ನವದೆಹಲಿ: ಫಾರ್ಚೂನ್ ಗ್ಲೋಬಲ್ 500 ಪಟ್ಟಿಯಲ್ಲಿ ವಿಶ್ವದ ಅಗ್ರ 100 ಕಂಪನಿಗಳಲ್ಲಿ ಬಿಲಿಯನೇರ್ ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ 10 ಸ್ಥಾನ ಜಿಗಿದಿದೆ.
ಫಾರ್ಚೂನ್ ಮಂಗಳವಾರ ಬಿಡುಗಡೆ ಮಾಡಿದ 2020ರ ಶ್ರೇಯಾಂಕದಲ್ಲಿ ಆಯಿಲ್-ಟು-ಟೆಲಿಕಾಂ ಸಂಘಟನೆಯ ರಿಲಯನ್ಸ್ 96ನೇ ಸ್ಥಾನ ಪಡೆದಿದೆ. ಇದರ ಹೊರತು ಬೇರೆ ಯಾವುದೇ ಭಾರತೀಯ ಕಂಪನಿಗಳು ಅಗ್ರ 100ರ ಒಳಗೆ ಸ್ಥಾನ ಪಡೆದಿಲ್ಲ.
ರಿಲಯನ್ಸ್, 2012ರ ಶ್ರೇಯಾಂಕದಲ್ಲಿ 99ನೇ ಸ್ಥಾನದ ಮುಖೇನ ಅಗ್ರ 100ರಲ್ಲಿ ಸ್ಥಾನ ಪಡೆದಿತ್ತು. ನಂತರದ ವರ್ಷಗಳು ಅಂದರೇ 2016ರಲ್ಲಿ 215ನೇ ಸ್ಥಾನಕ್ಕೆ ಕುಸಿದಿದೆ. ಅಂದಿನಿಂದ ಇದು ಸ್ಥಿರವಾಗಿ ಏರಿಕೆಯಾಗುತ್ತ ಬರುತ್ತಿದೆ.
ಶ್ರೇಯಾಂಕದ ಪ್ರಕಾರ, ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) 2020ರ ರ್ಯಾಂಕಿಂಗ್‌ನಲ್ಲಿ 34 ಸ್ಥಾನ ಇಳಿದು 151ನೇ ಸ್ಥಾನಕ್ಕೆ ತಲುಪಿದೆ. ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ಒಎನ್‌ಜಿಸಿ) 190ನೇ ಸ್ಥಾನದಲ್ಲಿದ್ದು, ಕಳೆದ ವರ್ಷದ ಶ್ರೇಯಾಂಕಕ್ಕಿಂತ 30 ಅಂಕ ಕಡಿಮೆಯಾಗಿದೆ. ದೇಶದ ಅಗ್ರ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) 15 ಶ್ರೇಯಾಂಕ ಜಿಗಿದು 221ನೇ ಸ್ಥಾನಕ್ಕೆ ತಲುಪಿದೆ.