾರ-ನಿಪ್ಪಾನ್ ಲೈಫ್‌ನ ಜಂಟಿ ಉದ್ಯಮವಾದ ರಿಲಯನ್ಸ್ ನಿಪ್ಪಾನ್ ಲೈಫ್ ಇನ್ಶುರೆನ್ಸ್ ಕಂಪನಿಯು 2020ರ ಸೆಪ್ಟೆಂಬರ್ 30ರ ವೇಳೆಗೆ 1,196 ಕೋಟಿ ರೂ.ಯಷ್ಟು ಹೂಡಿಕೆ ಮಾಡಿತ್ತು. ಸೆಪ್ಟೆಂಬರ್ ಅಂತ್ಯದ ವೇಳೆಗೆ 21,912 ಕೋಟಿ ರೂ. ಆಸ್ತಿ ಹೊಂದಿದ್ದ ಜೀವ ವಿಮೆದಾರರ ನಿರ್ವಹಣೆ, 2019-20ರ ಅವಧಿಯಲ್ಲಿ 35 ಕೋಟಿ ರೂ. ಗಳಿಕೆ ಕಂಡಿದೆ.
ಆರ್‌ಸಿಎಲ್‌ನ ಆಸ್ತಿ ಹಣಗಳಿಕೆಯನ್ನು ಡಿಬೆಂಚರ್ ಹೋಲ್ಡರ್‌ಗಳ ಸಮಿತಿ ಮತ್ತು ಡಿಬೆಂಚರ್ ಟ್ರಸ್ಟಿ ವಿಸ್ಟ್ರಾ ಐಟಿಸಿಎಲ್ ಇಂಡಿಯಾ ನೋಡಿಕೊಳ್ಳುತ್ತಿದೆ. ಇದು ಸಂಸ್ಥೆಯ ಒಟ್ಟು ಬಾಕಿ ಸಾಲದ ಶೇ 93ರಷ್ಟು ಹೊಂದಿದೆ. ಕಂಪನಿಯ ಒಟ್ಟು ಬಾಕಿ ಸುಮಾರು 20,000 ಕೋಟಿ ರೂ.ಯಷ್ಟಿದೆ.
ಷೇರು ಮಾರಾಟಕ್ಕಾಗಿ ಇಒಐಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 1 ಆಗಿತ್ತು. ಸಾಲದಾತರಿಗೆ ಸಲಹೆಗಾರರಾದ ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಮತ್ತು ಜೆ ಎಂ ಫೈನಾನ್ಷಿಯಲ್ ಸರ್ವೀಸಸ್ ಒಟ್ಟು 60 ಬಿಡ್‌ಗಳನ್ನು ಸ್ವೀಕರಿಸಿದೆ.
ಆರ್‌ಸಿಎಲ್ ರಿಲಯನ್ಸ್ ಜನರಲ್ ಇನ್ಶುರೆನ್ಸ್, ರಿಲಯನ್ಸ್ ಸೆಕ್ಯುರಿಟೀಸ್, ರಿಲಯನ್ಸ್ ಫೈನಾನ್ಷಿಯಲ್ ಲಿಮಿಟೆಡ್ ಮತ್ತು ರಿಲಯನ್ಸ್ ಅಸೆಟ್ ರೀಕಸ್ಟ್ರಕ್ಷನ್ ಲಿಮಿಟೆಡ್‌ನಲ್ಲಿ ತನ್ನ ಪಾಲಿನ ಎಲ್ಲವನ್ನೂ ಮಾರಾಟ ಮಾಡಲು ಬಿಡ್ಗೆ ಆಹ್ವಾನಿಸಿದೆ.
ರಿಲಯನ್ಸ್ ಸೆಕ್ಯುರಿಟೀಸ್ ಮತ್ತು ರಿಲಯನ್ಸ್ ಫೈನಾನ್ಷಿಯಲ್ ಲಿಮಿಟೆಡ್‌ನಲ್ಲಿ ಶೇ 100ರಷ್ಟು ಪಾಲು ಮಾರಾಟ ಮಾಡುವ ಯೋಜಿಸಿದೆ.